ಭಾರತ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ (Prithvi Shaw) ಅವರ ಕಾರಿನ (Car) ಮೇಲೆ ದಾಳಿ ನಡೆದಿದೆ. ಅಪರಿಚಿತ ವ್ಯಕ್ತಿಗಳು ಮುಂಬೈನಲ್ಲಿ (Mumbai ) ಪೃಥ್ವಿ ಶಾ ಕಾರಿನ ಮೇಲೆ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಸೆಲ್ಫಿ (Selfie) ಸೆಲ್ಫಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಂಟು ಜನರ ಗುಂಪು ಪೃಥ್ವಿ ಶಾ ಅವರ ಕಾರಿನ ಮೇಲೆ ಬೇಸ್‌ಬಾಲ್ ಬ್ಯಾಟ್‌ಗಳಿಂದ ದಾಳಿ ಮಾಡಿದೆ. ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾರ್ ಮೇಲೆ ದಾಳಿ:
ಪೃಥ್ವಿ ಶಾ ತಮ್ಮ ಸ್ನೇಹಿತನ ಕಾರಿನಲ್ಲಿ ಕುಳಿತಿದ್ದರು. ಆ ವೇಳೆ ಪೃಥ್ವಿ ಶಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕೆಲವರು ಅಲ್ಲಿಗೆ ಬಂದಿದ್ದರು. ಆದರೆ ಪೃಥ್ವಿ ಶಾ ನಿರಾಕರಿಸಿದಾಗ ಸಿಟ್ಟಿನಿಂದ ಪೃಥ್ವಿ ಶಾ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಪೃಥ್ವಿ ಶಾ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Oshiwara Police has registered a case against 8 persons over an alleged attack on the car of a friend of Indian cricketer Prithvi Shaw after Shaw refused to take a selife for the second time with two people: Mumbai Police
— ANI (@ANI) February 16, 2023
ಅಷ್ಟಕ್ಕೂ ಏನು ಈ ಪ್ರಕರಣ?:
ಈ ಪ್ರಕರಣದಲ್ಲಿ ಸನಾ ಗಿಲ್, ಶೋಭಿತ್ ಠಾಕೂರ್ ಸೇರಿ ಒಟ್ಟು 8 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೃಥ್ವಿ ಮತ್ತು ಆತನ ಸ್ನೇಹಿತ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದರು. ಅಷ್ಟರಲ್ಲಿ ಪೃಥ್ವಿ ಶಾ ಅವರ ಅಭಿಮಾನಿ ಮತ್ತು ಹುಡುಗಿಯೊಬ್ಬರು ಅವರ ಟೇಬಲ್‌ಗೆ ಬಂದು ಚಿತ್ರಗಳನ್ನು ತೆಗೆಯಲಾರಂಭಿಸಿದರು. ಕೆಲವು ಫೋಟೋಗಳನ್ನು ತೆಗೆದುಕೊಂಡ ನಂತರ, ಅಭಿಮಾನಿ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದರು.
ಇದನ್ನೂ ಓದಿ: IND vs AUS: ಆಸೀಸ್ ವಿರುದ್ಧದ 2ನೇ ಟೆಸ್ಟ್ಗೆ ನಂಬರ್ 1 ಬ್ಯಾಟ್ಸ್ಮನ್ ಔಟ್! ದ್ರಾವಿಡ್ ಮಹತ್ವದ ನಿರ್ಧಾರ
ನಂತರ ಪೃಥ್ವಿ ಶಾ ತಮ್ಮ ಸ್ನೇಹಿತ ಮತ್ತು ಹೋಟೆಲ್ ಮಾಲೀಕರಿಗೆ ಕರೆ ಮಾಡಿ ಅಭಿಮಾನಿಗಳನ್ನು ಹೊರಗೆ ಹಾಕುವಂತೆ ಹೇಳಿದರು. ರೆಸ್ಟೋರೆಂಟ್ ಮ್ಯಾನೇಜರ್ ಇಬ್ಬರನ್ನೂ ಹೊರಹಾಕಿದರು. ಅಷ್ಟರಲ್ಲಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ರೆಸ್ಟೊರೆಂಟ್‌ನಿಂದ ಹೊರಬರುವುದನ್ನು ಕೆಲವರು ಕಾಯುತ್ತಿದ್ದರು.
ಇದೇ ವೇಳೆ ಪೃಥ್ವಿ ಶಾ ಮತ್ತು ಆತನ ಸ್ನೇಹಿತ ಹೊರಬಂದ ಬಳಿಕ ಕಾರಿನಿಂದ ಸ್ವಲ್ಪ ದೂರ ಹೋಗುತ್ತಿದ್ದಾಗ ಆರೋಪಿಗಳು ಕಾರನ್ನು ಸುತ್ತುವರಿದಿದ್ದಾರೆ. ಇದೇ ವೇಳೆ ಆರೋಪಿಗಳು ಪೃಥ್ವಿ ಶಾ ಅವರ ಸ್ನೇಹಿತನ ವಾಹನದ ಮೇಲೆ ದಾಳಿ ಮಾಡಿ ಗಾಜು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲ, ಪೃಥ್ವಿ ಸ್ನೇಹಿತನಿಂದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ. ಅಷ್ಟರಲ್ಲಿ ಪೃಥ್ವಿ ಶಾ ಅವರನ್ನು ತಕ್ಷಣವೇ ಇನ್ನೊಂದು ವಾಹನದಲ್ಲಿ ಕಳುಹಿಸಲಾಯಿತು.
8 ಜನರ ವಿರುದ್ಧ ಪ್ರಕರಣ ದಾಖಲು:
ಈ ಕುರಿತು ಪೊಲೀಸರಿಗೆ ಪೃಥ್ವಿ ಶಾ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಸನಾ ಗಿಲ್, ಶೋಭಿತ್ ಠಾಕೂರ್ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 384, 437, 504, 506 ಅಡಿಯಲ್ಲಿ ಓಶಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ