News18 India World Cup 2019

ನಾಳೆ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ: ಹೇಗಿರಲಿದೆ ಕೊಹ್ಲಿ ಪಡೆಯ 11ರ ಬಳಗ?

ಸತತ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು ಬಲಿಷ್ಠ ತಂಡವನ್ನೆ ಕಣಕ್ಕಿಳಿಸಲು ತೀರ್ಮಾನಿಸಿದೆ. ಇತ್ತ ಆಸ್ಟ್ರೇಲಿಯಾ ತಂಡ ಹೊಸ ಹುರುಪಿನೊಂದಿಗೆ ಭಾರತವನ್ನು ಎದುರಿಸಲು ತಯಾರಾಗಿದೆ.

Vinay Bhat | news18
Updated:January 11, 2019, 5:58 PM IST
ನಾಳೆ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ: ಹೇಗಿರಲಿದೆ ಕೊಹ್ಲಿ ಪಡೆಯ 11ರ ಬಳಗ?
ಆ್ಯರೋನ್ ಫಿಂಚ್ ಹಾಗೂ ವಿರಾಟ್ ಕೊಹ್ಲಿ (Pic: Twitter)
Vinay Bhat | news18
Updated: January 11, 2019, 5:58 PM IST
ಸಿಡ್ನಿ: ಆಸ್ಟ್ರೇಲಿಯಾ ಪ್ರವಾದಲ್ಲಿರುವ ಭಾರತ ಕ್ರಿಕೆಟ್ ತಂಡ ನಾಳೆಯಿಂದ ಏಕದಿನ ಪಂದ್ಯ ಆರಂಭಿಸಲಿದೆ. ಈಗಾಗಲೇ ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದು ಬೀಗಿರುವ ಕೊಹ್ಲಿ ಪಡೆ ಸದ್ಯ ಏಕದಿನ ಸರಣಿ ಮೇಲು ಕಣ್ಣಿಟ್ಟಿದೆ.

ಸತತ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು ಬಲಿಷ್ಠ ತಂಡವನ್ನೆ ಕಣಕ್ಕಿಳಿಸಲು ತೀರ್ಮಾನಿಸಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಅಸಭ್ಯವಾಗಿ ಮಾತನಾಡಿದ ಹಿನ್ನಲೆಯಲ್ಲಿ ಕೆ ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಮೊದಲ ಪಂದ್ಯದಿಂದ ಹೊರಗಿಡಲಾಗಿದೆ.

ಉಳಿದಂತೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿ ಕಣಕ್ಕಿಳಿದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ನಾಲ್ಕು-ಐದನೇ ಸ್ಥಾನದಲ್ಲಿ ಅಂಬಟಿ ರಾಯುಡು, ಎಂ ಎಸ್ ಧೋನಿ ಬ್ಯಾಟ್ ಬೀಸುವುದು ಪಕ್ಕ.

ಇದನ್ನೂ ಓದಿ: ಆಸೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಿಂದ ಹಾರ್ದಿಕ್-ರಾಹುಲ್ ಔಟ್

ಆದರೆ, ಆರನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ದಿನೇಶ್ ಕಾರ್ತಿಕ್ ಹಾಗೂ ಕೇಧರ್ ಜಾಧವ್ ಪೈಕಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಕಾದುನೋಡಬೇಕಿದೆ. ಇನ್ನು ಆಲ್ರೌಂಡರ್ ಸ್ಥಾನ ರವೀಂದ್ರ ಜಡೇಜಾ ಉಳಿಸಿಕೊಂಡರೆ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್ ಜೊತೆ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ಮೊಹಮ್ಮದ್ ಶಮಿ ತಮ್ಮ ಕರಾಮಾತ್ತು ತೋರಿಸಲಿದ್ದಾರೆ.

ಇತ್ತ ಆಸ್ಟ್ರೇಲಿಯಾ ತಂಡ ಹೊಸ ಹುರುಪಿನೊಂದಿಗೆ ಭಾರತವನ್ನು ಎದುರಿಸಲು ತಯಾರಾಗಿದ್ದು, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ತೀರ್ಮಾನಿಸಿದೆ.
Loading...

ಇದನ್ನೂ ಓದಿ: 'ಪಂತ್​ರನ್ನು ಹೊಗಳಿ ಈಗಲೇ ಅಟ್ಟಕ್ಕೆ ಏರಿಸಬೇಡಿ' ಎಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

ಈಗಾಗಲೇ ಆಡುವ 11ರ ಬಳಗ ಪ್ರಕಟಿಸಿರುವ ಕಾಂಗರೂ ಪಡೆ ಹಿರಿಯ ಅನುಭವಿ ಬಲಗೈ ವೇಗಿ ಪೀಟರ್ ಸಿಡ್ಲ್​​ ಕಮ್​ಬ್ಯಾಕ್ ಮಾಡಿದ್ದಾರೆ. ನಾಯಕನಾಗಿ ತಂಡವನ್ನು ಆ್ಯರೋನ್ ಫಿಂಚ್ ಮುನ್ನಡೆಸಲಿದ್ದು, ಅಲೆಕ್ಸ್​ ಕ್ಯಾರಿ, ಉಸ್ಮಾನ್ ಖ್ವಾಜಾ, ಶಾನ್ ಮಾರ್ಶ್​​​, ಗ್ಲೆನ್ ಮ್ಯಾಕ್ಸ್​ವೆಲ್​​, ಪೀಟ್​​ ಹ್ಯಾಂಡ್ಸ್​​ಕಾಂಬ್​​ ರಂತಹ ಸ್ಟಾರ್ ಬ್ಯಾಟ್ಸ್​ಮನ್​ ತಂಡದಲ್ಲಿದ್ದಾರೆ.

ವಿಶೇಷ ಎಂದರೆ 1980ರ ದಶಕದಲ್ಲಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಬಳಕೆ ಮಾಡಿದ ಜೆರ್ಸಿಯೊಂದಿಗೆ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ.

 ಒಟ್ಟಾರೆ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಳೆ ಆರಂಭವಾಗಲಿರುವ ಮೊದಲ ಏಕದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಉಭಯ ತಂಡಗಳಿಗೆ ಗೆಲುವು ಮುಖ್ಯವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 7:50 ಕ್ಕೆ ಆರಂಭವಾಗಲಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...