ಆಸೀಸ್ ವಿರುದ್ಧ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ರೋಹಿತ್-ಅಶ್ವಿನ್ ಅಲಭ್ಯ

ಮೊದಲ ಟೆಸ್ಟ್​​ನಲ್ಲಿ ಸ್ಟಾರ್ ಬೌಲರ್ ಆಗಿದ್ದ ಮಿಂಚಿದ್ದ ಆರ್. ಅಶ್ವಿನ್ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಇವರ ಜೊತೆ ರೋಹಿತ್ ಶರ್ಮಾ ಕೂಡ ಅಲಭ್ಯರಾಗಿದ್ದಾರೆ.

Vinay Bhat | news18
Updated:December 13, 2018, 11:42 AM IST
ಆಸೀಸ್ ವಿರುದ್ಧ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ರೋಹಿತ್-ಅಶ್ವಿನ್ ಅಲಭ್ಯ
ಟೀಂ ಇಂಡಿಯಾ
  • News18
  • Last Updated: December 13, 2018, 11:42 AM IST
  • Share this:
ಪರ್ತ್​​ (ಡಿ. 13): ಇಲ್ಲಿ ನಾಳೆಯಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​ಗೆ ಬಿಸಿಸಿಐ 13 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ.

ಮೊದಲ ಟೆಸ್ಟ್​​ನಲ್ಲಿ ಸ್ಟಾರ್ ಬೌಲರ್ ಆಗಿದ್ದ ಮಿಂಚಿದ್ದ ಆರ್. ಅಶ್ವಿನ್ ಎರಡನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಇವರ ಜೊತೆ ರೋಹಿತ್ ಶರ್ಮಾ ಕೂಡ ಅಲಭ್ಯರಾಗಿದ್ದಾರೆ. ಅಶ್ವಿನ್ ಅವರಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರೋಹಿತ್ ಅವರಿಗೆ ಮೊದಲ ಟೆಸ್ಟ್​ ಪಂದ್ಯದವೇಳೆ ಫೀಲ್ಡಿಂಗ್ ಮಾಡುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದರಿಂದ ಗುಣಮುಖರಾಗದ ಕಾರಣ ಇಬ್ಬರೂ ಎರಡನೇ ಟೆಸ್ಟ್​​ನಿಂದ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ನಲ್ಲಿ ಇನ್ಮುಂದೆ ನೋ ಟಾಸ್: ನಾಣ್ಯದ ಬದಲು ಮತ್ತೇನು..?

ಇತ್ತ ಎರಡನೇ ಟೆಸ್ಟ್​​ಗೆ ಲಭ್ಯರಿರುತ್ತಾರೆ ಎಂಬಂತಿದ್ದ ಪೃಥ್ವಿ ಶಾ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಕಾಲು ನೋವಿನ ಗಾಯ ಇನ್ನೂ ಕೂಡ ಕಡಿಮೆಯಾಗದ ಕಾರಣ ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪ್ರಮುಖ ಬೌಲರ್ – ಬ್ಯಾಟ್ಸ್​ಮನ್​ ತಂಡದಿಂದ ಹೊರ ಬಿದ್ದಿರುವುದು ಭಾರತಕ್ಕೆ ಭಾರೀ ಹಿನ್ನಡೆಯಾಗಿದೆ. ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಅಥವಾ ಕುಲ್​​ದೀಪ್ ಯಾದವ್ ಕಣಕ್ಕಿಳಿಯಲಿದ್ದಾರೆ. ಅಂತೆಯೆ ರೋಹಿತ್ ಶರ್ಮಾ ಬದಲು ಹನುಮ ವಿಹಾರಿ ಆಡುವುದು ಪಕ್ಕಾ ಆಗಿದೆ.

ಬಿಸಿಸಿಐ ಪ್ರಕಟಿಸಿರುವ 13 ಜನರ ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ. ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪ-ನಾಯಕ), ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್.

 


First published:December 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ