ಐಎಸ್​​ಎಸ್​ಎಫ್​​ ವಿಶ್ವಚಾಂಪಿಯನ್ ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಅಂಕುರ್ ಮಿತ್ತಲ್

news18
Updated:September 8, 2018, 7:28 PM IST
ಐಎಸ್​​ಎಸ್​ಎಫ್​​ ವಿಶ್ವಚಾಂಪಿಯನ್ ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಅಂಕುರ್ ಮಿತ್ತಲ್
  • News18
  • Last Updated: September 8, 2018, 7:28 PM IST
  • Share this:
ನ್ಯೂಸ್ 18 ಕನ್ನಡ

ದಕ್ಷಿಣ ಕೊರಿಯಾದ ಚಾಂಗ್​​ವೊನ್​​ನಲ್ಲಿ ನಡೆಯುತ್ತಿರುವ ಐಎಸ್​​ಎಸ್​ಎಫ್​​ ವಿಶ್ವಚಾಂಪಿಯನ್ ಶಿಪ್​​ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದೆ.

ಇಂದು ವಿಶ್ವ ಶೂಟಿಂಗ್ ಚಾಂಪಿಯನ್​​​ಶಿಪ್​​ನಲ್ಲಿ ಭಾರತದ ಅಂಕುರ್ ಮಿತ್ತಲ್ ಅವರು ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಚೀನಾದ ಯಿಯಾಂಗ್ ಹಾಗೂ ಸ್ಲೊವೇಕಿಯಾದ ಹಬರ್ಟ್​ ಆಂಡ್ರೆಜ್ ಅವರು ತಲಾ 140 ಸ್ಕೋರ್ ಕಲೆ ಹಾಕಿದ ಕಾರಣ ಶೂಟ್ ಆಫ್ ಮೊರೆ ಹೋಗಲಾಯಿತು. ಇದರಲ್ಲಿ ಅಂಕುರ್ ಅವರು 4-3ರಿಂದ ಯಾಂಗ್​ರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಸದ್ಯ ಐಎಸ್​​ಎಸ್​ಎಫ್​​ ವಿಶ್ವಚಾಂಪಿಯನ್ ಶಿಪ್​​ನಲ್ಲಿ ಭಾರತ ಏಳನೇ ದಿನದ ಅಂತ್ಯಕ್ಕೆ ತಲಾ 7 ಚಿನ್ನದ ಜೊತೆ ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿ ಒಟ್ಟು 20 ಪದಕ ಗೆದ್ದುಕೊಂಡಿದೆ.
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading