ಭಾರತ vs ಎಸೆಕ್ಸ್​​: ಡ್ರಾದಲ್ಲಿ ಅಂತ್ಯಕಂಡ ಅಭ್ಯಾಸ ಪಂದ್ಯ

news18
Updated:July 27, 2018, 10:00 PM IST
ಭಾರತ vs ಎಸೆಕ್ಸ್​​: ಡ್ರಾದಲ್ಲಿ ಅಂತ್ಯಕಂಡ ಅಭ್ಯಾಸ ಪಂದ್ಯ
news18
Updated: July 27, 2018, 10:00 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನಲ್ಲಿ ನಡೆದ ಭಾರತ ಹಾಗೂ ಎಸೆಕ್ಸ್​ ಕೌಂಟಿ ತಂಡದ ನಡುವಣ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.

ಮೂರನೇ ದಿನವಾದ ಇಂದು ಭಾರತೀಯ ಬೌಲರ್​​ಗಳು ಅತ್ಯುತ್ತಮ ಪ್ರದರ್ಶನ ತೋರಿದರು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 395 ರನ್​ಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಎಸೆಕ್ಸ್​ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 237 ರನ್ ಪೇರಿಸಿತ್ತು. ಮೂರನೇ ಹಾಗೂ ಅಂತಿಮ ದಿನವಾದ ಇಂದು ಆರಂಭದಲ್ಲೇ ಎಸೆಕ್ಸ್​ ವಿಕೆಟ್ ಕಳೆದುಕೊಂಡು ಸಾಗಿತು. ತಂಡದಲ್ಲಿ ಪಾಲ್ ವಾಲ್ಟರ್ 75, ಮಿಚೆಲ್ ಪೆಪ್ಪರ್ 68 ಹಾಗೂ ನಾಯಕ ಟಾಮ್ ವೆಸ್ಟಲೇ 57 ರನ್​ ಗಳಿಸಿ ತಂಡಕ್ಕೆ ನೆರವಾದರು. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲೆ ಎಸೆಕ್ಸ್​ ತಂಡ 8 ವಿಕೆಟ್ ಕಳೆದುಕೊಂಡು ಆಲೌಟ್ ಆಗುವ ಮುನ್ನವೆ 359 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಭಾರತ ಪರ ಉಮೇಶ್ ಯಾದವ್ 4 ಹಾಗೂ ಇಶಾಂತ್ ಶರ್ಮಾ 3 ವಿಕೆಟ್ ಕಿತ್ತು ಮಿಂಚಿದರೆ, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು. 

ಈ ಮೂಲಕ ಭಾರತ 36 ರನ್​ಗಳ ಮುನ್ನಡೆ ಕಾಯ್ದುಕೊಂಡು ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತಕ್ಕೆ ಆರಂಭ ಆಘಾತ ಎದುರಾಯಿತು. ಶಿಖರ್ ಧವನ್ ಶೂನ್ಯಕ್ಕೆ ನಿರ್ಗಮಿಸಿದರೆ, ಚೇತೇಶ್ವರ ಪುಜಾರ 23 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಒಂದಾದ ಕೆ. ಎಲ್. ರಾಹುಲ್(36) ಹಾಗೂ ಅಜಿಂಕ್ಯ ರಹಾನೆ(19) ವಿಕೆಟ್ ಬೀಳದಂತೆ ನೋಡಿಕೊಂಡು ಅಜೇಯರಾಗಿ ಉಳಿದರು. ಅಂತಿಮವಾಗಿ ಕೊನೆಯ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 89 ರನ್​ ಗಳಿಸಿ 125 ರನ್​ಗಳ ಮುನ್ನಡೆ ಪಡೆಯಿತು. ಈ ಸಂದರ್ಭ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಕೊನೆಯ ಸೆಶನ್ ಬಾಕಿ ಇದ್ದರು, ಮಳೆಯಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ರಾಹುಲ್(36) ಹಾಗೂ ರಹಾನೆ(19) ಅಜೇಯರಾಗಿ ಉಳಿದರು.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...