ಅಂಡರ್-19 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಭಾರತೀಯ ಕ್ರಿಕೆಟ್ ತಂಡವು ಅಂಡರ್-19 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.  ಪೃಥ್ವಿ ಶಾ ಮತ್ತು ಮನೋಜ್ ಕಾಲ್ರಾ ಅವರ ಅಮೋಘ ಬ್ಯಾಟಿಂಗ್, ಹಾಗೂ ನಾಗರಕೋಟಿ ಮತ್ತು ಮಾವಿಯವರ ಮಾರಕ ವೇಗದ ಬೌಲಿಂಗ್ ಸಹಾಯದಿಂದ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಧೂಳೀಪಟ ಮಾಡಿದು. ಇಂದು ನಡೆದ ಟೂರ್ನಿಯ 7ನೇ ಪಂದ್ಯದಲ್ಲಿ ಭಾರತೀಯ ಕಿರಿಯರು ತಮ್ಮ ಪ್ರಬಲ ಎದುರಾಳಿಗಳನ್ನು 100 ರನ್​ಗಳಿಂದ ಸದೆಬಡಿದರು. ಭಾರತ ತಂಡ ಪೇರಿಸಿದ 328 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಜೂನಿಯರ್ಸ್ 228 ರನ್​ಗೆ ಆಲೌಟ್ ಆದರು.


Updated:January 14, 2018, 4:08 PM IST
ಅಂಡರ್-19 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಭಾರತೀಯ ಕ್ರಿಕೆಟಿಗ ಪೃಥ್ವಿ ಷಾ

Updated: January 14, 2018, 4:08 PM IST
ಮೌಂಟ್ ಮೌಂಗಾನುಯ್, ನ್ಯೂಜಿಲೆಂಡ್(ಜ. 14): ಭಾರತೀಯ ಕ್ರಿಕೆಟ್ ತಂಡವು ಅಂಡರ್-19 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.  ಪೃಥ್ವಿ ಶಾ ಮತ್ತು ಮನೋಜ್ ಕಾಲ್ರಾ ಅವರ ಅಮೋಘ ಬ್ಯಾಟಿಂಗ್, ಹಾಗೂ ನಾಗರಕೋಟಿ ಮತ್ತು ಮಾವಿಯವರ ಮಾರಕ ವೇಗದ ಬೌಲಿಂಗ್ ಸಹಾಯದಿಂದ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಧೂಳೀಪಟ ಮಾಡಿದು. ಇಂದು ನಡೆದ ಟೂರ್ನಿಯ 7ನೇ ಪಂದ್ಯದಲ್ಲಿ ಭಾರತೀಯ ಕಿರಿಯರು ತಮ್ಮ ಪ್ರಬಲ ಎದುರಾಳಿಗಳನ್ನು 100 ರನ್​ಗಳಿಂದ ಸದೆಬಡಿದರು. ಭಾರತ ತಂಡ ಪೇರಿಸಿದ 328 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಜೂನಿಯರ್ಸ್ 228 ರನ್​ಗೆ ಆಲೌಟ್ ಆದರು. ಪಕ್ಕಾ ಬ್ಯಾಟಿಂಗ್ ಟ್ರ್ಯಾಕ್ ಇದ್ದ ಈ ಪಿಚ್​ನಲ್ಲಿ ಪ್ರತಿಭಾನ್ವಿತ ವೇಗಿಗಳಾದ ಶಿವಮ್ ಮಾವಿ ಮತ್ತು ಕಮಲೇಶ್ ನಾಗರಕೋಟಿ ಅವರ ಬೆಂಕಿಯಂತಹ ಎಸೆತಗಳಿಂದ ಕಾಂಗರೂಗಳ ಕಂಗೆಡಿಸಿದರು. ಸ್ಪಿನ್ನಿಂದ ಗೆಲುವು ಸಾಧ್ಯವೆಂದು ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಿದರೂ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದು ಈ ಇಬ್ಬರು ವೇಗಿಗಳೇ. ಗಂಟೆಗೆ 145 ಕಿಮೀಗೂ ಹೆಚ್ಚು ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿದ್ದ ಈ ಇಬ್ಬರ ವೇಗಕ್ಕೆ ಆಸ್ಟ್ರೇಲಿಯಾ ಬ್ಯಾಟುಗಾರರ ಬಳಿ ಹೆಚ್ಚು ಉತ್ತರವೇ ಇರಲಿಲ್ಲ. ಜ್ಯಾಕ್ ಎಡ್ವರ್ಡ್ಸ್, ಜೋನಾಥನ್ ಮೆರ್ಲೋ ಮತ್ತು ಆಲ್ರೌಂಡರ್ ಬಾಕ್ಸ್​ಟರ್ ಹೋಲ್ಟ್ ಅವರನ್ನು ಹೊರತುಪಡಿಸಿ ಉಳಿದ ಆಸ್ಟ್ರೇಲಿಯನ್ನರು ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಗಡಿದಾಟಿದ್ದ ಆಸ್ಟ್ರೇಲಿಯಾ ಗೆಲುವಿನ ಆಸೆ ಇಟ್ಟುಕೊಂಡಿತ್ತಾದರೂ ಮಾವಿ ಬೌಲಿಂಗಿನಲ್ಲಿ ಮೆರ್ಲೋ ನಿರ್ಗಮಿಸಿದ ಬಳಿಕ ಪ್ರತಿರೋಧ ದಿಢೀರ್ ಕಡಿಮೆಯಾಯಿತು. 83 ರನ್ ಅಂತರದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು ಹೀನಾಯ ಸೋಲಪ್ಪಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತೀಯ ಕಿರಿಯರ ಪಡೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪೃಥ್ವಿ ಷಾ ಮತ್ತು ಮನ್​ಜೋತ್ ಕಾಲ್ರಾ ಇಬ್ಬರೂ ಮೊದಲ ವಿಕೆಟ್​ಗೆ ಬರೋಬ್ಬರಿ 180 ರನ್ ಸೇರಿಸಿದರು. ಹಿಂದಿನ ವಿಶ್ವಕಪ್​ನಲ್ಲಿ ಆಡಿದ ಅನುಭವ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಆಡಿದ ಅನುಭವವಿರುವ ಷಾ ಕೇವಲ 6 ರನ್ನಿಂದ ಶತಕ ಮಿಸ್ ಮಾಡಿಕೊಂಡರು. ಕಾಲ್ರಾ 86 ರನ್ ಗಳಿಸಿದರು. ಇವರಿಬ್ಬರು ನಿರ್ಗಮನದ ಬಳಿಕ ಶುಭಮ್ ಗಿಲ್ 63 ರನ್ ಗಳಿಸಿದರು. ಈ ಹಂತದಲ್ಲಿ ಭಾರತ 350 ರನ್ ಗಡಿ ದಾಟುವ ನಿರೀಕ್ಷೆ ಇತ್ತಾದರೂ ಕೆಳ ಕ್ರಮಾಂಕದ ಬ್ಯಾಟುಗಾರರಿಂದ ಹೆಚ್ಚಿನ ರನ್ ಹರಿದುಬರಲಿಲ್ಲ. ಹೀಗಾಗಿ, ಭಾರತದ ಸ್ಕೋರು 328 ರನ್​​ಗೆ ಸೀಮಿತಗೊಂಡಿತು. ಆದರೂ ಆ ಮೊತ್ತವು ಆಸ್ಟ್ರೇಲಿಯಾದ ಹುಡುಗರಿಗೆ ಕಬ್ಬಿಣದ ಕಡಲೆಯಾಗಿಯೇ ಪರಿಣಮಿಸಿತು. ಇದೇ ವೇಳೆ, 100 ಬಾಲ್​ನಲ್ಲಿ 94 ರನ್ ಪೇರಿಸಿದ ನಾಯಕ ಪೃಥ್ವಿ ಷಾ ಪಂದ್ಯಶ್ರೇಷ್ಠ ಗೌರವಕ್ಕೆ ಬಾಜನರಾದರು.

ಪಪುವಾ ವಿರುದ್ಧ ಮುಂದಿನ ಪಂದ್ಯ:
ಟೂರ್ನಿಯಲ್ಲಿ ಬಿ ಗುಂಪಿನಲ್ಲಿರುವ ಭಾರತ ತಂಡವು ಜ. 16ರಂದು ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ದುರ್ಬಲ ಪಪುವಾ ನ್ಯೂಗಿನಿಯಾ ತಂಡವನ್ನು ಎದುರಿಸಲಿದೆ. ಇದೇ ಗ್ರೌಂಡ್​ನಲ್ಲಿ ಪಂದ್ಯ ನಡೆಯಲಿರುವುದರಿಂದ ಟೀಮ್ ಇಂಡಿಯಾದಿಂದ ಇನ್ನೊಂದು ರನ್ ಸುಗ್ಗಿ ನಿರೀಕ್ಷಿಸಬಹುದು. ಜೊತೆಗೆ, ಪಪುವಾ ತಂಡ ತನ್ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲನುಭವಿಸಿದೆ. ಭಾರತೀಯ ಹುಡುಗರಿಗೆ ಈ ತಂಡ ತೀರಾ ಸುಲಭ ತುತ್ತಾಗುವುದು ಖಚಿತವೆನಿಸುತ್ತದೆ.

ಸ್ಕೋರು ವಿವರ:

ಭಾರತ ಅಂಡರ್-19 ತಂಡ 50 ಓವರ್ 328/7
(ಪೃಥ್ವಿ ಷಾ 94, ಮಂಜೋತ್ ಕಾಲ್ರಾ 86, ಶುಭಂ ಗಿಲ್ 63, ಅಭಿಷೇಕ್ ಶರ್ಮಾ 23 ರನ್ – ಜ್ಯಾಕ್ ಎಡ್ವರ್ಡ್ಸ್ 65/4)
Loading...

ಆಸ್ಟ್ರೇಲಿಯಾ ಅಂಡರ್-19 ತಂಡ 42.5 ಓವರ್ 228 ರನ್ ಆಲೌಟ್
(ಜ್ಯಾಕ್ ಎಡ್ವರ್ಡ್ಸ್ 73, ಬಾಕ್ಸ್​ಟನ್ ಹೋಲ್ಟ್ 39, ಜೋನಥನ್ ಮೆರ್ಲೋ 38, ಮ್ಯಾಕ್ಸ್ ಬೈರೆಂಟ್ 29 ರನ್ – ಕಮಲೇಶ್ ನಾಗರಕೋಟಿ 29/3, ಶಿವಮ್ ಮಾವಿ 45/3)
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ