ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿ ಗೆದ್ದ ಬಳಿಕ ದಾಖಲೆ ಬರೆದ ಟೀಂ ಇಂಡಿಯಾ

news18
Updated:July 9, 2018, 3:16 PM IST
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿ ಗೆದ್ದ ಬಳಿಕ ದಾಖಲೆ ಬರೆದ ಟೀಂ ಇಂಡಿಯಾ
news18
Updated: July 9, 2018, 3:16 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್​ನ ಬ್ರಿಸ್ಟೋಲ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ನಿರ್ಣಾಯಕ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅಮೋಘ ಪ್ರದರ್ಶನದ ಫಲದಿಂದ ಕೊಹ್ಲಿ ಪಡೆ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ ಸತತ 6 ಟಿ-20 ಸರಣಿ ಗೆದ್ದ ದಾಖಲೆ ಬರೆದಿದೆ.

ಈ ಹಿಂದೆ ಭಾರತ ತಂಡ ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ನಿಡಾಹಾಸ್ ತ್ರೀಕೋನ ಸರಣಿ, ಮೊನ್ನೆ ತಾನೆ ನಡೆದ ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಇಂಗ್ಲೆಂಡ್ ಜೊತೆಗಿನ ಪಂದ್ಯ ಗೆದ್ದು 6 ಟಿ-20 ಸರಣಿ ಗೆದ್ದ ಸಾಧನೆ ಮಾಡಿದೆ. ಜೊತೆಗೆ ನಿನ್ನೆಯ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 30ಕ್ಕೂ ಅಧಿಕ ರನ್ ಗಳಿಸಿ, 4 ವಿಕೆಟ್ ಪಡೆದ 7ನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಅಲ್ಲದೆ ಎಂ. ಎಸ್. ಧೊನಿ ಅವರು ಸಹ 5 ಕ್ಯಾಚ್ ಪಡೆಯುವ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ. ಒಂದೇ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ಧೋನಿ ಈಗ ಮೊದಲಿಗರಾಗಿದ್ದಾರೆ.ಅಷ್ಟೇ ಅಲ್ಲದೆ ನಿನ್ನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತ್ತು. ಭಾರತ 18.4 ಓವರ್​​ನಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗೆಲುವು ಕಂಡಿತ್ತು. ಈ ಮೂಲಕ ಟೀಂ ಇಂಡಿಯಾ ಇಂಗ್ಲೆಂಡ್ ಎದುರು ಇದೇ ಮೊದಲ ಬಾರಿ ದೊಡ್ಡ ಮೊತ್ತದ ಚೇಸಿಂಗ್ ಮಾಡಿಯು ದಾಖಲೆ ಬರೆದಿದೆ.
Loading...

ಇನ್ನು ಅಂತರಾಷ್ಟ್ರೀಯಾ ಕ್ರಿಕೆಟ್ ಮಂಡಳಿ(ICC) ಟಿ-20 ಬ್ಯಾಟ್ಸ್​​ಮನ್​ಗಳ ಯ್ಯಾಂಕಿಂಗ್ ಪ್ರಕಟಿಸಿದ್ದು, ಭಾರತದ ಕೆ. ಎಲ್. ರಾಹುಲ್ ಅವರು 3ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ರಾಹುಲ್ ಅವರು ಅಜೇಯ 101 ರನ್ ಸಿಡಿಸಿ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ಫಖರ್ ಜಮಾನ್ ಹಾಗೂ ಮೂರನೇ ಸ್ಥಾನದಲ್ಲಿ ಕನ್ನಡಿಗ ಕೆ. ಎಲ್. ರಾಹುಲ್ ಸ್ಥಾನ ಪಡೆದುಕೊಂಡಿದ್ದಾರೆ.

ಒಟ್ಟಾರೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 2-1 ಅಂತರದ ಜಯ ಸಾಧಿಸಿ ಆಂಗ್ಲರ ನೆಲದಲ್ಲಿ ಶುಭಾರಂಭ ಮಾಡಿದೆ. ಸದ್ಯ ಬರುವ ಗುರುವಾರದಿಂದ ಆರಂಭವಾಗುವ ಏಕದಿನ ಸರಣಿ ಮೇಲೆ ಉಭಯ ತಂಡಗಳು ಕಣ್ಣಿರಿಸಿದೆ.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...