PV Sindhu: ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ 2022 ಚಾಂಪಿಯನ್ ಆಗಿ ಹೊರಹೊಮ್ಮಿದ ಪಿವಿ ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಪಿ ವಿ ಸಿಂಧು

ಪಿ ವಿ ಸಿಂಧು

  • Share this:
ಕಳೆದ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ (Badminton) ತಾರೆ ಪಿವಿ ಸಿಂಧು (PV Sindhu) ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ (Singapore Open 2022) ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪಿವಿ ಸಿಂಧು 21-9, 11-21, 21-15ರಲ್ಲಿ ಚೀನಾದ ಶಟ್ಲರ್ ಹಾಗೂ ವಿಶ್ವದ 11ನೇ ಶ್ರೇಯಾಂಕಿತ ಆಟಗಾರ್ತಿ ವಾಂಗ್ ಜಿ ಯಿ (Wang Zhi Yi) ವಿರುದ್ಧ ಭರ್ಜರಿ ಜಯ ಸಾಧಿಸಿದರು. 58 ನಿಮಿಷಗಳ ಕಾಲ ನಡೆದ ಈ ಅಂತಿಮ ಹಣಾಹಣಿಯಲ್ಲಿ ಪಿವಿ ಸಿಂಧು ಎದುರಾಳಿಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಈ ಮೂಲಕ ಸಿಂಧು ಇದೇ ಪ್ರಥಮಬಾರಿಗೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಈ ವರ್ಷದ ಮೊದಲ ಸೂಪರ್ 500 ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು. ಜೊತೆಗೆ 2022ರಲ್ಲಿ ಸ್ವಿಸ್ ಓಪನ್ ಹಾಗೂ ಸಯ್ಯದ್ ಮೋದಿ ಪ್ರಶಸ್ತಿ ಸೇರಿ ಸಿಂಧುಗಿದು ಮೂರನೇ ಪ್ರಶಸ್ತಿಯಾಗಿದೆ.

ರೋಚಕ ಹಣಾಹಣಿಗೆ ಸಾಕ್ಷಿಯಾದ ಫೈನಲ್ ಫೈಟ್​:

ಇನ್ನು, ಪಂದ್ಯದ ಆರಂಭದಿಂದಲೂ ಉತ್ತಮ ಪೈಪೋಟಿಯೊಂದಿಗೆ ಪಂದ್ಯ ಸಾಗಿತ್ತು. ಆಕ್ರಮಣಕಾರಿ ಆಟವಾಡುವ ಮೂಲಕ ಪಿವಿ ಸಿಂಧು 21-9 ಅಂಕಗಳೊಂದಿಗೆ ಮೊದಲ ಸೆಟ್​ ಗೆದ್ದುಕೊಂಡರು. ಆದರೆ 2ನೇ ಸೆಟ್​ನಲ್ಲಿ ಚೀನಾದ ವಾಂಗ್‌ ಝಿ ಯಿ 11-21 ಅಂಕಗಳೊಂದಿಗೆ ಸಿಂಧು ವಿರುದ್ಧ ಗೆಲ್ಲುವ ಮೂಲಕ ಕಂಬ್ಯಾಕ್ ಮಾಡಿದರು. ಕೊನೆಯ 3ನೇ ಸೆಟ್​ನಲ್ಲಿ ಭರ್ಜರಿ ಹಣಾಹಣಿ ನಡೆಯಿತು. 5 ಅಂಕಗಳ ತನಕ ಇಬ್ಬರೂ ಸಮಬಲ ಸಾಧಿಸಿದ್ದರು.

ಆದರೆ ಸಿಂಧು ಸ್ಮ್ಯಾಶ್ ಶಾಟ್​ ಹೊಡೆಯುವ ಮೂಲಕ 11 ಅಂಕ ಗಳಿಸಿಕೊಂಡರು. ಈ ಮೂಲಕ ವಾಂಗ್‌ ಝಿ ಯಿ ಹಿಂದುಳಿದರು. ಆದರೂ ಮತ್ತೆ ಕೊಂಚ ಸಮಯದಲ್ಲಿಯೇ ಸಮಬಲದ ಹತ್ತಿರ ಬಂದಿದ್ದ ಸೆಟ್​ನಲ್ಲಿ ಸಿಂಧು ಮತ್ತೆ ಆಕ್ರಮಣಕಾರಿ ಆಟವಾಡಿ ಬ್ಯಾಕ್ ಜಂಪ್ ಸ್ಯಾಶ್​ ಮೂಲಕ ಒಮ್ಮಲೆ ಅಂಕವನ್ನು ಏರಿಸಿಕೊಂಡರು. ಇದರಿಂದಾಗಿ ಅಂತಿಮ ಸೆಟ್​ನಲ್ಲಿ 21-15 ರ ಅಂತರದಿಂದ ಗೆಲ್ಲುವು ಸಾಧಿಸಿದ ಸಿಂಧು ಸಿಂಗಾಪುರ್ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ ಆಗಿ ಹೊರಹೊಮ್ಮಿದರು. ಈ ಹಿಂದೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ವಾಂಗ್ ಜಿ ಯಿ ವಿರುದ್ಧ ಗೆದ್ದಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: Sourav Ganguly: ವಿರಾಟ್​ ಕೊಹ್ಲಿ ಫಾರ್ಮ್‌ ಕುರಿತು ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

ಸಿಂಧು ಚಾಂಪಿಯನ್ ಜರ್ನಿ:

ಇನ್ನು, ಸೆಮಿಫೈನಲ್‌ನಲ್ಲಿ ಸಿಂಧು 21-15, 21-7 ರಲ್ಲಿ ಸೈನಾ ಜಪಾನ್ ಆಟಗಾರ್ತಿ ಕವಾಕಮಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಉಳಿದಂತೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾನ್ ಯು ಅವರನ್ನು 17-21, 21-11 ಮತ್ತು 21-19 ಸೆಟ್‌ಗಳಿಂದ ಸೋಲಿಸಿದ್ದರು.

ಇದನ್ನೂ ಓದಿ: Unbreakable Records: ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಿಯಲಾಗದ 10 ದಾಖಲೆಗಳು, 5 ಗಂಟೆ 53 ನಿಮಿಷದ ಟೆಸ್ಟ್ ಪಂದ್ಯದ ಬಗ್ಗೆ ಗೊತ್ತಾ?

ಇನ್ನು, ಸಿಂಗಾಪುರ ಓಪನ್‌ನಲ್ಲಿ ಈವರೆಗೆ ಭಾರತೀಯ ಆಟಗಾರ್ತಿಯರಾದ ಸೈನಾ ನೆಹ್ವಾಲ್‌(2010) ಹಾಗೂ ಸಾಯಿ ಪ್ರಣೀತ್‌(2017) ಮಾತ್ರ ಚಿನ್ನ ಗೆದ್ದಿದ್ದರು. ಇದೀಗ ಇವರುಗಳ ಸಾಲಿಗೆ ಪಿವಿ ಸಿಂಧು ಸಹ ಸೇರ್ಪಡೆ ಆಗಿದ್ದಾರೆ. ಈ ವರ್ಷದಲ್ಲಿಯೇ ಪ್ರಮುಖ 3 ಟೂರ್ನಿಗಳಲ್ಲಿ ಪದಕ ಗೆದ್ದಿರುವ ಸಿಂಧು ಅವರು ಕಾಮನ್‌ವೆಲ್ತ್‌ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಭರವಸೆ ಮೂಡಿಸಿದ್ದಾರೆ.
Published by:shrikrishna bhat
First published: