ಭಾರತದ (India) ವಿಶೇಷಚೇತನರ ಕ್ರಿಕೆಟ್ ತಂಡ ಮೂರನೇ ಟಿ20 ಪಂದ್ಯದಲ್ಲಿ ನೇಪಾಳವನ್ನು (Nepal) 92 ರನ್‌ಗಳಿಂದ ಸೋಲಿಸಿ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ (Match) ಭಾರತ 152 ರನ್‌ಗಳ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ 153 ರನ್‌ಗಳ ಜಯ ದಾಖಲಿಸಿತ್ತು. ಭಾನುವಾರ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಆರಂಭಿಕ ಆಟಗಾರ ಯೋಗೇಂದ್ರ ಭಡೋರಿಯಾ (Yogendra Bhadoria) 42 ಎಸೆತಗಳಲ್ಲಿ 76 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ನೇಪಾಳ 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು.
ನಗದು ಬಹುಮಾನ ಗೆದ್ದ ಭಾರತ ಹಾಗೂ ನೇಪಾಳ ತಂಡ
ಸರಣಿ ಗೆದ್ದ ಭಾರತ ತಂಡ ರೂ 1.5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರೆ, ನೇಪಾಳ ರೂ 85,000 ನಗದು ಪುರಸ್ಕಾರವನ್ನು ಪಡೆದುಕೊಂಡಿದೆ.
ಟಿ20 ಸರಣಿ ಯೋಜಿಸಿರುವ ಡಿಸಿಸಿಐ
ಟಿ20 ಸರಣಿಯನ್ನು ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಸಿಐ) ಆಯೋಜಿಸಿತ್ತು. ಡಿ.ಸಿ.ಸಿ.ಐ. ವಿಶೇಷಚೇತನರ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಏಕೀಕೃತ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ವಿಶಾಲ ಅರ್ಥದಲ್ಲಿ ಏಕೀಕರಣ, ಅವಕಾಶದ ಸಮಾನತೆ ಮತ್ತು ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ಅಂಗವೈಕಲ್ಯ ಹಕ್ಕುಗಳನ್ನು ತಿಳಿಯಪಡಿಸುತ್ತದೆ.
ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಸಿಐ) ನಾಲ್ಕು ಪ್ರಮುಖ ವಿಭಿನ್ನ-ಅಶಕ್ತ ಕ್ರಿಕೆಟ್ ಸಂಸ್ಥೆಗಳ ಸಮೂಹ ಸಂಸ್ಥೆಯಾಗಿದ್ದು, ಕ್ರಿಕೆಟ್ ಕ್ರೀಡೆಗಳ ಮೂಲಕ ವ್ಯಕ್ತಿಗಳ ಪುನರ್ವಸತಿ ಮತ್ತು ಉನ್ನತಿಗೆ ಕೆಲಸ ಮಾಡುತ್ತದೆ.
ಮ್ಯಾನ್ ಆಫ್ ದ ಮ್ಯಾಚ್, ಸೀರೀಸ್ ಪುರಸ್ಕಾರ
ಮ್ಯಾನ್ ಆಫ್ ದ ಮ್ಯಾಚ್ ನಗದು ಪುರಸ್ಕಾರ 10,000 ರೂಪಾಯಿ ಆಗಿದ್ದು, ಭಾರತದ ರವೀಂದ್ರ ಸಂತೆ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಗೆ ಅರ್ಹರಾದರು ಹಾಗೂ ಅವರಿಗೆ ಇಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಯಿತು.
ಅಂಗವಿಕಲ ಕ್ರೀಡಾಪಟುಗಳಿಗೆ ಮಾನ್ಯತೆ
2021 ರಲ್ಲಿ ಬಿಸಿಸಿಐ ದೈಹಿಕ ಅಂಗವಿಕಲತೆ ಹೊಂದಿರುವ ಮೂಗ, ಕಿವುಡ, ದೃಷ್ಟಿಹೀನ ಹಾಗೂ ಗಾಲಿಕುರ್ಚಿಯನ್ನಾಧರಿಸಿದ ಕ್ರಿಕೆಟ್ ಪಟುಗಳನ್ನು ಪೋಷಿಸುವ ಹಾಗೂ ಬೆಂಬಲಿಸುವ ಅಂಗಸಂಸ್ಥೆಯಾಗಿ ಡಿಸಿಸಿಐ ಮಾನ್ಯತೆ ನೀಡಿತು.
ಸರಣಿಯ ಮೂರನೇ ಪಂದ್ಯಾವಳಿಯನ್ನು ಆಡಿದ ಭಾರತ ಮೊದಲು ಬ್ಯಾಟಿಂಗ್ ಕೈಗೆತ್ತಿಕೊಂಡಿದ್ದು 20 ಓವರ್‌ಗಳಲ್ಲಿ 198 ರನ್‌ಗಳನ್ನು ಕಲೆ ಹಾಕಿತ್ತು.
ಉತ್ತಮ ಸ್ಕೋರ್ ಪೇರಿಸಿದ ಆಟಗಾರರು
ಓಪನರ್ ಬ್ಯಾಟ್ಸ್‌ಮನ್ ಯೋಗೇಂದ್ರ ಬಡೋರಿಯಾ 42 ಬಾಲ್‌ಗಳಲ್ಲಿ 76 ರನ್‌ಗಳನ್ನು ಗಳಿಸಿ ಹೆಚ್ಚುವರಿ ಸ್ಕೋರ್ ದಾಖಲಿಸಿದರು. ಜಾಫರ್ ಭಟ್ (37) ಹಾಗೂ ರವೀಂದ್ರ ಸಂತೆ (34) ಉತ್ತಮ ರನ್ ಪೇರಿಸುವಲ್ಲಿ ಸಾಥ್ ನೀಡಿದ ಇನ್ನಿಬ್ಬರು ಆಟಗಾರರಾಗಿದ್ದಾರೆ.
Indian #PhysicalDisability cricket team blanked their Nepal counterparts by 92 runs to seal the T20 series by 3-0.
India played three-match T20 series with Nepal for Late. Sh. Karan Singh Dalal Memorial Cup-2023 in Bhiwani from March 03 to 05. @JayShah @BCCI pic.twitter.com/lZc8wNeXRR
— Differently Abled Cricket Council of India (@dcciofficial) March 5, 2023
ನೇಪಾಳ ತಂಡದಲ್ಲಿ ಬಿಬೇಕ್ ಶರ್ಮ 41 ರನ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರೆ, ತಬ್ರೇಜ್ ಅನ್ಸಾರಿ ಹಾಗೂ ಪ್ರದೀಪ್ ರಿಜಲ್ ಹಾಗೂ ಸಂತೋಷ್ ಭಂಡಾರಿ ತಲಾ ಒಂದೊಂದು ವಿಕೆಟ್ ಕಿತ್ತರು.
ಭಾರತಕ್ಕೆ ಪ್ರತಿಯಾಗಿ ನೇಪಾಳ 17 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 106 ರನ್ ಪೇರಿಸಲು ಮಾತ್ರವೇ ಶಕ್ತವಾಯಿತು. ಪ್ರದೀಪ್ ರಿಜಲ್ (37), ಚಬೀಲ್ ದೋಬಿ (23), ಸಂತೋಷ್ ಭಂಡಾರಿ (12) ನೇಪಾಳ ತಂಡದಲ್ಲಿ ಪ್ರಮುಖ ಸ್ಕೋರ್ ಮಾಡಿದ ಆಟಗಾರರಾಗಿದ್ದಾರೆ.
ಇದನ್ನೂ ಓದಿ: Dinesh Karthik: ಭಾರತ ತಂಡದಲ್ಲಿ ಉಮೇಶ್ ಸೈಡ್‌ಲೈನ್ ಆಟಗಾರ, ಹೀಗ್ಯಾಕ್ ಹೇಳಿದ್ರು ದಿನೇಶ್ ಕಾರ್ತಿಕ್?
ನೇಪಾಳ ತಂಡದ ವಿಕೆಟ್ ಕಿತ್ತ ಭಾರತದ ಆಟಗಾರರು
ಭಾರತ ತಂಡದ ನಾಯಕ ವಿಕ್ರಾಂತ್ ಕೇನಿ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರೆ, ಶಿವಶಂಕರ್ ಜಿಎಸ್ (2), ಪವನ್ ಕುಮಾರ್ (2), ಮೊ ಸಾದಿಕ್ (1) ಎದುರಾಳಿ ತಂಡದ ವಿಕೆಟ್ ಕಿತ್ತ ಇತರ ಆಟಗಾರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ