• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಎಎಫ್​ಸಿ ಅಂಡರ್-16 ಫುಟ್ಬಾಲ್: ತುರ್ಕ್​ಮೆನಿಸ್ತಾನ್ ವಿರುದ್ಧ ಭಾರತಕ್ಕೆ 5-0 ಗೆಲುವು

ಎಎಫ್​ಸಿ ಅಂಡರ್-16 ಫುಟ್ಬಾಲ್: ತುರ್ಕ್​ಮೆನಿಸ್ತಾನ್ ವಿರುದ್ಧ ಭಾರತಕ್ಕೆ 5-0 ಗೆಲುವು

ಭಾರತದ ಅಂಡರ್-16 ಫುಟ್ಬಾಲ್ ತಂಡದ ಆಟಗಾರರು

ಭಾರತದ ಅಂಡರ್-16 ಫುಟ್ಬಾಲ್ ತಂಡದ ಆಟಗಾರರು

ಅರ್ಹತಾ ಹಂತದ ಟೂರ್ನಿಯಲ್ಲಿ ಬಿ ಗುಂಪಿನಲ್ಲಿರುವ ಭಾರತಕ್ಕೆ ಉಜ್ಬೆಕಿಸ್ತಾನ್ ಮತ್ತು ಬಹರೇನ್ ತಂಡಗಳು ಪ್ರಬಲ ಸವಾಲು ಒಡ್ಡುವ ನಿರೀಕ್ಷೆ ಇದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದವರು ಪ್ರಧಾನ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ.

  • News18
  • 4-MIN READ
  • Last Updated :
  • Share this:

ಉಜ್ಬೆಕಿಸ್ತಾನ್(ಸೆ. 18): ಎಎಫ್​ಸಿ ಅಂಡರ್-16 ಫುಟ್ಬಾಲ್ ಚಾಂಪಿಯನ್​ಶಿಪ್​ನ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಭರ್ಜರಿ ಆರಂಭ ಪಡೆಯಿತು. ಬಿ ಗುಂಪಿನ ಪಂದ್ಯದಲ್ಲಿ ತುರ್ಕ್​ಮೆನಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತೀಯ ಹುಡುಗರು 5-0 ಗೋಲುಗಳಿಂದ ಗೆಲುವು ಪಡೆದಿದ್ದಾರೆ.

ಟಾಷ್ಕೆಂಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ 16 ವರ್ಷದೊಳಗಿನವರ ತಂಡವು ನಿರೀಕ್ಷೆಮೀರಿ ಸುಲಭ ಜಯ ಸಂಪಾದಿಸಿತು. ಹ್ಯಾಟ್ರಿಕ್ ಗೋಲು ಭಾರಿಸಿದ ಭಾರತದ ಸಿದ್ಧಾರ್ಥ್ ಪಂದ್ಯದ ಸ್ಟಾರ್ ಎನಿಸಿದರು. 24, 41, 90ನೇ ನಿಮಿಷದಲ್ಲಿ ಸಿದ್ಧಾರ್ಥ್ ಗೋಲು ಗಳಿಸಿದರು. ಉಳಿದೆರಡು ಗೋಲುಗಳನ್ನು ಟೈಸನ್ ಸಿಂಗ್ (52ನೇ ನಿಮಿಷ) ಮತ್ತು ಹಿಮಾಂಶು ಝಾಂಗ್ರ (88ನೇ ನಿಮಿಷ) ಗಳಿಸಿದರು.



ಇದನ್ನೂ ಓದಿ: ಕತಾರ್ ಎದುರು ಭಾರತದ ವೀರೋಚಿತ ಪ್ರದರ್ಶನ: ಭಾರತೀಯ ಫುಟ್ಬಾಲ್​ಗೆ ಇಗೋರ್ ಸ್ಟಿಮಾಚ್ ಹೊಸ ಹೀರೋ

ಏಷ್ಯಾದ ಒಟ್ಟು 47 ತಂಡಗಳು ಈ ಅರ್ಹತಾ ಟೂರ್ನಿಯಲ್ಲಿ ಸೆಣಸಾಡುತ್ತಿವೆ. ಒಟ್ಟು 10 ಗುಂಪುಗಳನ್ನ ರಚಿಸಲಾಗಿದ್ದು ಭಾರತವು ಬಿ ಗುಂಪಿನಲ್ಲಿದೆ. ಭಾರತ ಮತ್ತು ತುರ್ಕ್​ಮೆನಿಸ್ತಾನದ ಜೊತೆಗೆ ಆತಿಥೇಯ ಉಜ್ಬೆಕಿಸ್ತಾನ ಮತ್ತು ಬಹರೇನ್ ತಂಡಗಳು ಈ ಗುಂಪಿನಲ್ಲಿವೆ. ಉಜ್ಬೆಕಿಸ್ತಾನ ಮತ್ತು ಬಹರೇನ್ ಎರಡೂ ಕೂಡ ಪ್ರಬಲ ತಂಡಗಳಾಗಿದ್ದು ಭಾರತಕ್ಕೆ ಮುಂದಿನ ಪಂದ್ಯಗಳು ಅತೀವ ಸವಾಲಿನದ್ದಾಗಿದೆ.

ಇದೇ ಸೆ. 20 ಮತ್ತು 22ರಂದು ಭಾರತವು ಬಹರೇನ್ ಮತ್ತು ಉಜ್ಬೆಕಿಸ್ತಾನ ತಂಡಗಳನ್ನು ಎದುರಿಸಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ 2020ರ ಎಎಫ್​ಸಿ ಚಾಂಪಿಯನ್​ಶಿಪ್​ಗೆ ಅರ್ಹತೆ ಗಿಟ್ಟಿಸಲಿದೆ. ಎರಡನೇ ಸ್ಥಾನ ಪಡೆದ ತಂಡ ವಿವಿಧ ಲೆಕ್ಕಾಚಾರಗಳ ಆಧಾರದ ಮೇಲೆ ಪ್ರಧಾನ ಹಂತಕ್ಕೇರುವ ಅವಕಾಶ ಇರುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: