ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರ ಸಂಭಾವನೆ ಎಷ್ಟು ಗೊತ್ತಾ..?

news18
Updated:August 9, 2018, 5:37 PM IST
ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರ ಸಂಭಾವನೆ ಎಷ್ಟು ಗೊತ್ತಾ..?
news18
Updated: August 9, 2018, 5:37 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ಆಯ್ಕೆದಾರರ ಸಮಿತಿಯವರಿಗೆ ಬಂಪರ್ ಬಹುಮಾನ ಸಿಕ್ಕಂತಾಗಿದೆ. ಯಾಕಂದ್ರೆ ಆಯ್ಕೆದಾರರ ಸಂಭಾವನೆಯಲ್ಲಿ ಹೆಚ್ಚಳವಾಗಿದ್ದು, ಇದಕ್ಕೆ ಸುಪ್ರಿಂ ಕೋರ್ಟ್​ ಸಮಿತಿ ಸಿಒಎ ಸಮ್ಮತಿ ಸೂಚಿಸಿದೆ.

ಆಯ್ಕೆದಾರರಿಗೆ 30 ಲಕ್ಷ ರೂ. ಹಾಗೂ ಮುಖ್ಯ ಆಯ್ಕೆದಾರರಿಗೆ 20 ಲಕ್ಷ ರೂ. ಸಂಭಾವನೆಯನ್ನು ಹೆಚ್ಚಳ ಮಾಡಲಾಗಿದೆ. ಮುಖ್ಯ ಆಯ್ಕೆದಾರರಾಗಿರುವ ಎಂಎಸ್​​ಕೆ ಪ್ರಸಾದ್ ಅವರ ವೇತನ 80 ಲಕ್ಷ ರೂ. ವರ್ಷಕ್ಕೆ ಪಡೆಯುತ್ತಿದ್ದು ಸದ್ಯ 20 ಲಕ್ಷ ಹೆಚ್ಚಳ ಮಾಡಿ ವರ್ಷಕ್ಕೆ 1 ಕೋಟಿ ರೂ ಪಡೆಯಲಿದ್ದಾರೆ. ಅಂತೆಯೆ ಉಳಿದ ಇಬ್ಬರು ಆಯ್ಕೆದಾರರ ವೇತನ ವರ್ಷಕ್ಕೆ 60 ಲಕ್ಷ ಆಗಿದ್ದು, ಸದ್ಯ 30 ಲಕ್ಷ ಹೆಚ್ಚಿಸಿ 90 ಲಕ್ಷ ಪಡೆಯಲಿದ್ದಾರೆ.

ಜೊತೆಗೆ ಮಹಿಳಾ ಆಯ್ಕೆದಾರರ ಸಮಿತಿಗೂ ಸಂಭಾವನೆ ಅಧಿಕ ಮಾಡಿದ್ದು, 25 ಲಕ್ಷ ಪಡೆಯುತ್ತಿದ್ದವರು ಸದ್ಯ ವರ್ಷಕ್ಕೆ 30 ಲಕ್ಷ ಪಡೆಯಲಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ