ಏಷ್ಯನ್ ಗೇಮ್ಸ್ 2018: 800 ಮೀ. ಓಟದಲ್ಲಿ ಭಾರತಕ್ಕೆ ಚಿನ್ನ: ಮಿಶ್ರ ರಿಲೇಯಲ್ಲಿ ಬೆಳ್ಳಿ

news18
Updated:August 28, 2018, 7:39 PM IST
ಏಷ್ಯನ್ ಗೇಮ್ಸ್ 2018: 800 ಮೀ. ಓಟದಲ್ಲಿ ಭಾರತಕ್ಕೆ ಚಿನ್ನ: ಮಿಶ್ರ ರಿಲೇಯಲ್ಲಿ ಬೆಳ್ಳಿ
ತನ್ನ ಟ್ವಿಟ್ಟರ್ ಮೂಲಕ ಈ ಬಗ್ಗೆ ತಿಳಿಸಿರುವ ಹಿಮಾದಾಸ್, ಎಲ್ಲರೂ ಒಟ್ಟಾಗಿ ನಿಂತು ನಿರ್ಗತಿಕರನ್ನು ಬೆಂಬಲಿಸುವ ಸಮಯ ಇದಾಗಿದೆ. ಆದ್ದರಿಂದ, ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ತನ್ನ ಒಂದು ತಿಂಗಳ ಸಂಬಳವನ್ನು ನೀಡಲು ನಿರ್ಧರಿಸಿರುವುದಾಗಿ ಬರೆದಿದ್ದಾರೆ
  • News18
  • Last Updated: August 28, 2018, 7:39 PM IST
  • Share this:
ನ್ಯೂಸ್ 18 ಕನ್ನಡ

ಜಕಾರ್ತಾ (ಆ. 28): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನ ಪುರುಷರ 800 ಮೀ. ಓಟದ ಸ್ಪರ್ಧೆಯ ಫೈನಲ್​​ನಲ್ಲಿ ಭಾರತದ ಮಂಜಿತ್ ಸಿಂಗ್ ಅವರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಅಂತೆಯೆ ಇದೇ ರೇಸ್​​ನಲ್ಲಿ ಭಾರತದ ಜಿನ್ಸನ್ ಜಾನ್ಸನ್ ಅವರು ಎರಡನೇ ಸ್ಥಾನ ತಲುಪಿ ಬೆಳ್ಳಿ ಪದಕ ತಮ್ಮದಾಗಿಸಿದ್ದಾರೆ.

ಬಳಿಕ 4*400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕ ತನ್ನದಾಗಿಸಿದೆ. ಭರವಸೆಯ ಆಟಗಾರ್ತಿ ಹಿಮಾ ದಾಸ್, ಕನ್ನಡತಿ ಎಂ ಆರ್ ಪೂವಮ್ಮ, ಅರೋಕಿಯಾ ಅವರು ಎರಡನೇ ಸ್ಥಾನ ತಲುಪಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

800 ಮೀ. ಓಟದಲ್ಲಿ ಮಂಜಿತ್ ಅವರು 1:46:15 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಮೊದಲನೇ ಸ್ಥಾನ ಅಲಂಕರಿಸಿದರೆ, ಜಿನ್ಸನ್ ಅವರು 1:46:35 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ತಲುಪಿದರು. ಈ ಮೂಲಕ ಪುರುಷರ 800 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಕ್ರೀಡಾಪಟುಗಳಿಗೆ ಪದಕ ದಕ್ಕಿದೆ.

ಅಂತೆಯೆ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ದ್ಯುತಿ ಚಂದ್ ಅವರು 23 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ.  ಆದರೆ ಹಿಮಾ ದಾಸ್ ಅವರು ಫಾಲ್ ಮಾಡಿರುವುದರಿಂದ ಹಿನ್ನಡೆಯಾಗಿದೆ. ಇನ್ನು ಪುರುಷರ ಹಾಕಿ ಎ ಗುಂಪಿನ ಅಂತಿಮ ಲೀಗ್​ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 20-0 ಅಂತರದಲ್ಲಿ ಗೆದ್ದು ಸೆಮಿಫೈನಲ್​​​ಗೆ ಕಾಲಿಟ್ಟಿದೆ.

ಭಾರತ 9 ಚಿನ್ನದ ಪದಕ, 18 ಬೆಳ್ಳಿ ಪದಕ ಹಾಗೂ 22 ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 49 ಪದಕದೊಂದಿಗೆ 8ನೇ ಸ್ಥಾನದಲ್ಲಿದೆ.
First published: August 28, 2018, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading