Dinesh Karthik: ಆಸ್ಟ್ರೇಲಿಯಾ ಕೇವಲ RCB ಆಟಗಾರರನ್ನು ಆಯ್ಕೆ ಮಾಡಿದೆ, ಆಸೀಸ್​ ಕಾಲೆಳೆದ ಡಿಕೆ

Dinesh Karthik: ಆಸ್ಟ್ರೇಲಿಯಾ ಐಸಿಸಿ ಪುರುಷರ T20 ವಿಶ್ವಕಪ್ 2022 ಗಾಗಿ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಕಾಂಗರೂ ತಂಡದ ಈ ಜೆರ್ಸಿ  ಕುರಿತು ಭಾರತದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik)  ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

  • Share this:
ಆಸ್ಟ್ರೇಲಿಯಾ ಐಸಿಸಿ ಪುರುಷರ T20 ವಿಶ್ವಕಪ್ 2022 ಗಾಗಿ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಕಾಂಗರೂ ತಂಡದ ಈ ಜೆರ್ಸಿ  ಕುರಿತು ಭಾರತದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ (Dinesh Karthik)  ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿದ್ದು, ಸಖತ್​  ವೈರಲ್ ಆಗಿದೆ.  ಈ ಜೆರ್ಸಿಯ ಫೋಟೋಶೂಟ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell), ಜೋಶ್ ಹ್ಯಾಝಲ್​ವುಡ್ (Josh Hazlewood) ಹಾಗೂ ಮಿಚೆಲ್ ಸ್ಟಾರ್ಕ್ (Mitchell Starc)​ ಕಾಣಿಸಿಕೊಂಡಿದ್ದರು. ಇದೀಗ ಕಾರ್ತಿಕ್​ ಇದೇ ಪೋಟೋಗೆ ತಮಾಷೆಯ ಟ್ವೀಟ್​ ಮಾಡುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ.

ಆಸೀಸ್​  RCB ಆಟಗಾರರನ್ನು ಆಯ್ಕೆ ಮಾಡಿದೆ:

ಹೌದು, ಆಸೀಸ್​ ತಂಡವು ಟಿ20 ವಿಶ್ವಕಪ್​ಗೆ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ತಂಡವು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಇದರ ಫೋಟೋಶೂಟ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ , ಜೋಶ್ ಹ್ಯಾಝಲ್​ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಕಾಣಿಸಿಕೊಂಡಿದ್ದರು. ಇದೇ ಫೋಟೋವನ್ನು ಹಂಚಿಕೊಂಡು ದಿನೇಶ್​ ಕಾರ್ತಿಕ್​, ‘ಅವರು ಆರ್‌ಸಿಬಿಯಿಂದ ಮಾತ್ರವಲ್ಲದೆ ಇತರ ಫ್ರಾಂಚೈಸಿಗಳಿಂದಲೂ ತಂಡವನ್ನು ಆಯ್ಕೆ ಮಾಡಬೇಕು‘ ಎಂದು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಸಖತ್ ವೈರಲ್ ಆಗಿದೆ.

ಆಸ್ಟ್ರೇಲಿಯಾದ RCB ಆಟಗಾರರಿವರು:

ಇನ್ನು, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಪ್ರಸ್ತುತ RCB ತಂಡದ ಪ್ರಮುಖ ಭಾಗವಾಗಿದ್ದಾರೆ. ಮಿಚೆಲ್ ಸ್ಟಾರ್ಕ್ ಕೂಡ ಆರ್‌ಸಿಬಿಗಾಗಿ ಐಪಿಎಲ್‌ನಲ್ಲಿ ಆಡಿದ್ದಾರೆ. ಫ್ರಾಂಚೈಸಿ ಕಳೆದ ಋತುವಿನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ  ಮಾಡಿಕೊಂಡಿತ್ತು. ಕಾರ್ತಿಕ್ RCB ತಂಡದ ಭಾಗವಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಈ ತಂಡದ ಪರ ಆಡಿದ್ದರು. T20 ವಿಶ್ವಕಪ್ 2022 ಅನ್ನು ಈ ವರ್ಷ ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ: Robin Uthappa: 25 ವರ್ಷ ಹಿಂದೂ, ಬಳಿಕ ಕ್ರಿಶ್ಚಿಯನ್‌ಗೆ ಕನ್ವರ್ಟ್! ಹಾಕಿ ರೆಫ್ರಿ ಮಗ ಉತ್ತಪ್ಪ ಕ್ರಿಕೆಟ್ ಆಟಗಾರನಾಗಿದ್ದೇ ರೋಚಕ ಸ್ಟೋರಿ

ಭಾರತ vs ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:

6 ದಿನಗಳಲ್ಲಿ 3 ಟಿ20 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಕೂಡ ಭಾರತಕ್ಕೆ ಬರಬೇಕಿದೆ. ಮೊದಲ ಪಂದ್ಯ ಸೆಪ್ಟೆಂಬರ್ 20 ರಂದು ಮೊಹಾಲಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 23 ರಂದು ನಾಗ್ಪುರದಲ್ಲಿ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 25 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ದ್ವಿಪಕ್ಷೀಯ ಸರಣಿಯ ಹೊರತಾಗಿ, ಬಿಸಿಸಿಐ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿದೆ.

ಇದರ ನಡುವೆ ಭಾರತದ ವಿರುದ್ಧ ಸರಣಿಗಾಗಿ ಆಸೀಸ್​ ತಂಡ ಭಾರತಕ್ಕೆ ಬರಲಿದೆ. ಆದರೆ ಈ ಸರಣಿಯಿಂದ ಇದೀಗ ತಂಡದ ಪ್ರಮುಖ 3 ಆಟಗಾರರು ಔಟ್​ ಆಗಿದ್ದಾರೆ. ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಮತ್ತು ಮಿಚೆಲ್ ಮಾರ್ಷ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ: Ravindra Jadeja: ಟಿ20 ವಿಶ್ವಕಪ್​ಗೆ ಕಂಬ್ಯಾಕ್​ ಮಾಡ್ತಾರಾ ಜಡೇಜಾ? ಟ್ವೀಟ್​ ಮೂಲಕ ಸೂಚನೆ ನೀಡಿದ್ರಾ ಜಡ್ಡು?

T20 ವಿಶ್ವಕಪ್ 2022 ಗಾಗಿ ಆಸ್ಟ್ರೇಲಿಯಾ ತಂಡ:

ಡೇವಿಡ್ ವಾರ್ನರ್, ಆರನ್ ಫಿಂಚ್ (ಸಿ), ಪ್ಯಾಟ್ ಕಮ್ಮಿನ್ಸ್ (ವಿಸಿ), ಮ್ಯಾಥ್ಯೂ ವೇಡ್ (ವಾಕ್), ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ ಮತ್ತು ಆಷ್ಟನ್ ಎಗ್ಗರ್.
Published by:shrikrishna bhat
First published: