• Home
  • »
  • News
  • »
  • sports
  • »
  • IND vs THAI Asia Cup 2022: ಥೈಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಫೈನಲ್​ ಪ್ರವೇಶಿಸಿದ ಭಾರತೀಯ ವನಿತೆಯರು

IND vs THAI Asia Cup 2022: ಥೈಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ, ಫೈನಲ್​ ಪ್ರವೇಶಿಸಿದ ಭಾರತೀಯ ವನಿತೆಯರು

ಭಾರತ ವನಿತೆಯರಿಗೆ ಜಯ

ಭಾರತ ವನಿತೆಯರಿಗೆ ಜಯ

IND vs THAI Asia Cup 2022: ಮಹಿಳಾ ಏಷ್ಯಾಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವನಿತೆಯರು (Team India Womens) ಥಾಯ್ಲೆಂಡ್ ಶ್ರೀ(IND vs THAI) ವಿರುದ್ಧ ಭರ್ಜರಿ ಜಯ ದಾಖಲಿಸಿ ಮಹಿಳಾ ಏಷ್ಯಾಕಪ್​ 2022ರ (Womens Asia Cup 2022) ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದೆ.

ಮುಂದೆ ಓದಿ ...
  • Share this:

ಮಹಿಳಾ ಏಷ್ಯಾಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವನಿತೆಯರು (Team India Womens) ಥಾಯ್ಲೆಂಡ್ (IND vs THAI) ವಿರುದ್ಧ ಭರ್ಜರಿ ಜಯ ದಾಖಲಿಸಿ ಮಹಿಳಾ ಏಷ್ಯಾಕಪ್​ 2022ರ (Womens Asia Cup 2022) ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಥೈಲ್ಯಾಂಡ್​ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 74 ರನ್ ಗಳಿಸುವ ಮೂಲಕ 74 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಭಾರತೀಯ ವನಿತೆಯರ ತಂಡವು ಈ ಬಾರಿ ಏಷ್ಯಾಕಪ್​ನಲ್ಲಿ ಅದ್ಧೂರಿಯಾಗಿ ಫೈನಲ್​ ಪ್ರವೇಶಿಸಿದ್ದು, ಕಪ್​ ಗೆಲ್ಲುವ ಉತ್ಸಹದಲ್ಲಿದೆ. ಇಂದಿನ ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಗೆದ್ದ ತಂಡ ಭಾರತದ ಎದುರು ಸೆಣಸಲಿದೆ.


ಭರ್ಜರಿ ಬ್ಯಾಟಿಂಗ್​ ಮಾಡಿದ ಶೆಫಾಲಿ:


ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಭಾರತದ ಪರ ಶೆಫಾಲಿ ವರ್ಮಾ (28 ಎಸೆತಗಳಲ್ಲಿ 42; 5 ಬೌಂಡರಿ, 1 ಸಿಕ್ಸರ್), ಹರ್ಮನ್ ಪ್ರೀತ್ (30 ಎಸೆತಗಳಲ್ಲಿ 36; 4 ಬೌಂಡರಿ) ಮತ್ತು ಜೆಮಿಮಾ ರಾಡ್ರಿಗಸ್ (26 ಎಸೆತಗಳಲ್ಲಿ 27; 3 ಬೌಂಡರಿ) ಮಿಂಚಿದರು. ಸ್ಮೃತಿ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್‌ಗೆ 38 ರನ್ ಗಳಿಸಿದರು. ಆದರೆ ಸ್ಮೃತಿ ಇಂದು ಅಷ್ಟಾಗಿ ಉತ್ತಮ ಬ್ಯಾಟಿಂಗ್​ ಮಾಡಲಿಲ್ಲ. ಸ್ಮತಿ ಕೇವಲ 13 ರನ್ ಗಳಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಶೆಫಾಲಿ ಆಕ್ರಮಣಕಾರಿ ಆಟ ಮುಂದುವರಿಸಿದರು.ಬೌಲಿಂಗ್​ನಲ್ಲಿ ಮಿಂಚಿದ ದೀಪ್ತಿ ಶರ್ಮಾ:


ಇನ್ನು, ಬೌಲರ್ ಸ್ನೇಹಿ ಪಿಚ್‌ ನ ಲಾಭವನ್ನು ಭಾರತ ತಂಡ ಸಂಪೂರ್ಣವಾಗಿ ಬಳಸಿಕೊಂಡಿತು. ಭಾರತ ನೀಡಿದ 148 ರನ್ ಗಳ ಮೊತ್ತ ಬೆನ್ನಟ್ಟಿದ ಥೈಲ್ಯಾಂಡ್​ ತಂಡವು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 74 ರನ್ ಗಳಿಸುವ ಮೂಲಕ 74 ರನ್​ಗಳಿಂದ ಸೋಲನ್ನಪ್ಪಿತು. ಭಾರತದ ಪರ ದೀಪ್ತಿ ಶರ್ಮಾ 4 ಓವರ್​ ಮಾಡಿ 7 ರನ್​ ನೀಡಿ 1 ಓವರ್ ಮೇಡಿನ್ ಮಾಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ 2 ವಿಕೆಟ್ ಮತ್ತು ರಿಂಕು ಸಿಂಗ್, ಸ್ನೇಹ್ ರಾಣಾ ಹಾಗೂ ಶಫಾಲಿ ವರ್ಮಾ ತಲಾ 1 ವಿಕೆಟ್​ ಪಡೆಯುವ ಮೂಲಕ ಥೈಲ್ಯಾಂಡ್​ ವಿರುದ್ಧ ಗೆಲ್ಲುವಲ್ಲಿ ಪ್ರಮುಖರಾದರು.


ಇದನ್ನೂ ಓದಿ: Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!


ಏಷ್ಯಾಕಪ್​ನಲ್ಲಿ ಭಾರತೀಯ ವನಿತೆಯರದ್ದೇ ಮೇಲುಗೈ:


ಇಂದು ಎರಡನೇ ಸೆಮಿಫೈನಲ್ ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಇದೇ ತಿಂಗಳ 15ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಎಲ್ಲಾ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದೆ. 2018ರ ಏಷ್ಯಾಕಪ್ ಹೊರತುಪಡಿಸಿ ಉಳಿದೆಲ್ಲಾ ಟೂರ್ನಿಗಳಲ್ಲಿ ಭಾರತೀಯ ಹುಡುಗಿಯರು ಗೆದ್ದಿದ್ದಾರೆ.

Published by:shrikrishna bhat
First published: