ಭಾರತದ ತಾನ್ಯಾ ಹೇಮಂತ್ (Tanya Hemanth) ಭಾನುವಾರ ನಡೆದ 31ನೇ ಇರಾನ್ (Iran) ಫಜರ್ ಇಂಟರ್‌ನ್ಯಾಷನಲ್ ಚಾಲೆಂಜ್‌ನಲ್ಲಿ ಅಗ್ರ ಶ್ರೇಯಾಂಕದ ತಸ್ನಿಮ್ ಮಿರ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು. ಆದರೆ ಈ ವೇಳೆ ಅವರಿಗೆ ಪ್ರಶಸ್ತಿ ಪಡೆಯುವ ವೇಳೆ ನಡೆದ ಘಟನೆ ಇದೀಗ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು, ಪದಕ ಸಂಗ್ರಹಿಸಲು ವೇದಿಕೆ ಮೇಲೆ ಹೋದಾಗ ತಾನ್ಯಾ ಅವರಿಗೆ ಹಿಜಾಬ್ (Hijab) ಧರಿಸುವಂತೆ ಸಂಘಟಕರು ಹೇಳಿದ್ದಾರೆ. ಸದ್ಯ ಇದೇ ವಿಚಾಋ ಎಲ್ಲಡೆ ಚರ್ಚೆಗೆ ಕಾರಣವಾಗಿದೆ.
ಕ್ರೀಡಾ ಲೋಕಕ್ಕೂ ಕಾಲಿಟ್ಟ ಹಿಜಾಬ್ ವಿವಾದ:
ಇನ್ನು, ಮಹಿಳೆಯರ ತೀವ್ರ ಪ್ರತಿಭಟನೆಗಳು ಮತ್ತು ವಿಶ್ವಾದ್ಯಂತ ಮುಜುಗರದ ಹೊರತಾಗಿಯೂ, ಇರಾನ್ ಹಿಜಾಬ್ ವಿಚಾರದಲ್ಲಿ ಬದಲಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇರಾನ್ ಫಜರ್ ಇಂಟರ್ ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತದ ಆಟಗಾರ್ತಿ ತಾನ್ಯಾ ಹೇಮಂತ್ ಪದಕಕ್ಕಾಗಿ ವೇದಿಕೆಗೆ ತೆರಳಿದಾಗ ಹಿಜಾಬ್ ಧರಿಸುವಂತೆ ಸಂಘಟಕರು ಒತ್ತಾಯಿಸಿದರು. ಹೀಗಾಗಿ ತಾನ್ಯಾ ಅವರು ಜಿಜಾಬ್ ಧರಿಸಿದ್ದರು. ಕರ್ನಾಟಕದ ತಾನ್ಯಾ ಹೇಮಂತ್ ಭಾನುವಾರ ಟೆಹರಾನ್‌ನಲ್ಲಿ ನಡೆದ ಇರಾನ್ ಫಜರ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.
ಚಿನ್ನದ ಪದಕ ಸಂಗ್ರಹಿಸಲು ವೇದಿಕೆಗೆ ಹೋಗುವಾಗ ಆಕೆ ಹಿಜಾಬ್ ಧರಿಸಬೇಕಿತ್ತು. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ 19 ವರ್ಷದ ತಾನ್ಯಾ 30 ನಿಮಿಷಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಬೆಂಗಳೂರಿನ ಆಟಗಾರ್ತಿ ಮೊದಲ ಗೇಮ್‌ನಲ್ಲಿ ಸುಲಭ ಗೆಲುವು ದಾಖಲಿಸಿದರು. ಎರಡನೇ ಗೇಮ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಪ್ರತಿರೋಧ ಒಡ್ಡಿದರು. ಆದರೆ 21-7, 21-11 ಗೇಮ್‌ಗಳಿಂದ ಬಳಿಕ ಗೆದ್ದರು. ಪದಕ ಸಮಾರಂಭಕ್ಕೆ ಸ್ಕಾರ್ಫ್ ಧರಿಸಲು ಸಂಘಟಕರು ತಾನ್ಯಾಗೆ ಕೇಳಿಕೊಂಡರು.
ಇದನ್ನೂ ಓದಿ: Pakistan Team: ಪಾಕ್ ತಂಡದಲ್ಲಿ ಮೋಡಿ ಮಾಡಿದ್ದ ಇಬ್ಬರು ಹಿಂದೂ ಕ್ರಿಕೆಟಿಗರು, ದೇಶ ಬಿಟ್ಟಿದ್ದು ಮಾತ್ರ ಈ ಕಾರಣಕ್ಕೆ!
ಹಿಜಾಬ್ ಧರಿಸುವಂತೆ ಸಂಘಟಕರ ಬೇಡಿಕೆ:
ಮಹಿಳಾ ಪದಕ ವಿಜೇತರಿಗೆ ಹಿಜಾಬ್ ಧರಿಸಬೇಕೆಂದು ಸಂಘಟಕರು ಹೇಳಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಪಂದ್ಯಾವಳಿಯ ಪ್ರಾಸ್ಪೆಕ್ಟಸ್‌ನಲ್ಲಿ ಪೋಡಿಯಂ ಡ್ರೆಸ್ ಕೋಡ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪ್ರಾಸ್ಪೆಕ್ಟಸ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಸ್ಪರ್ಧೆಯ ನಿಯಮಗಳು ಬಟ್ಟೆ ನಿಯಮಗಳ ಬಗ್ಗೆ ಮಾತನಾಡಿವೆ ಎಂದು ಅವರು ಹೇಳಿದ್ದಾರೆ.
ಪಂದ್ಯಾವಳಿಗೆ ಪುರುಷರಿಗಿಲ್ಲ ಪ್ರವೇಶ:
ಇನ್ನು, ವಿಚಿತ್ರವೆಂದರೆ ಇರಾನ್‌ನಲ್ಲಿ ನಡೆದ ಈ ಟೂರ್ನಿಯಲ್ಲಿ ಮಹಿಳೆಯರ ಪಂದ್ಯಗಳಿಗೆ ಯಾವುದೇ ಪುರುಷರಿಗೆ ಪ್ರವೇಶವಿರಲಿಲ್ಲ ಎಂದು ವರದಿಯಾಗಿದೆ.ಅಲ್ಲದೇ ಇನ್ನೂ ವಿಚಿತ್ರವೆಂಬಂತೆ ಪುರುಷರೆಂಬ ಕಾರಣಕ್ಕಾಗಿ ತಂದೆಯನ್ನು ಮತ್ತು ಆಟಗಾರ್ತಿಯರ ತರಬೇತುದಾರರನ್ನು ಒಳಗೆ ಬಿಟ್ಟಿರಲಿಲ್ಲವಂತೆ. ಆದರೆ, ಇದೀಗ ಈ ವಿಷಯಗಳು ವಿಶ್ವದಾದ್ಯಂತ ತೀವ್ರ ಚರ್ಚೆಗೆ ಹಾಗೂ ಟೀಕೆಗೆ ಗುರಿಯಾಗಿದೆ.
ಹಿಜಾಬ್ ಕುರಿತು ಮಾತನಾಡಿದ ತಾನ್ಯಾ:
ಇನ್ನು, ಇರಾನ್‌ನಲ್ಲಿ ನಡೆದ ಹಿಜಾಬ್ ಘಟನೆ ಕುರಿತು ನ್ಯೂಸ್ 18 ಜೊರತೆ ಮಾತನಾಡಿರುವ ತಾನ್ಯಾ, ‘ನಾವು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಡಲು ಇರಾನ್‌ಗೆ ಹೋಗಿದ್ದೆವು. ನಾವು ಅಲ್ಲಿನ ಸರಳ ಸಮಾರಂಭದ ಪದ್ಧತಿಯನ್ನು ಅನುಸರಿಸಿದ್ದೇವೆ. ಇಡೀ ಪಂದ್ಯಾವಳಿಯನ್ನು ಇರಾನ್‌ನಲ್ಲಿ ಮಹಿಳೆಯರು ಆಯೋಜಿಸಿದ್ದರು ಮತ್ತು ಆತಿಥ್ಯವು ತುಂಬಾ ಚೆನ್ನಾಗಿತ್ತು. ನಾವು ಕ್ರೀಡಾ ಪಟುಗಳು ಮತ್ತು ಬೇರೇನೂ ಅಲ್ಲ‘ ಎಂದು ಹೇಳಿಕೊಂಡಿದ್ದಾರೆ. ಆಯೋಜಕರ ಪ್ರಕಾರ, ಈವೆಂಟ್‌ನ ಸಮಾವೇಶದ ಭಾಗವಾಗಿ ಪಂದ್ಯಗಳಲ್ಲಿ ಗೆದ್ದವರು ಪದಕ ಸಮಾರಂಭದಲ್ಲಿ ತಲೆಗೆ ಸ್ಕಾರ್ಫ್ ಧರಿಸುತ್ತಾರೆ. ಕಳೆದ ವರ್ಷ ತಸ್ನಿಮ್ ಭಾರತಕ್ಕೆ ಚಿನ್ನ ಗೆದ್ದಾಗಲೂ ಈ ಪದ್ಧತಿ ಚಾಲ್ತಿಯಲ್ಲಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ