• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL Schedule 2023: ಮಾರ್ಚ್​ 31ಕ್ಕೆ ಐಪಿಎಲ್ ಆರಂಭ, ಮೇ 28ಕ್ಕೆ ಫೈನಲ್, ಆರ್​ಸಿಬಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

IPL Schedule 2023: ಮಾರ್ಚ್​ 31ಕ್ಕೆ ಐಪಿಎಲ್ ಆರಂಭ, ಮೇ 28ಕ್ಕೆ ಫೈನಲ್, ಆರ್​ಸಿಬಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್​ನಲ್ಲಿ ಅತಿ ಹೆಚ್ಚು ಫ್ಯಾನ್​ಬೇಸ್​ ಹೊಂದಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್​ 2ರಿಂದ ತನ್ನ ಅಭಿಯಾನ ಶುರುಮಾಡಲಿದೆ. ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: 2023ರ ಇಂಡಿಯನ್ ಪ್ರೀಮಿಯರ್ ಲೀಗ್​ನ (Indian Premier League) ವೇಳಾ ಪಟ್ಟಿಯನ್ನು ಬಿಸಿಸಿಐ (BCCI) ಶುಕ್ರವಾರ ಘೋಷಣೆ ಮಾಡಿದೆ. ಮಾರ್ಚ್​ 31ರಂದು ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್ (Gujarat Titans) ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ತಂಡಗಳು ಟೂರ್ನಿಯ ಮೊದಲನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈ ವೋಲ್ಟೇಜ್​ ಮ್ಯಾಚ್ ಮೂಲಕ 16ನೇ ಆವೃತ್ತಿ ಆರಂಭವಾಗಲಿದೆ. ಈ ಪಂದ್ಯ ಅಹಮ್ಮದಾಬಾದ್‌ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು, ಮುಂಬೈ, ಚೆನ್ನೈ ಸೇರಿದತೆ 12 ನಗರದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ (IPL) ಆಯೋಜನೆಗೊಂಡಿದೆ. ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ.


ಐಪಿಎಲ್​ನಲ್ಲಿ ಅತಿ ಹೆಚ್ಚು ಫ್ಯಾನ್​ಬೇಸ್​ ಹೊಂದಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್​ 2ರಿಂದ ತನ್ನ ಅಭಿಯಾನ ಶುರುಮಾಡಲಿದೆ. ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡಿದ ಹೊರೆತಾಗಿಯೂ ಪ್ಲೇ ಆಫ್​ನಲ್ಲಿ ರಾಜಸ್ಥಾನ್​ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿ 4ನೇ ಸ್ಥಾನಕ್ಕೆತೃಪ್ತಿ ಪಟ್ಟುಕೊಂಡಿತ್ತು.


ಇದನ್ನೂ ಓದಿ: IPL 2023 Schedule: ಕ್ರಿಕೆಟ್​ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​, ಐಪಿಎಲ್​ 2023 ವೇಳಾಪಟ್ಟಿ ಬಿಡುಗಡೆ


16ನೇ ಆವೃತ್ತಿಯಲ್ಲಿ 70 ಲೀಗ್ ಪಂದ್ಯ


16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿದೆ. ಇದರಲ್ಲಿ 18 ಡಬಲ್ ಹೆಡ್ಡರ್ ಇರಲಿವೆ. ಲೀಗ್​ನ ಪ್ರತಿ ತಂಡ 7 ಪಂದ್ಯವನ್ನು ತವರಿನಲ್ಲಿ ಹಾಗೂ 7 ಪಂದ್ಯಗಳನ್ನು ಹೊರಗೆ ಆಡಲಿದೆ. ಮೇ 21ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಬಳಿಕ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಫೈನಲ್ ಮುಖಾಮುಖಿ ನಡೆಯಲಿದೆ


ಆರ್​ಸಿಬಿ ವೇಳಾಪಟ್ಟಿ


ಪಂದ್ಯ 1: ಏಪ್ರಿಲ್ 2, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ಬೆಂಗಳೂರು
ಪಂದ್ಯ 2: ಏಪ್ರಿಲ್ 6, 2023 - ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ
ಪಂದ್ಯ 3: ಏಪ್ರಿಲ್ 10,2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಖನೌ ಸೂಪರ್ ಜಯಂಟ್ಸ್‌, ಬೆಂಗಳೂರು
ಪಂದ್ಯ 4: ಏಪ್ರಿಲ್ 15, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು
ಪಂದ್ಯ 5: ಏಪ್ರಿಲ್ 17, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು
ಪಂದ್ಯ 6: ಏಪ್ರಿಲ್ 20, 2023 - ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊಹಾಲಿ
ಪಂದ್ಯ 7: ಏಪ್ರಿಲ್ 23, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಬೆಂಗಳೂರು
ಪಂದ್ಯ 8: ಏಪ್ರಿಲ್ 26, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಬೆಂಗಳೂರು
ಪಂದ್ಯ 9: ಮೇ 1, 2023 - ಲಖನೌ ಸೂಪರ್ ಜಯಂಟ್ಸ್‌ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಖನೌ
ಪಂದ್ಯ 10: ಮೇ 6, 2023 - ದೆಹಲಿ ಕ್ಯಾಪಿಟಲ್ಸ್ vsರಾಯಲ್ ಚಾಲೆಂಜರ್ಸ್ ಬೆಂಗಳೂರು, ದಿಲ್ಲಿ
ಪಂದ್ಯ 11: ಮೇ 9, 2023 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ
ಪಂದ್ಯ 12: ಮೇ 14, 2023 - ರಾಜಸ್ಥಾನ ರಾಯಲ್ಸ್ vsರಾಯಲ್ ಚಾಲೆಂಜರ್ಸ್ ಬೆಂಗಳೂರು, ಜೈಪುರ
ಪಂದ್ಯ 13: ಮೇ 18, 2023 - ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್
ಪಂದ್ಯ 14: ಮೇ 21, 2023 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್, ಬೆಂಗಳೂರು




ಮಿನಿ ಹರಾಜಿನಲ್ಲಿ 7 ಆಟಗಾರರ ಖರೀಸಿದಿಸಿರುವ ಆರ್​ಸಿಬಿ


ಡಿಸೆಂಬರ್​ನಲ್ಲಿ ನಡೆದ ಮಿನಿ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೆಲವು ಉದಯೋನ್ಮುಖ ಆಟಗಾರರನ್ನು ಖರೀದಿಸಿದ್ದು, ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಉತ್ಸಾಹದಲ್ಲಿರುವ ಬೆಂಗಳೂರು ತಂಡ ಇಂಗ್ಲೆಂಡ್​ನ ಅಲ್​ರೌಂಡರ್​ ವಿಲ್​ ಜಾಕ್ಸ್​ , ರೀಸ್​ ಟಾಪ್ಲೀಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹರಾಜಿಗೂ ಮುನ್ನ 5 ಆಟಗಾರರನ್ನು ಬಿಡುಗಡೆ ಮಾಡಿ ಬಹುತೇಕ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿತ್ತು.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ


ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿ.ಕೀ), ವಾನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗಿ, ಆಕಾಶ್ ದೀಪ್‌, ಜಾಶ್‌ ಹೇಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರಣ್‌ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ

Published by:Rajesha M B
First published: