ಫೆಬ್ರವರಿ 9 ರಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ (IND vs AUS) 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಿಸಿಸಿಐ (BCCI) ಮೊದಲ 2 ಪಂದ್ಯಗಳಿಗೆ ತಂಡವನ್ನು ಘೋಷಿಸಿದೆ. ರಿಷಭ್ ಪಂತ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಅವರ ಸ್ಥಾನದಲ್ಲಿ ಇಶಾನ್ ಕಿಶನ್ (Ishan Kishan) ವಿಕೆಟ್ ಕೀಪರ್ ಆಗಿ ಅವಕಾಶ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ಪ್ರಥಮ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎರಡನೇ ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ತಂಡದಲ್ಲಿದ್ದಾರೆ. ಈ ಹಿಂದೆಯೂ ಅವರು ತಂಡದ ಭಾಗವಾಗಿದ್ದರು, ಆದರೆ ಪಂತ್ನಿಂದಾಗಿ ಅವರಿಗೆ ಅವಕಾಶ ಸಿಗಲಿಲ್ಲ. ಈ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ (WTC) ಒಂದು ಭಾಗವಾಗಿದೆ. ಭಾರತ ತಂಡ ಫೈನಲ್ಗೆ ಲಗ್ಗೆ ಇಡಲು ಈ ಸರಣಿಯನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಆದರೆ, ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ.
2 ಟೆಸ್ಟ್ ಪಂದ್ಯಕ್ಕೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.
India’s squad for first 2 Tests vs Australia:
Rohit Sharma (C), KL Rahul (vc), Shubman Gill, C Pujara, V Kohli, S Iyer, KS Bharat (wk), Ishan Kishan (wk), R Ashwin, Axar Patel, Kuldeep Yadav, Ravindra Jadeja, Mohd. Shami, Mohd. Siraj, Umesh Yadav, Jaydev Unadkat, Suryakumar Yadav
— BCCI (@BCCI) January 13, 2023
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹೆಜಲ್ವುಡ್, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಷಾ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಪೀಟರ್ ಹ್ಯಾಂಡ್ಸ್ಕಾಂಬ್.
ಜಡೇಜಾ ತಂಡಕ್ಕೆ ಕಂಬ್ಯಾಕ್:
ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ನಂತರ ಈ ಸರಣಿಯಿಂದ ವಾಪಸಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್ಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇನ್ನೊಂದೆಡೆ ತವರಿನಲ್ಲಿ ಭಾರತ ತಂಡದ ದಾಖಲೆ ಉತ್ತಮವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರಣಿ ಕುತೂಹಲ ಮೂಡಿಸುವ ಸಾಧ್ಯತೆ ಇದೆ. ಭಾರತದ ಸ್ಪಿನ್ನರ್ಗಳಾದ ಅಶ್ವಿನ್, ಅಕ್ಷರ್, ಕುಲದೀಪ್ ಮತ್ತು ಜಡೇಜಾ ಕಾಂಗರೂ ಬ್ಯಾಟ್ಸ್ಮನ್ಗಳನ್ನು ಪರೀಕ್ಷಿಸಲಿದ್ದಾರೆ. ಟೆಸ್ಟ್ನಲ್ಲಿ ಅಶ್ವಿನ್ ಅವರ ದಾಖಲೆ ಅತ್ಯುತ್ತಮವಾಗಿದೆ.
ಇದನ್ನೂ ಓದಿ: IND vs NZ: ಒಂದು ತಿಂಗಳಲ್ಲಿ 2 ಮಹತ್ವದ ಸರಣಿ, ನ್ಯೂಜಿಲ್ಯಾಂಡ್-ಆಸ್ಟ್ರೇಲಿಯಾ ಸಿರೀಸ್ ಸಂಪೂರ್ಣ ವೇಳಾಪಟ್ಟಿ
WTC ರೇಸ್ನಲ್ಲಿ ಭಾರತ:
ಆಸ್ಟ್ರೇಲಿಯಾ ತಂಡದ ದಾಖಲೆ ಭಾರತದಲ್ಲಿ ವಿಶೇಷವೇನಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಟೇಬಲ್ ಬಗ್ಗೆ ಮಾತನಾಡುತ್ತಾ, ಕಾಂಗರೂ ತಂಡ ಪ್ರಸ್ತುತ ನಂಬರ್ ಒನ್ ಸ್ಥಾನದಲ್ಲಿದೆ. ಮತ್ತೊಂದೆಡೆ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಜೂನ್ನಲ್ಲಿ ಇಬ್ಬರ ನಡುವೆ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದು ಚಾಂಪಿಯನ್ಶಿಪ್ನ ಎರಡನೇ ಋತುವಾಗಿದೆ. ಮೊದಲ ಸೀಸನ್ ನಲ್ಲೂ ಭಾರತ ತಂಡ ಪ್ರಶಸ್ತಿ ಸುತ್ತು ತಲುಪಿದ್ದರೂ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ