ಮಹಿಳಾ ವಿಶ್ವಕಪ್ ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: ಟೂರ್ನಿಯಿಂದ ಹೊರಕ್ಕೆ

news18
Updated:August 3, 2018, 4:15 PM IST
ಮಹಿಳಾ ವಿಶ್ವಕಪ್ ಹಾಕಿ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: ಟೂರ್ನಿಯಿಂದ ಹೊರಕ್ಕೆ
news18
Updated: August 3, 2018, 4:15 PM IST
ನ್ಯೂಸ್ 18 ಕನ್ನಡ

ಲಂಡನ್ (ಆ. 03): ರಾಣಿ ರಾಮ್​ಪಾಲ್ ನೇತೃತ್ವದ ಭಾರತದ ವನಿತೆಯರ ಹಾಕಿ ತಂಡ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದೆ.

ಐರ್ಲೆಂಡ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್​​ನ ರೋಚಕ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ನಿಗದಿತ ಸಮಯದ ವರೆಗೂ ಉಭಯ ತಂಡಗಳು ಗೋಲು ದಾಖಲಿಸಲು ವಿಫಲರಾದ ಕಾರಣ ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. ಎರಡೂ ತಂಡಗಳು ಪ್ರಬಲ ರಕ್ಷಣಾ ತಂತ್ರ ನಡೆಸಿದ್ದರಿಂಧ ಫಲಿತಾಂಶ ಕುತೂಹಲ ಹುಟ್ಟಿಸಿತ್ತು. ಪೆನಾಲ್ಟಿ ಶೂಟೌಟ್​ನಲ್ಲಿ ಮೊದಲೆರಡು ಅವಕಾಶವನ್ನು ಕೈ ಚೆಲ್ಲಿದ ಐರಿಷ್ ವನಿತೆಯರು, ಮೂರನೇ ಅವಕಾಶದಲ್ಲಿ ಚೆಂಡನ್ನು ನೆಟ್​​ನೊಳಗೆ ಅಟ್ಟುವ ಮೂಲಕ ಗೆಲುವು ಕಂಡಿತು.

ಅಂತಿಮವಾಗಿ ಐರ್ಲೆಂಡ್ 3-1ರ ಅಂತರದಿಂದ ಗೆದ್ದು ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದ್ದು ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ವನಿತೆಯರು ಎಂಟರ ಘಟ್ಟದಲ್ಲೇ ತನ್ನ ಅಭಿಮಾನ ಅಂತ್ಯಗೊಳಿಸಿದೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ