ಅಭ್ಯಾಸ ಪಂದ್ಯದಲ್ಲಿ 3 ಸ್ಪಿನ್ನರ್​​ಗಳು ಮಾಡಿದ್ದು ಕೇವಲ 11 ಓವರ್​: ಕೊಹ್ಲಿ ರಣತಂತ್ರ ಏನು..?

news18
Updated:July 28, 2018, 9:19 PM IST
ಅಭ್ಯಾಸ ಪಂದ್ಯದಲ್ಲಿ 3 ಸ್ಪಿನ್ನರ್​​ಗಳು ಮಾಡಿದ್ದು ಕೇವಲ 11 ಓವರ್​: ಕೊಹ್ಲಿ ರಣತಂತ್ರ ಏನು..?
news18
Updated: July 28, 2018, 9:19 PM IST
ನ್ಯೂಸ್ 18 ಕನ್ನಡ

ಆಗಸ್ಟ್​ 1 ರಿಂದ ಆರಂಭವಾಗುವ ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಜಿದ್ದಾಜಿದ್ದಿಯ ಫೈಟ್ ಎಂದೇ ಬಿಂಬಿತವಾಗಿರುವ ಇಂಡೋ-ಆಂಗ್ಲೋ ಕದನಕ್ಕೆ ಉಭಯ ತಂಡಗಳು ಭರ್ಜರಿ ಸಿದ್ದಗೊಳ್ಳುತ್ತಿದೆ. ಟೀಂ ಇಂಡಿಯಾ ಈಗಾಗಲೇ ಇಂಗ್ಲೆಂಡ್ ಕೌಂಟಿ ತಂಡದ ಜೊತೆ ಮೂರು ದಿನದ ಅಭ್ಯಾಸ ಪಂದ್ಯವಾಡಿದ್ದು, ಉತ್ತಮ ಪ್ರದರ್ಶನ ತೋರಿದೆ. ಈ ಮಧ್ಯೆ ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಪಿನ್ನರ್​ಗಳಿಗೆ ಹೆಚ್ಚಿನ ಒತ್ತು ನೀಡಲಿಲ್ಲ ಯಾಕೆ? ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಇದಕ್ಕೀಗ ಉತ್ತರ ಸಿಕ್ಕಿದೆ.

ಭಾರತ ಹಾಗೂ ಎಸೆಕ್ಸ್ ನಡುವಣ ಅಭ್ಯಾದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ ಆದರು, ಭಾರತೀಯ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಸ್​​ಗಳ ಬದಲು ವೇಗಿಗಳಿಗೆ ಬೌಲಿಂಗ್ ಮಾಡಲು ಹೆಚ್ಚಿನ ಅವಕಾಶ ನೀಡಲಾಗಿತ್ತು. ಮೊಹಮ್ಮದ್ ಶಮಿ 21 ಓವರ್​​ ಬೌಲಿಂಗ್ ಮಾಡಿದರೆ, ಇಶಾಂತ್ ಶರ್ಮಾ 19, ಉಮೇಶ್ ಯಾದವ್ 18, ಶಾರ್ದೂಲ್ ಠಾಕೂರ್ 13 ಹಾಗೂ ಹಾರ್ದಿಕ್ ಪಾಂಡ್ಯ 12 ಓವರ್​​ ಬೌಲಿಂಗ್ ಮಾಡಿದ್ದು, ಒಟ್ಟು 83 ಓವರ್​​ ವೇಗಿಗಳೇ ಬೌಲಿಂಗ್ ಮಾಡಿದ್ದರು. ಆದರೆ ಸ್ಪಿನ್ನರ್ಸ್​ಗಳಾದ ರವೀಂದ್ರ ಜಡೇಜಾ, ಆರ್. ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಒಟ್ಟು ಸೇರಿ ಬೌಲಿಂಗ್ ಮಾಡಿದ್ದು ಕೇವಲ 11 ಓವರ್​ ಮಾತ್ರ. ಅಶ್ವಿನ್ 5 ಓವರ್​, ಕುಲ್ದೀಪ್ 4 ಹಾಗೂ ಜಡೇಜಾ 2 ಓವರ್​​ಗಳನ್ನಷ್ಟೆ ಎಸೆದರು. ಆದರೆ ಈ ರೀತಿ ನಾಯಕ ಕೊಹ್ಲಿ ಮಾಡಲು ಕಾರಣವಿದೆ. ಟೀಂ ಇಂಡಿಯಾದ ಟ್ರಂಪ್ ಕಾರ್ಡ್​​ಗಳೆಂದರೆ ಅದು ಸ್ಪಿನ್ನರ್​ಗಳು. ಹೀಗಾಗಿ ಮೈಂಡ್ ಗೇಮ್ ಉಪಯೋಗಿಸಿರುವ ಕೊಹ್ಲಿ, ಆಂಗ್ಲರಿಗೆ ತಮ್ಮ ಸ್ಪಿನ್ ತಂತ್ರವನ್ನ ಬಿಟ್ಟು ಕೊಡಲಿಲ್ಲ.

ಈ ತ್ರಿವಳಿ ಸ್ಪಿನ್ನರ್​ಗಳು ಅಭ್ಯಾಸ ಪಂದ್ಯದಲ್ಲಿ ಅಷ್ಟೊಂದು ಬೌಲಿಂಗ್ ಮಾಡಿಲ್ಲವಾದರು ನೆಟ್ಸ್​​ನಲ್ಲಿ ಇಂಗ್ಲೆಂಡ್ ವಾತಾವರಣಕ್ಕೆ ಹೊಂದುವ ರೀತಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಅಶ್ವಿನ್ ಅವರು ಟೆಸ್ಟ್​​ನಲ್ಲಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ತೋರಿದ್ದು, ಮೊದಲ ಟೆಸ್ಟ್​ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ಇನ್ನು ಕುಲ್ದೀಪ್ ಯಾದವ್ ಮತ್ತು ಜಡೇಜಾ ನಡುವೆ ಯಾರನ್ನು ಕಣಕ್ಕಿಳಿಸಲಿದೆ ಎಂಬ ಗೊಂದಲ ತಂಡಕ್ಕೆದುರಾಗಿದೆ. ಕುಲ್ದೀಪ್ ಭರ್ಜರಿ ಫಾರ್ಮ್​​ನಲ್ಲಿದ್ದು ಏಕದಿನ ಸರಣಿಯಲ್ಲಿ ಆಂಗ್ಲರಿಗೆ ಮಣ್ಣುಮುಕ್ಕಿಸಿದ್ದರು. ಹೀಗಾಗಿ ಮೇಲ್ನೋಟಕ್ಕೆ ಎರಡನೇ ಆಯ್ಕೆಯಾಗಿ ಕುಲ್ದೀಪ್ ಅವರನ್ನೆ ಆಡಿಸುವ ಸಾಧ್ಯತೆ ಹೆಚ್ಚಿದೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ