ವಿರಾಟ್ ಕೊಹ್ಲಿ ಒಂದು ಗಂಟೆಗೆ ಸಂಪಾದಿಸುವುದು ಎಷ್ಟು ಗೊತ್ತಾ?; ಇಲ್ಲಿದೆ ಅಚ್ಚರಿಯ ವಿಚಾರ

ವಿರಾಟ್​ ಸಾಕಷ್ಟು ಉತ್ಪನ್ನಗಳ ರಾಯಭಾರಿ. ಅವರು ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ, ವಿರಾಟ್​ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಬಾರಿ ಅವರ ಬೊಕ್ಕಸಕ್ಕೆ ಬರೋಬ್ಬರಿ 228.09 ಕೋಟಿ ರೂ. ಸೇರ್ಪಡೆಯಾಗಿದೆ.

Rajesh Duggumane | news18
Updated:February 9, 2019, 10:12 PM IST
ವಿರಾಟ್ ಕೊಹ್ಲಿ ಒಂದು ಗಂಟೆಗೆ ಸಂಪಾದಿಸುವುದು ಎಷ್ಟು ಗೊತ್ತಾ?; ಇಲ್ಲಿದೆ ಅಚ್ಚರಿಯ ವಿಚಾರ
ವಿರಾಟ್ ಕೊಹ್ಲಿ
Rajesh Duggumane | news18
Updated: February 9, 2019, 10:12 PM IST
ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಬಹುತೇಕರ ಹಾಟ್​ ಫೇವರಿಟ್​. ಕ್ರೀಡಾಂಗಣದಲ್ಲಿ ಅವರು ಬ್ಯಾಟ್​ ಬೀಸುವ ಶೈಲಿ, ಕೇಶ ವಿನ್ಯಾಸ, ಅವರ ಸ್ಮಾರ್ಟ್​ನೆಸ್​ ಸೇರಿ ಹಲವು ವಿಚಾರಕ್ಕೆ ಭಾರತೀಯರು ಮಾತ್ರವಲ್ಲ ವಿದೇಶಿಗರು ಮನ ಸೋತಿದ್ದಾರೆ. ಇಷ್ಟೆಲ್ಲ ಖ್ಯಾತಿ ಪಡೆದುಕೊಂಡಿರುವ ವಿರಾಟ್​ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟಕ್ಕೂ ಅವರ ಒಂದು ಗಂಟೆಯ ಆದಾಯ ಹಲವರ ವರ್ಷದ ಸಂಪಾದನೆಗೆ ಸಮ! ಇದು ಅಚ್ಚರಿ ಎನಿಸಿದರೂ ಸತ್ಯ.

ಕಳೆದ ವರ್ಷ ಫೋರ್ಬ್ಸ್​​ ಬಿಡುಗಡೆ ಮಾಡಿದ ಭಾರತೀಯ ಸೆಲೆಬ್ರಿಟಗಳ ಸಾಲಿನಲ್ಲಿ ವಿರಾಟ್​ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಅದಕ್ಕೆ ಕಾರಣ 2018ರಲ್ಲಿ ಅವರ ಆದಾಯ. ಕಳೆದ ವರ್ಷ ಅವರ ಗಳಿಕೆ 228.09 ಕೋಟಿ ರೂಪಾಯಿ. ಕೊಹ್ಲಿ ಅವರು ಭಾರತೀಯ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಮಾತ್ರವಲ್ಲ, ಬೆಂಗಳೂರು ರಾಯಲ್​ ಚಾಲೆಂಜರ್ಸ್ ತಂಡದ​​ನ ಕ್ಯಾಪ್ಟನ್​ ಕೂಡ ಹೌದು.

ಇದರ ಜೊತೆಗೆ ವಿರಾಟ್​ ಸಾಕಷ್ಟು ಉತ್ಪನ್ನಗಳ ರಾಯಭಾರಿ. ಅವರು ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ, ವಿರಾಟ್​ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಬಾರಿ ಅವರ ಬೊಕ್ಕಸಕ್ಕೆ ಬರೋಬ್ಬರಿ 228.09 ಕೋಟಿ ರೂ. ಸೇರ್ಪಡೆಯಾಗಿದೆ.

ಇದನ್ನೂ ಓದಿ: 2ನೇ ಟಿ-20 ಪಂದ್ಯದಲ್ಲಿ ನೀವ್ಯಾರು ಗಮನಿಸದ 3 ಪ್ರಮುಖ ವಿಷಯಗಳು ಇಲ್ಲಿವೆ ನೋಡಿ

ಅಂದರೆ, ಅವರ ಒಂದು ತಿಂಗಳ ಆದಾಯ 19.07 ಕೋಟಿ ರೂಪಾಯಿ. ಒಂದು ವಾರಕ್ಕೆ ಅವರ ಗಳಿಕೆ 4.75 ಕೋಟಿ ರೂ. ಇನ್ನೂ ವಿವರವಾಗಿ ಹೇಳಬೇಕೆಂದರೆ, ಪ್ರತಿ ದಿನಕ್ಕೆ 67.85 ಲಕ್ಷ ರೂ., ಪ್ರತಿ ಗಂಟೆಗೆ 2.82 ಲಕ್ಷ ರೂ. ಗಳಿಕೆ ಮಾಡುತ್ತಾರೆ. ಈ ವಿಚಾರ ಅನೇಕರ ಹುಬ್ಬೇರಿಸುವಂತೆ ಮಾಡಿದೆ. ಅವರು ತೆಗೆದುಕೊಳ್ಳುವ ಸಂಭಾವನೆ ಕೇಳಿ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಸದ್ಯ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್​ ಸರಣಿಯಿಂದ ವಿರಾಟ್​ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಅರಣ್ಯ ಸುತ್ತಾಡುತ್ತಿರುವ ಚಿತ್ರಗಳನ್ನು ಸಾಮಾಜಿ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಈ ಫೋಟೋಗಳು ಟ್ರೋಲ್​ ಆಗಿದ್ದವು.

ಇದನ್ನೂ ಓದಿ: ರೋಹಿತ್ ಅಬ್ಬರ, ಕ್ರುನಾಲ್ ಸ್ಪಿನ್ ಮೋಡಿ; ಸರಣಿ ಸಮಬಲ ಮಾಡಿಕೊಂಡ ಭಾರತ
Loading...

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...