KL Rahul: ಕೆ.ಎಲ್ ರಾಹುಲ್ ಹೆಸರಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ತಾಯಿ ಹೇಳಿದ ಸಿಹಿ ಸುಳ್ಳು ಏನ್ ಗೊತ್ತಾ?

ಬ್ರೇಕ್‌ಫಾಸ್ಟ್‌ ವಿತ್ ಚಾಂಪಿಯನ್ಸ್ (Breakfast With Champions) 2022ರ ಮೊದಲ ಸಂಚಿಕೆಯಲ್ಲಿ ಗೌರವ್ ಕಪೂರ್ (Gaurav Kapur) ಅವರೊಂದಿಗಿನ ಸಂವಾದದಲ್ಲಿ, ಕೆ.ಎಲ್ ರಾಹುಲ್ ಅವರು 'ರಾಹುಲ್' ಎಂಬ ಹೆಸರನ್ನು ಹೇಗೆ ಪಡೆದರು ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ.

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

  • Share this:
ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ತಮ್ಮ ಹೆಸರಿನ ಹಿಂದಿನ ಕಥೆ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಬ್ರೇಕ್‌ಫಾಸ್ಟ್‌ ವಿತ್ ಚಾಂಪಿಯನ್ಸ್ (Breakfast With Champions) 2022ರ ಮೊದಲ ಸಂಚಿಕೆಯಲ್ಲಿ ಗೌರವ್ ಕಪೂರ್ (Gaurav Kapur) ಅವರೊಂದಿಗಿನ ಸಂವಾದದಲ್ಲಿ, ಕೆ.ಎಲ್ ರಾಹುಲ್ ಅವರು 'ರಾಹುಲ್' ಎಂಬ ಹೆಸರನ್ನು ಹೇಗೆ ಪಡೆದರು ಎಂಬ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ. ರಾಹುಲ್ ಎಂಬುದು ಭಾರತದಲ್ಲಿ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಜನಪ್ರಿಯ ಹೆಸರು. ಲೆಜೆಂಡರಿ ರಾಹುಲ್ ದ್ರಾವಿಡ್ (Rahul Dravid) ದೇಶಕ್ಕಾಗಿ ಇದುವರೆಗೆ ಆಡಿದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರೆ, ಇನ್ನೊಬ್ಬ ರಾಹುಲ್, ಇತ್ತೀಚಿನ ದಿನಗಳಲ್ಲಿ ಹೆಸರು ಮಾಡುತ್ತಿರುವ ಕರ್ನಾಟಕ ಮೂಲದ ಯುವ ಆಟಗಾರ. ಭಾರತ ತಂಡದ ಉಪನಾಯಕನಾಗಿರುವ ಕೆ.ಎಲ್. ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಬ್ಯಾಟ್ ಬೀಸುತ್ತಿದ್ದಾರೆ. ಐಪಿಎಲ್ ಸ್ಟಾರ್ ಆಟಗಾರರ ಪೈಕಿಯಲ್ಲೂ ರಾಹುಲ್ ಮುಂಚೂಣಿಯಲ್ಲಿದ್ದಾರೆ.

ಪ್ರಸ್ತುತ ಭಾರತದ ಉಪನಾಯಕ ತಮ್ಮ ಹೆಸರಿನ ಹಿಂದಿನ ಕಥೆಯೊಂದನ್ನು ಹೇಳಿದ್ದಾರೆ. ಹೇಗೆ ಅವರ ಪೋಷಕರು ಈ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ತನ್ನ ಜೀವನದ ಮೊದಲ 26-27 ವರ್ಷಗಳಲ್ಲಿ ತನ್ನ ತಾಯಿ ತನ್ನ ಹೆಸರಿನ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಮಾತು ಶುರು ಮಾಡಿದ ರಾಹುಲ್, ನನ್ನ ತಾಯಿ ಹೇಳಿದ ಸುಳ್ಳಿನ ಬಗ್ಗೆ ಒಂದೆರಡು ವರ್ಷಗಳ ಹಿಂದೆ ಅರಿತುಕೊಂಡಿದ್ದೇನೆ ಎಂದು ಚಾಟ್ ಸಮಯದಲ್ಲಿ ಬಹಿರಂಗಪಡಿಸಿದರು.

ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಸೀಸನ್ 7 ರ ಮೊದಲ ಸಂಚಿಕೆಯಲ್ಲಿ, ಗೌರವ್ ಕಪೂರ್ ಅವರೊಂದಿಗಿನ ಸಂವಾದದಲ್ಲಿ, ರಾಹುಲ್ ಅವರ ಹೆಸರಿನ ಬಗೆಗಿನ ಎರಡು ಕಥೆಗಳನ್ನು ಹೇಳಿದರು.

ತನ್ನ ಹೆಸರಿನ ಬಗ್ಗೆ ತಾಯಿ ಸುಳ್ಳು ಹೇಳಿದ್ದರು:

ನನ್ನ ತಾಯಿ ನನ್ನ ಹೆಸರಿನ ಬಗ್ಗೆ ಸುಳ್ಳು ಹೇಳಿದ್ದರು, ನನ್ನ ತಾಯಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಮತ್ತು 90ರ ದಶಕದಲ್ಲಿ ಶಾರುಖ್ ಕೆಲವು ಚಿತ್ರಗಳಲ್ಲಿ ಅವರ ಪಾತ್ರಗಳು ರಾಹುಲ್ ಆಗಿದ್ದವು. ಇದೇ ಕಥೆಯನ್ನು ನನ್ನ ತಾಯಿ ನನ್ನ ಜೀವನದ ಮತ್ತು ಹೆಸರಿನ ಜೊತೆ ಲಿಂಕ್ ಮಾಡಿದ್ದರು ಎಂದಿದ್ದಾರೆ. ಹಾಗಾಗಿ ನಾನು ಆ ಕಥೆಯೊಂದಿಗೆ ಹೋಗುತ್ತಿದ್ದೆ. ಈ ಬಗ್ಗೆ ನಾನು ನನ್ನ ಸ್ನೇಹಿತರೊಬ್ಬರಿಗೆ ಹೇಳಿಕೊಂಡಾಗ ಅವರಿಂದ ವಾಸ್ತವವಾಗಿ ಈ ಕಥೆ ಸುಳ್ಳೆಂದು ತಿಳಿಯಿತು ಎಂದರು.

ಇದನ್ನೂ ಓದಿ: IPL 2022: KL ರಾಹುಲ್ ಈ ಅಫ್ಘಾನ್ ಬೌಲರ್ ಹೆಸರು ಕೇಳಿದ್ರೆ ನಡುಗುತ್ತಾರಂತೆ, ಇಂದಿನ ಪಂದ್ಯದ ಮೇನ್ ಆಟ್ರಾಕ್ಷನ್ ಇವರೇ!

ಸ್ನೇಹಿತ ಬಹುಶಃ ಬಹಳಷ್ಟು ಬಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ ಮತ್ತು ಅವರು ಹೇಳಿದರು, 'ಬ್ರೋ, ಶಾರುಖ್ ಅವರ ಮೊದಲ ಪಾತ್ರವು 1994ರಲ್ಲಿ ಆಗಿತ್ತು. ನೀವು 1992ರಲ್ಲಿ ಹುಟ್ಟಿದ್ದೀರಿ. ಆದ್ದರಿಂದ, ಇದು ಹೇಗೆ ಸಾಧ್ಯ ಎಂದು ಹೇಳಿದರು. ಆಗಲೇ ಗೊತ್ತಾಯಿತು ನನ್ನ ತಾಯಿ ನನಗೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ತಾಯಿಯ ಸಿಹಿ ಸುಳ್ಳಿನ ಬಗ್ಗೆ ಹೇಳಿಕೊಂಡರು. ಅಲ್ಲದೇ ನಾನು ಈ ಬಗ್ಗೆ ತಾಯಿಯನ್ನು ಕೇಳಿದರೆ ಏ ಅದೆಲ್ಲಾ ಸುಮ್ಮನೆ, ಈಗ್ಯಾಕೆ ಹೋಗು ಅಂತಾರೆ ಎಂದು ರಾಹುಲ್ ಹೇಳಿದರು.

ಕಭಿ ಖುಷಿ ಕಭಿ ಘುಮ್, ಹರ್ ದಿಲ್ ಜೋ ಪ್ಯಾರ್ ಕರೇಗಾ, ಕುಚ್ ಕುಚ್ ಹೋತಾ ಹೈ, ದಿಲ್ ತೋ ಪಾಗಲ್ ಹೈ, ಯೆಸ್ ಬಾಸ್, ಜಮಾನಾ ದೀವಾನಾ ಮತ್ತು ಡರ್ ಸೇರಿದಂತೆ ಹೆಚ್ಚಿನ ಸಿನಿಮಾಗಳಲ್ಲಿ ಶಾರುಖ್ ಖಾನ್‌ ರಾಹುಲ್ ಎಂಬ ಹೆಸರಿಟ್ಟುಕೊಂಡಿದ್ದಾರೆ.

ಹೆಸರಿನ ಹಿಂದಿನ ಕಥೆಯನ್ನು ಬಿಚ್ಚಿಟ್ಟ ರಾಹುಲ್:

ಇಷ್ಟೇ ಅಲ್ಲದೇ ರಾಹುಲ್ ಮತ್ತೊಂದು ಕಥೆಯನ್ನು ಸಹ ಹೇಳಿದ್ದಾರೆ. ನನ್ನ ತಂದೆ ಸುನೀಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿ ಎಂದು ರಾಹುಲ್ ಬಹಿರಂಗಪಡಿಸಿದ್ದಾರೆ. ಗವಾಸ್ಕರ್ ತಮ್ಮ ಮಗನಿಗೆ ರೋಹನ್ ಎಂದು ಹೆಸರಿಟ್ಟಿದ್ದರಿಂದ ನನ್ನ ತಂದೆಯೂ ನನಗೆ 'ರೋಹನ್' ಎಂದು ಹೆಸರಿಡಲು ಬಯಸಿದ್ದರು. ಆದಾಗ್ಯೂ, ನನ್ನ ತಂದೆ ರೋಹನ್ ಹೆಸರನ್ನು ರಾಹುಲ್ ಎಂದು ತಪ್ಪಾಗಿ ಅರ್ಥೈಸಿಕೊಂಡು ನನಗೆ ತಪ್ಪು ಹೆಸರನ್ನು ಇಟ್ಟಿದ್ದಾರೆ ಎಂದು ಹೆಸರಿನ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: GT vs LSG: ಗುಜರಾತ್​ ಟೈಟನ್ಸ್​ ಘರ್ಜನೆಗೆ ಬೆಚ್ಚಿದ ಲಕ್ನೋ ಸೂಪರ್​ ಜೈಂಟ್ಸ್ ​! ಮತ್ತೆ ಹೀರೋ ಆದ ತೇವಾಟಿಯ

ಆರ್​ಬಿಐ ಗೆ ಆಯ್ಕೆಯಾಗಿದ್ದ ರಾಹುಲ್:

ಸಂವಾದದ ಸಮಯದಲ್ಲಿ, ರಾಹುಲ್ ಅವರು ಸಾಧಿಸಿದ ಸ್ಥಾನಮಾನದ ಹೊರತಾಗಿಯೂ ಅವರ ಪೋಷಕರು ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಎಂದಿಗೂ ಪ್ರಭಾವಿತರಾಗಿಲ್ಲ ಎಂದು ಬಹಿರಂಗಪಡಿಸಿದರು. ನಾನು ಆರ್‌ಬಿಐ ಹುದ್ದೆಗೆ ಆಯ್ಕೆಯಾಗಿದ್ದು, ಅವರಿಗೆ ಹೆಚ್ಚು ಖುಷಿ ನೀಡಿತ್ತು ಎಂದರು. ನಾನು ಅದಕ್ಕೂ ಮುನ್ನ ಭಾರತಕ್ಕಾಗಿ ನಾಲ್ಕು ವರ್ಷ ಆಡಿದ್ದೇನೆ. ಆದರೆ ಅದು ಅವರಿಗೆ ಸಂತೋಷವನ್ನು ನೀಡಿರಲಿಲ್ಲ ಎಂದೂ ಹೇಳಿದರು.

ಅಲ್ಲದೆ, ಕೋವಿಡ್ - 19 ಲಾಕ್‌ಡೌನ್ ಸಮಯದಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಲು ತನ್ನ ತಾಯಿ ಕೇಳಿಕೊಂಡಿದ್ದನ್ನು ಸಹ ಕೆ.ಎಲ್‌. ರಾಹುಲ್ ಬಹಿರಂಗಪಡಿಸಿದ್ದಾರೆ.
Published by:shrikrishna bhat
First published: