ಏಷ್ಯನ್ ಗೇಮ್ಸ್​ನಲ್ಲಿ ದಾಖಲೆ ನಿರ್ಮಿಸಿದ ಹಿಮಾ ದಾಸ್: 8ನೇ ದಿನ 8 ಪದಕ ಬಾಜಿಕೊಂಡ ಭಾರತ

news18
Updated:August 26, 2018, 8:20 PM IST
ಏಷ್ಯನ್ ಗೇಮ್ಸ್​ನಲ್ಲಿ ದಾಖಲೆ ನಿರ್ಮಿಸಿದ ಹಿಮಾ ದಾಸ್: 8ನೇ ದಿನ 8 ಪದಕ ಬಾಜಿಕೊಂಡ ಭಾರತ
news18
Updated: August 26, 2018, 8:20 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಬರವಸೆಯ ಕ್ರೀಡಾಪಟು ಹಿಮಾ ದಾಸ್ ಅವರು ಬೆಳ್ಳ ಪದಕಕ್ಕೆ ಕೊರಳೊಡ್ಡಿದ್ದಾರೆ. ಜೊತೆಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ಮಹಿಳೆಯರ 400 ಮೀ. ಓಟದ ಸ್ಪರ್ಧೆಯ ಫೈನಲ್​​​ನಲ್ಲಿ ಹಿಮಾ ದಾಸ್ ಅವರು 50.79 ಸೆಕೆಂಡ್​ಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು. ಈ ಹಿಂದೆ 51 ಸೆಕೆಂಡ್​​ನಲ್ಲಿ ಗುರಿ ತಲುಪಿದ ದಾಖಲೆಯಿತ್ತು. ಸದ್ಯ ಈ ಸಾಧನೆಯನ್ನು ಮುರಿದಿರುವ ಹಿಮಾ ಅವರು 50.79 ಸೆಕೆಂಡ್​ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯಾ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದು, ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ. ಅಂತೆಯೆ ಮಹಿಳೆಯರ 100 ಮೀಟರ್ ಓಟದಲ್ಲಿ ದ್ಯುತಿ ಚಾಂದ್ ಅವರು 11.32 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಇನ್ನು ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಮೊಹಮ್ಮದ್ ಅನಸ್ ಅವರು ಕೂಡ ಬೆಳ್ಳಿ ತಮ್ಮದಾಗಿಸಿದ್ದಾರೆ. 45.69 ಸೆಕೆಂಡ್​ಗಳಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದುಕೊಂಡರು. ಇದರ ಜೊತೆಗೆ ಪುರುಷರ 10 ಸಾವಿರ ಮೀ. ಓಟದಲ್ಲಿ ಲಕ್ಷ್ಮಣ್ ಗೋವಿಂದನ್ ಕಂಚಿನ ಪದಕ ಗೆದ್ದಿದ್ದಾರೆ. 24:44:91 ಸಮಯದಲ್ಲಿ ಲಕ್ಷ್ಮಣ್ ಗುರಿ ಮುಟ್ಟಿದ್ದಾರೆ.

ಭಾರತ 7 ಚಿನ್ನದ ಪದಕ, 10 ಬೆಳ್ಳಿ ಪದಕ ಹಾಗೂ 20 ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 37 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ