72ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಸೇರಿದಂತೆ ಪಾಕ್ ಕ್ರಿಕೆಟಿಗರ ಶುಭಾಶಯ

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊನ್ನೆಯಷ್ಟೆ ವೇಷ್​​ಭೂಷ ಎಂಬ ಸವಾಲು ಹಾಕಿ ಸ್ವಾತಂತ್ರ್ಯ ದಿನದಂದು ಸಾಂಪ್ರದಾಯಿಕ ಉಡುಗೆ ತೊಡುವಂತೆ ಕರೆ ನೀಡಿದ್ದರು. ಅಲ್ಲದೆ ಈ ಸವಾಲ್ ಅನ್ನು ಧವನ್ ಹಾಗೂ ರಿಷಭ್ ಪಂತ್​ಗೆ ನೀಡಿದ್ದರು. ಇದಕ್ಕೆ ಉತ್ತರವಾಗಿ ಶಿಖರ್ ಧವ್ ಹಾಗೂ ಪಂತ್ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ ತೊಟ್ಟು 72ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.

 
 
ಅಂತೆಯೆ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ವಿಶೇಷ ರೀತಿಯಲ್ಲಿ ಶುಭಕೋರಿದ್ದು, ಕೈಯಲ್ಲಿ ಕುಂಚ ಹಿಡಿದರು ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿದ್ದಾರೆ. ಜೊತೆಗೆ ತಮ್ಮ ಇನ್​ಸ್ಟಗ್ರಾಂನಲ್ಲಿ ಈ ಫೋಟೋವನ್ನು ಹಂಚಿಕೊಂಡು ದೇಶದ ಜನತೆಗೆ ಶುಭಹಾರೈಸಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್, ರೋಹಿತ್ ಶರ್ಮಾ, ಸುರೇಶ್ ರೈನಾ, ಚೇತೇಶ್ವರ್ ಪೂಜಾರ ಅನೇಕ ಕ್ರಿಕೆಟಿಗರು ಶುಭಕೋರಿದ್ದಾರೆ.

 Saare Jahaan se Achha , Hindustan Hamara. #independenceday


A post shared by Virender Sehwag (@virendersehwag) on


      ಅಷ್ಟೇ ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಆಫ್ರಿದಿ, ಶೊಯಬ್ ಮಲಿಕ್ ಸೇರಿದಂತೆ ಅನೇಕ ವಿದೇಶಿ ಕ್ರಿಕೆಟಿಗರೂ ಕೂಡ ಶುಭಕೋರಿದ್ದಾರೆ.

  First published: