ಏಟಿಗೆ ತಿರುಗೇಟು- ಇಂಗ್ಲೆಂಡ್​ನಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್​ನಿಂದ ಹೊರಬಂದ ಭಾರತ ಹಾಕಿ ತಂಡ

ಭಾರತದಲ್ಲಿ ನಡೆಯುವ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಿಂದ ಇಂಗ್ಲೆಂಡ್ ತಂಡ ಹೊರಬಂದ ಬೆನ್ನಲ್ಲೇ ಇದೀಗ ಭಾರತ ಹಾಕಿ ತಂಡಗಳು ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕಾಮನ್​ವೆಲ್ತ್ ಕ್ರೀಡಾಕೂಟದಿಂದ ಹೊರಬಂದಿವೆ.

ಭಾರತ ಹಾಕಿ ತಂಡ

ಭಾರತ ಹಾಕಿ ತಂಡ

 • News18
 • Last Updated :
 • Share this:
  ನವದೆಹಲಿ: ಕೊರೋನಾ ಕಾರಣದಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಹಗ್ಗ-ಜಗ್ಗಾಟ ಮತ್ತೊಂದು ಹಂತ ತಲುಪಿದೆ. ಇಂಗ್ಲೆಂಡ್ (England) ಮೊಂಡು ಆಟಕ್ಕೆ ಭಾರತ ಬಲವಾದ ತಿರುಗೇಟು ನೀಡಿದೆ. ಮುಂದಿನ ವರ್ಷ ಜುಲೈ-ಆಗಸ್ಟ್ ವೇಳೆಯಲ್ಲಿ ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಂನಲ್ಲಿ ನಡೆಯುವ ಕಾಮನ್‍ವೆಲ್ತ್ ಗೇಮ್ಸ್ (Commonwealth Games) ಗೆ ಭಾರತ ಹಾಕಿ ತಂಡಗಳನ್ನ (Indian Hockey Teams) ಕಳುಹಿಸದಿರಲು ನಿರ್ಧರಿಸಿದೆ. ಇದಕ್ಕೂ ಮೊದಲು ಭಾರತದಲ್ಲಿ ನಡೆಯುವ ಜೂನಿಯರ್ ಹಾಕಿ ವರ್ಲ್ಡ್ ಕಪ್ ಟೂರ್ನಿಯಿಂದ ಇಂಗ್ಲೆಂಡ್ ತನ್ನ ಹೆಸರು ಹಿಂಪಡೆದುಕೊಂಡಿತ್ತು. ಇದೇ ಕಾರಣಕ್ಕೆ ಭಾರತ ಹಾಕಿ ತಂಡವನ್ನು ಕಳುಹಿಸದಿರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

  ಈ ವರ್ಷ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಭುವನೇಶ್ವರದಲ್ಲಿ ಜೂನಿಯರ್ ವರ್ಲ್ಡ್ ಕಪ್ ಹಾಕಿ ಪಂದ್ಯಾವಳಿ ನಡೆಯಲಿವೆ. ಕೊರೊನಾ ಕಾರಣ ನೀಡಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ತಂಡಗಳನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿದ್ದವು. ಇದರ ಬೆನ್ನಲ್ಲೇ ಭಾರತ ಹಾಕಿ ತಂಡ ಕಾಮನ್​ವೆಲ್ತ್ ಕ್ರೀಡಾಕೂಟದಿಂದ ಹಿಂದೆ ಸರಿಯುವ ಮೂಲಕ ತಿರುಗೇಟು ನೀಡಿದೆ ಎಂದು ಹೇಳಲಾಗುತ್ತಿದೆ.

  ಭಾರತದ ಹೇಳಿಕೆ:

  ಇಡೀ ಯುರೋಪ್​ನಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಇಂಗ್ಲೆಂಡ್​ನಲ್ಲಿ ಕೊರೊನಾ (COVID-19 pandemic) ಪ್ರಭಾವ ಹೆಚ್ಚಿದೆ. ಸದ್ಯ ಇಂಗ್ಲೆಂಡ್​ನಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಅಲ್ಲಿಗೆ ತಂಡವನ್ನು ಕಳುಹಿಸೋದು ಸುರಕ್ಷಿತವಲ್ಲ ಎಂದು ಭಾರತ ಹಾಕಿ ಸಂಸ್ಥೆ ಹಾಕಿ ಇಂಡಿಯಾ ತನ್ನ ಹೇಳಿಕೆ ಬಿಡುಗಡೆಗೊಳಿಸಿದೆ. ಇದರ ಜೊತೆಗೆ ಏಷ್ಯನ್ ಗೇಮ್ಸ್ (Asian Games) ಗಳಿಗೆ ಭಾರತ ಮೊದಲ ಆದ್ಯತೆ ನೀಡುತ್ತದೆ. ಏಷ್ಯನ್ ಗೇಮ್ಸ್ ಹಾಕಿ ಟೂರ್ನಿಯು ಪ್ಯಾರಿಸ್‍ನ ಒಲಿಂಪಿಕ್ಸ್ (Paris Olympics) ಕ್ರೀಡಾಕೂಟಕ್ಕೆ ಕ್ವಾಲಿಫೈ ಟೂರ್ನಮೆಂಟ್ ಗಳಾಗಿವೆ. ಇಲ್ಲಿ ಭಾರತದ ತಂಡ ಚಿನ್ನ ಗೆದ್ದರೆ ನೇರವಾಗಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಪ್ರವೇಶ ಪಡೆಯಲಿದೆ. ಕಾಮನ್‍ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳ ನಡುವೆ ಕೇವಲ 32 ದಿನಗಳ ಅಂತರವಿದೆ. ಹಾಗಾಗಿ ಕಾಮನ್‍ವೆಲ್ತ್ ಗೇಮ್ಸ್ ಬದಲಾಗಿ ಭಾರತ ಏಷ್ಯನ್ ಗೇಮ್ಸ್​ಗೆ ತಯಾರಿ ನಡೆಸಲಿದೆ ಎಂದು ಹಾಕಿ ಇಂಡಿಯಾ ಹೇಳಿದೆ.

  ಇದನ್ನೂ ಓದಿ: ಸೂರ್ಯಕುಮಾರ್ ಯಾದವ್, ಇಶಾನ್ ಯಾಕೆ ವಿಫಲರಾಗುತ್ತಿದ್ದಾರೆ? ಕಾರಣ ಬಿಚ್ಚಿಟ್ಟ ಗವಾಸ್ಕರ್

  ಕ್ವಾರಂಟೈನ್ ಅವಧಿಗೆ ಸಂಬಂಧಿಸಿದಂತೆ ಹಗ್ಗ ಜಗ್ಗಾಟ:

  ಕೆಲ ದಿನಗಳ ಹಿಂದೆ ಇಂಗ್ಲೆಂಡ್ ವಿಚಿತ್ರವಾದ ಆದೇಶವನ್ನು ಹೊರಡಿಸಿದೆ. ಭಾರತದಲ್ಲಿ ಕೋವಿಶೀಲ್ಡ್ (Covishield) ಪಡೆದುಕೊಂಡವರನ್ನು ವ್ಯಾಕ್ಸಿನೇಟೆಡ್ ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕಿದೆ. ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ ಇಂಗ್ಲೆಂಡ್ ತಲುಪಿದ ಕೂಡಲೇ 10 ದಿನ ಕ್ವಾರಂಟೈನ್​ನಲ್ಲಿರಬೇಕು ಮತ್ತು ಹೊಸ ಲಸಿಕೆ ಪಡೆದುಕೊಳ್ಳಬೇಕು ಎಂದು ಷರತ್ತು ಹಾಕಿದೆ. ಇಂಗ್ಲೆಂಡ್​ನಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಬೇರೆ ಹೆಸರಿನಲ್ಲಿ ನೀಡಲಾಗುತ್ತಿದೆ. ಹಾಗಾಗಿ ಭಾರತ ಸಹ ಇಂಗ್ಲೆಂಡ್​ನಿಂದ ಆಗಮಿಸುವ ಜನರಿಗೆ 10 ದಿನದ ಕ್ವಾರಂಟೈನ್ ಅವಧಿ ನಿಗದಿಪಡಿಸಿದೆ. ಇಂಗ್ಲೆಂಡ್​ನಿಂದ ಬರುವ ಪ್ರಯಾಣಿಕರು ಭಾರತದಲ್ಲಿ ಕಡ್ಡಾಯವಾಗಿ 10 ದಿನ ಕ್ವಾರಂಟೈನ್​ನಲ್ಲಿರಬೇಕು.

  ಮುಂದೇನಾಗುತ್ತೆ?:

  ಕೊರೊನಾ ಲಸಿಕೆ ಮತ್ತು ಕ್ವಾರಂಟೈನ್ ಕುರಿತು ಭಾರತ ಮತ್ತು ಇಂಗ್ಲೆಂಡ್ ನಡುವೆ ಉಂಟಾಗುತ್ತಿರುವ ಕಲಹ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಬೇರೆ ಆಟಗಳ ಮೇಲೆಯೂ ಪರಿಣಾಮ ಬೀರಬಹುದು. ಮುಂದಿನ ದಿನಗಳಲ್ಲಿ ಇತರೆ ದೇಶಗಳು ಕಾಮನ್‍ವೆಲ್ತ್ ಗೇಮ್ಸ್​ನಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ. ಮುಂದೆ ಈ ಹಗ್ಗ-ಜಗ್ಗಾಟದ ಎಫೆಕ್ಟ್ ಕ್ರಿಕಟ್ ಮೇಲೆಯೂ ಬೀರಬಹುದು. ಈಗಾಗಲೇ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡ ಐದನೇ ಕ್ರಿಕೆಟ್ ಟೆಸ್ಟ್ ಪಂದ್ಯದಿಂದ ಹಿಂದಕ್ಕೆ ಸರಿದು ವಿವಾದಕ್ಕೆ ಕಾರಣವಾಗಿತ್ತು.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: