Jhulan Goswami: ಲಾರ್ಡ್ಸ್‌ ಅಂಗಳದಲ್ಲಿ ವಿದಾಯದ ಪಂದ್ಯವಾಡಲಿರುವ ಟೀಂ ಇಂಡಿಯಾದ ಖ್ಯಾತ ಮಹಿಳಾ ಆಟಗಾರ್ತಿ

ಭಾರತ ಮಹಿಳಾ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ (Jhulan Goswami) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಪಕ್ಕಾ ಆಗಿದೆ. ಈ ಕುರಿತು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

ಜೂಲನ್ ಗೋಸ್ವಾಮಿ

ಜೂಲನ್ ಗೋಸ್ವಾಮಿ

  • Share this:
ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು (Indian womens cricket team) ಅನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡ ಸಪ್ಟೆಂಬರ್​ ತಿಂಗಳಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಇದರ ನಡುವೆ ಭಾರತ ಮಹಿಳಾ ತಂಡದ ಅನುಭವಿ ವೇಗಿ ಜೂಲನ್ ಗೋಸ್ವಾಮಿ (Jhulan Goswami) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಪಕ್ಕಾ ಆಗಿದೆ. ಹೌದು, ಇಂಗ್ಲೆಂಡ್​ ವಿರುದ್ಧದ ಏಕದಿನ (ODI) ಸರಣಿಗೆ ಆಯ್ಕೆ ಆಗಿರುವ ಜೂಲನ್ ಗೋಸ್ವಾಮಿ ಅವರು ಅಲ್ಲಿನ ಲಾರ್ಡ್ಸ್ ಮೈದಾನದಲ್ಲಿ ತಮ್ಮ ವಿದಾಯದ ಪಂದ್ಯವನ್ನು ಆಡಲಿದ್ದಾರೆ. ಸೆಪ್ಟೆಂಬರ್ 24ರಂದು ನಡೆಯಲಿರುವ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ವಿದಾಯದ ಪಂದ್ಯವನ್ನು ಗೋಸ್ವಾಮಿ ಆಡಲಿದ್ದಾರೆ. 39 ವರ್ಷದ ಜೂಲನ್ ಗೋಸ್ವಾಮಿ ಅವರು ಭಾರತದ ಪರ ದಶಕಗಳ ಕಾಲ ಆಟವಾಡಿದ್ದು, ಅನೇಕ ಅವಿಸ್ಮರಣೀಯ ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಾರೆ.

 ವಿದಾಯದ ಪಂದ್ಯ ಆಡಲಿರುವ ಜೂಲನ್ ಗೋಸ್ವಾಮಿ:

ಕಳೆದ ದಿನವಷ್ಟೇ ಬಿಸಿಸಿಐ ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ಮಹಿಳಾ ತಂಡವನ್ನು ಆಯ್ಕೆ ಮಾಡಿದೆ. ಅದರಲ್ಲಿಯೂ ಏಕದಿನ ಸರಣಿಗೆ ಜೂಲನ್ ಗೋಸ್ವಾಮಿ ಅವರನ್ನೂ ಆಯ್ಕೆ ಮಾಡಿದೆ. ಇಂಗ್ಲೆಂಡ್​ ನೆಲದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಸರಣಿ ಆಡಲಿದ್ದು, ಅಂತಿಮ ಪಂದ್ಯವು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಅಂದು ಜೂಲನ್ ಗೋಸ್ವಾಮಿ ಅವರು ತಮ್ಮ ವಿದಾಯದ ಪಂದ್ಯವನ್ನು ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ANI ಟ್ವೀಟ್ ಮಾಡಿದೆ.

ಗೋಸ್ವಾಮಿ ಅವರ ಸಾಧನೆ:

ಇನ್ನು, ಜೂಲನ್ ಗೋಸ್ವಾಮಿ ಅವರು ತಮ್ಮ 19ನೇ ವಯಸ್ಸಿನಲ್ಲಿ ಅಂದರೆ 2022ರಲ್ಲಿ ಭಾರತ ಮಹಿಳಾ ತಂಡದಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಅವರು ಸತತವಾಗಿ ಭಾರತದ ಪರ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಅವರು ಭಾರತದ ಪರ ಈವರೆಗೆ 201 ಏಕದಿನ, 12 ಟೆಸ್ಟ್‌ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದಾರೆ. ಇವುಗಳ ಮೂಲಕ ಒಟ್ಟು 352 ವಿಕೆಟ್ ಕಬಳಿಸಿದ್ದಾರೆ. ಒಟ್ಟು 6 ಏಕದಿನ ವಿಶ್ವಕಪ್‌ ಸಹ ಆಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ 252 ವಿಕೆಟ್  ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ:

ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಜೆಮಿಮಾ ರಾಡ್ರಿಗಸ್, ಸ್ನೇಹ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ಶಬ್ಬಿನೇನಿ ಮೇಘನಾ, ತಾನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ರಾಜೇಶ್ವರಿ ಗಾಯಕ್ವಾಡ್, ಡಿ ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ಜೂಲನ್ ಗೋಸ್ವಾಮಿ, ಹರ್ಲೀನ್ ಡಿಯೋಲ್.

ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಜೆಮಿಮಾ ರೋಡ್ರಿಗಸ್, ಸ್ನೇಹ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಧಾ ಯಾದವ್, ಶಬಿನೇನಿ ಮೇಘನಾ, ತಾನಿಯಾ ಭಾಟಿಯಾ, ರಿಚಾ ಘೋಷ್, ರಾಜೇಶ್ವರಿ ಗಾಯಕ್ವಾಡ್, ಡಿ ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ಕಿರಣ್ ನವಗಿರೆ.
Published by:shrikrishna bhat
First published: