ಐದು ದಶಕಗಳ ಬಳಿಕ ಭಾರತ ಟೆನಿಸ್ ತಂಡದಿಂದ ಪಾಕಿಸ್ತಾನಕ್ಕೆ ಪ್ರಯಾಣ?

ವಿಶ್ವ ಗುಂಪಿನ ಅರ್ಹತಾ ವಿಭಾಗಕ್ಕೆ ಅರ್ಹತೆ ಗಿಟ್ಟಿಸಲು ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ದುರ್ಬಲ ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ಎನಿಸಿದೆ.

Vijayasarthy SN | news18
Updated:June 27, 2019, 6:04 PM IST
ಐದು ದಶಕಗಳ ಬಳಿಕ ಭಾರತ ಟೆನಿಸ್ ತಂಡದಿಂದ ಪಾಕಿಸ್ತಾನಕ್ಕೆ ಪ್ರಯಾಣ?
ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಮುಲ್ ಖುರೇಷಿ
  • News18
  • Last Updated: June 27, 2019, 6:04 PM IST
  • Share this:
ನವದೆಹಲಿ(ಜೂನ್ 27): ಭಾರತ ಡೇವಿಸ್ ಕಪ್ ಟೆನಿಸ್ ತಂಡ ಏಷ್ಯಾ ಓಷಾನಿಯಾ ಗ್ರೂಪ್ 1 ಪಂದ್ಯಕ್ಕಾಗಿ  ಪಾಕಿಸ್ತಾನಕ್ಕೆ ತೆರಳಲಿದೆ. ಕಳೆದ 55 ವರ್ಷಗಳಲ್ಲಿ ಭಾರತ ಡೇವಿಡ್ ಕಪ್ ತಂಡವೊಂದು ಪಾಕಿಸ್ತಾನಕ್ಕೆ ಹೋಗುತ್ತಿರುವುದು ಇದೇ ಮೊದಲಾಗಿದೆ. ಇದು ಟೆನಿಸ್​ನ ವಿಶ್ವಕಪ್ ಆಗಿರುವುದರಿಂದ ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರ ಅನುಮತಿ ನೀಡುವುದು ಬಹುತೇಕ ಖಚಿತವಾಗಿದೆ. ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ. ಅನುಮತಿ ಸಿಕ್ಕರೆ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆ.

ವಿಶ್ವ ಗುಂಪಿನ ಅರ್ಹತಾ ವಿಭಾಗಕ್ಕೆ ಅರ್ಹತೆ ಗಿಟ್ಟಿಸಲು ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ದುರ್ಬಲ ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್ ಎನಿಸಿದೆ.

ಇದನ್ನೂ ಓದಿ: India vs West Indies: ವಿರಾಟ್ ಕೊಹ್ಲಿ ವಿಶ್ವದಾಖಲೆ; ಸಚಿನ್-ಲಾರಾ ದಾಖಲೆ ಉಡೀಸ್..!

ಭಾರತ ಡೇವಿಸ್ ಕಪ್ ತಂಡ ಪಾಕಿಸ್ತಾನಕ್ಕೆ ಕೊನೆಯ ಬಾರಿ ಹೋಗಿದ್ದು 1964ರಲ್ಲಿ. ಲಾಹೋರ್​ನಲ್ಲಿ ಆಗ ನಡೆದ ಪಂದ್ಯದಲ್ಲಿ ಭಾರತ ತಂಡ 4-0ಯಿಂದ ಸುಲಭವಾಗಿ ಗೆದ್ದು ಬೀಗಿತ್ತು. ಇನ್ನು, 2006ರ ನಂತರ ಈ ಎರಡು ದೇಶಗಳು ಡೇವಿಸ್ ಕಪ್​ನಲ್ಲಿ ಮುಖಾಮುಖಿಯಾಗುವುದೂ ಇದೇ ಮೊದಲಾಗಿದೆ. ಆಗ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ 3-2ರಿಂದ ಜಯಿಸಿತ್ತು.

ಈಗ ನಡೆಯಲಿರುವ ಪಂದ್ಯದಲ್ಲೂ ಭಾರತಕ್ಕೆ ಪಾಕಿಸ್ತಾನ ಪೈಪೋಟಿ ನೀಡುವ ಸಾಧ್ಯತೆ ಇಲ್ಲ. ಯಾಕೆಂದರೆ, ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಕನ್ನಡಿಗ ರೋಹನ್ ಬೋಪಣ್ಣ ಅವರ ಡಬಲ್ಸ್ ಪಾರ್ಟ್ನರ್ ಆಗಿ ಐಸಮ್ ಉಲ್ ಖುರೇಷಿ ಅವರೊಬ್ಬರೇ ಪಾಕಿಸ್ತಾನದ ವಿಶ್ವದರ್ಜೆಯ ಟೆನಿಸ್ ಆಟಗಾರನೆನಿಸಿದ್ದಾರೆ. ಇನ್ನು, ಭಾರತದ ಪ್ರಜ್ಞೇಶ್ ಗುನ್ನೇಶ್ವರನ್ ಮತ್ತು ರಾಮಕುಮಾರ್ ರಾಮನಾಥನ್ ಅವರು ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ, ಭಾರತ ಸುಲಭವಾಗಿ ಈ ಪಂದ್ಯ ಗೆಲ್ಲುವ ಸಾಧ್ಯತೆ ಇದೆ. ಈ ಪಂದ್ಯ ಗೆದ್ದರೆ ಭಾರತ ಮರಳಿ ವರ್ಲ್ಡ್ ಗ್ರೂಪ್ ಕ್ವಾಲಿಫಯರ್ಸ್​ಗೆ ಅರ್ಹತೆ ಗಿಟ್ಟಿಸಲಿದೆ.

ಇದನ್ನೂ ಓದಿ: 119 ವರ್ಷ ಹಳೆಯ ವಿಂಟೇಜ್ ಕಾರ್​​ನಲ್ಲಿ ಹೆಂಡತಿ ಜೊತೆ ಸಚಿನ್ ಜಾಲಿ ರೈಡ್!

ಇನ್ನು, ಪಾಕಿಸ್ತಾನಕ್ಕೆ ಬೇರೆ ದೃಷ್ಟಿಯಿಂದಲೂ ಈ ಪಂದ್ಯ ಮಹತ್ವದ್ದಾಗಿದೆ. ಕಳೆದ ವರ್ಷದವರೆಗೂ ಭದ್ರತಾ ದೃಷ್ಟಿಯಿಂದ ಅನೇಕ ರಾಷ್ಟ್ರಗಳ ಟೆನಿಸ್ ತಂಡಗಳು ಪಾಕಿಸ್ತಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದವು. ಮೂರನೇ ದೇಶದಲ್ಲಿ ಪಂದ್ಯ ನಡೆಸುವುದು ಪಾಕಿಸ್ತಾನಕ್ಕೆ ಅನಿವಾರ್ಯವಾಗಿತ್ತು. ಆದರೆ, ಇತ್ತೀಚೆಗೆ ಉಜ್ಬೆಕಿಸ್ತಾನ್, ಕೊರಿಯಾ ಮತ್ತು ಥಾಯ್ಲೆಂಡ್ ದೇಶಗಳ ಡೇವಿಸ್ ಕಪ್ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನ ಆಡಿವೆ. ಇದರೊಂದಿಗೆ ಪಾಕಿಸ್ತಾನಕ್ಕೆ ಅಂಟಿದ್ದ ಭದ್ರತಾ ಕಳಂಕ ನೀಗಿದಂತಾಗಿದೆ.ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ