ಏಷ್ಯನ್ ಗೇಮ್ಸ್​ 2018: ಸ್ಕ್ವಾಶ್​​ನಲ್ಲಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ: ಬಾಕ್ಸಿಂಗ್​​ನಲ್ಲಿ ಕಂಚು

news18
Updated:August 31, 2018, 2:49 PM IST
ಏಷ್ಯನ್ ಗೇಮ್ಸ್​ 2018: ಸ್ಕ್ವಾಶ್​​ನಲ್ಲಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ: ಬಾಕ್ಸಿಂಗ್​​ನಲ್ಲಿ ಕಂಚು
news18
Updated: August 31, 2018, 2:49 PM IST
ನ್ಯೂಸ್ 18 ಕನ್ನಡ

ಜಕಾರ್ತಾ (ಆ. 31): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಈಗಾಗಲೇ 13 ಚಿನ್ನದ ಪದಕ ತನ್ನಗಾಸಿರುವ ಭಾರತ ಈಗ ಮತ್ತೊಂದು ಪದಕದ ಆಸೆ ಮೂಡಿಸಿದೆ.

ಭಾರತದ ಮಹಿಳಾ ಸ್ಕ್ವಾಶ್ ತಂಡ ಮಲೇಷ್ಯಾವನ್ನು ಮಣಿಸಿ ಫೈನಲ್​​ಗೆ ಲಗ್ಗೆ ಇಟ್ಟಿದೆ. ಜೋಷ್ನ ಚಿನ್ನಪ್ಪ, ದೀಪಿಕಾ ಪಿಲ್ಲಿಕಲ್, ಸುನೈನಾ ಕುರುವಿಲ್ಲಾ ಮತ್ತು ತನ್ವಿ ಖನ್ನಾ ಅವರನ್ನು ಒಳಗೊಂಡ ಭಾರತವು ಮಲೇಷ್ಯಾ ವಿರುದ್ಧ 2-0 ಅಂತರದಿಂದ ಗೆಲುವು ಕಂಡಿದೆ. ಈ ಮೂಲಕ ಸ್ಕ್ವಾಶ್​​ನಲ್ಲಿ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಪಕ್ಕಾ ಆಗಿದೆ.

ಇನ್ನು ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು(75 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ವಿಕಾಸ್ ಅವರ ಎಡಗಣ್ಣಿಗೆ ಗಾಯವಾಗಿದ್ದರಿಂದ ಸೆಮೀಸ್​ನಲ್ಲಿ ಸೆಣೆಸಾಡಲು ಸಾಧ್ಯವಿಲ್ಲ ಎಂದು ಹೇಳಿದ ಕಾರಣ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಸತತ ಮೂರು ಪದಕ ಗೆದ್ದ ಭಾರತದ ಏಕೈಕ ಬಾಕ್ಸರ್ ವಿಕಾಸ್ ಆಗಿದ್ದು, ಇತಿಹಾಸ ನಿರ್ಮಿಸಿದ್ದಾರೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ