• Home
  • »
  • News
  • »
  • sports
  • »
  • Mohammed Shami: ದಸರಾಗೆ ಶುಭಾಶಯ ಕೋರಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾ ಸ್ಟಾರ್​ ಆಟಗಾರನಿಗೆ ಬೆದರಿಕೆ!

Mohammed Shami: ದಸರಾಗೆ ಶುಭಾಶಯ ಕೋರಿದ್ದೇ ತಪ್ಪಾಯ್ತಾ? ಟೀಂ ಇಂಡಿಯಾ ಸ್ಟಾರ್​ ಆಟಗಾರನಿಗೆ ಬೆದರಿಕೆ!

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

Mohammed Shami: ದೇಶಾದ್ಯಂತ ಸಡಗರ ಸಂಭ್ರಮದಿಂದ ದಸರಾ ಆಚರಿಸಲಾಯಿತು. ಆದರೆ ಈ ನಡುವೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮತಾಂಧರು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಬಾಂಗ್ಲಾದೇಶದ ಕ್ರಿಕೆಟಿಗರು ಕೂಡ ಇಂತಹ ಕಹಿ ಘಟನೆಗಳು ನಡೆದಿದ್ದವು.

  • Share this:

ದುಷ್ಟರ ವಿರುದ್ಧ ಸದ್ಗುಣದ ವಿಜಯವನ್ನು ಪ್ರತಿನಿಧಿಸುವ ಹಿಂದೂ ಹಬ್ಬವಾದ ದಸರಾವನ್ನು (Dussehra) ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಸ್ಥಳಗಳಲ್ಲಿ ರಾವಣ ದಹನ ನಡೆಸಲಾಯಿತು.  ಅನೇಕ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social media) ದಸರಾ ಹಬ್ಬಕ್ಕೆ ಶುಭಕೋರಿದ್ದಾರೆ. ಅದೇ ರೀತಿ ಟೀಂ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್ ಶಮಿ (Mohammed Shami) ಸಹ ದಸರಾ ಹಬ್ಬಕ್ಕೆ ದೇಶದ ಜನತೆಗೆ ಶುಭಕೋರಿದ್ದಾರೆ. ಆದರೆ ಅವರು ಈ ಶುಭಾಷಯದ ಪೋಸ್ಟ್ ಮಾಡುತ್ತಿದ್ದಂತೆ  ಯಾರೂ ಊಹಿಸಲೂ ಸಾಧ್ಯವಾಗದಂತಹ ಘಟನೆ ನಡೆದಿದೆ. ಮೊಹಮ್ಮದ್ ಶಮಿ ದೇಶವಾಸಿಗಳಿಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಟ್ವೀಟ್ ಮೂಲಕ ಅವರು ಅಭಿನಂದನಾ ಸಂದೇಶವನ್ನು ನೀಡಿದರು, ಆದರೆ ಅವರ ಟ್ವೀಟ್​ಗೆ ಅನೇಕರು ವಿಭಿನ್ನವಾಗಿ ಕಾಮೆಂಟ್​ ಮಾಡುತ್ತಿದ್ದು, ಶಮಿಗೆ ಬೆದರಿಕೆಯನ್ನೂ ಸಹ ಹಾಕಿದ್ದಾರೆ.


ಶಮಿ ವಿರುದ್ಧ ಬೆದರಿಕೆ:


ಹೌದು, ದೇಶದ ಜನತೆಗೆ ದಸರಾ ಶುಭಕೋರಿದ್ದಕ್ಕಾಗಿ ಇದೀಗ ಮೊಹಮ್ಮದ್ ಶಮಿ ವಿರುದ್ಧ ಫತ್ವಾ ಹೊರಡಿಸುವುದಾಗಿ ಬೆದರಿಕೆಗಳು ಹಾಕಲಾಗುತ್ತಿದೆ. ಸದ್ಯ ಕೊರೋನಾ ಹಿನ್ನಲೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಶಮಿ, ಮುಂಬರುವ ವಿಶ್ವಕಪ್​ನಲ್ಲಿ ಬುಮ್ರಾ ಬದಲಿಗೆ ತಂಡದಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇದರ ನಡುವೆ ಈ ರೀತಿಯ ಬೆಳವಣಿಗೆಗಳು ಅವರ ಅಭಿಮಾನಿಗಳಲ್ಲಿ ಅಚ್ಚರಿಯನ್ನು ಉಂಟುಮಾಡುತ್ತಿದೆ. ಶಮಿ ತಮ್ಮ ಟ್ವೀಟ್‌ನಲ್ಲಿ ರಾಮನ ಚಿತ್ರವನ್ನು ಪೋಸ್ಟ್ ಮಾಡಿ, ‘ಈ ಪವಿತ್ರ ಹಬ್ಬವಾದ ದಸರಾದಲ್ಲಿ, ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಭಗವಾನ್ ರಾಮನಲ್ಲಿ ನನ್ನ ಏಕೈಕ ಪ್ರಾರ್ಥನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದಸರಾ ಹಬ್ಬದ ಶುಭಾಶಯಗಳು‘ ಎಂದು ಬರೆದುಕೊಂಡಿದ್ದಾರೆ.ಮೊಹಮ್ಮದ್ ಶಮಿ ಸಾಮಾಜಿಕ ಜಾಲತಾಣದಲ್ಲಿ ದಸರಾ ಶುಭಾಶಯ ಕೋರಿದ್ದರು. ಇದರಿಂದಾಗಿ ಅವರು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಅವರ ಟ್ವೀಟ್ ಅನ್ನು ಧರ್ಮದೊಂದಿಗೆ ಸಂಯೋಜಿಸುವ ಮೂಲಕ ವಿಚಿತ್ರ ಕಾಮೆಂಟ್​ ಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಹೆಸರನ್ನು ಬದಲಾಯಿಸುವಂತೆಯೂ ಸಲಹೆ ನೀಡಿದ್ದರು. ಆದರೆ, ಶಮಿ ಇತ್ತ ಗಮನ ಹರಿಸಲಿಲ್ಲ. ಶಮಿ ಅವರ ಈ ಟ್ವೀಟ್ ಅನ್ನು ಇಲ್ಲಿಯವರೆಗೆ 40 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ನ ಸ್ಮರಣೀಯ ಕ್ಷಣಗಳಿವು, ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತದ್ದು


ಟೀಂ ಇಂಡಿಯಾದ ಸ್ಟಾರ್​ ಬೌಲರ್ ಶಮಿ:


ಶಮಿ ಈ ವರ್ಷದ ಜುಲೈನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇದಕ್ಕೂ ಮುನ್ನ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಭಾಗವಾಗಿದ್ದರು. ಕಳೆದ ವರ್ಷದ ಟಿ20 ವಿಶ್ವಕಪ್‌ನಿಂದ ಅವರು ಈ ಮಾದರಿಯಲ್ಲಿ ಭಾರತಕ್ಕಾಗಿ ಯಾವುದೇ ಪಂದ್ಯವನ್ನು ಆಡಿಲ್ಲ. ಅವರು T20 ವಿಶ್ವಕಪ್-2022 ರಲ್ಲಿ ಸ್ಟ್ಯಾಂಡ್‌ಬೈ ಆಗಿ ಆಯ್ಕೆಯಾಗಿದ್ದಾರೆ. ಶಮಿ ಇದುವರೆಗೆ 60 ಟೆಸ್ಟ್, 82 ODI ಮತ್ತು 17 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Published by:shrikrishna bhat
First published: