Indian Athletes: ಭಾರತೀಯ ಕ್ರೀಡಾಪಟುಗಳಿಗೆ ಬೇಕಿದೆ ಕ್ರೀಡಾ ನಿರ್ವಾಹಕರ ಪ್ರೋತ್ಸಾಹ, ಚರ್ಚಿಸಬೇಕಾದ ಅಂಶಗಳೇನು?

ಭಾರತದ ಕ್ರೀಡೆಯ ಕುರಿತು ಧನಾತ್ಮಕ ಮಾತುಕತೆಗಳು ಕೇಳಿಬರುತ್ತಿದ್ದು ಪ್ರಧಾನಿಯವರೂ ಕೂಡ ಪದಕ ವಿಜೇತರನ್ನು ಹಾಡಿ ಹೊಗಳಿದ್ದಾರೆ. ಇದೆಲ್ಲದರ ನಡುವೆಯೂ ಭಾರತೀಯ ಕ್ರೀಡಾಕೂಟದ ಆಡಳಿತಾತ್ಮಕ ರಚನೆ, ಫೆಡರೇಶನ್‌ಗಳು ಅಂತೆಯೇ ಅವುಗಳನ್ನು ಮೇಲ್ವಿಚಾರಣೆ ಮಾಡುವ ಜನರತ್ತ ನೋಟ ಹರಿಸಿದಲ್ಲಿ ಕೆಲವೊಂದು ಅಂಶಗಳು ಗೊಂದಲಮಯವಾಗಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಕ್ರೀಡಾಪಟುಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಕ್ರೀಡಾಪಟುಗಳು

  • Share this:
ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತವು ಏಳು ಪದಕಗಳನ್ನು ಜಯಿಸಿದ ನಂತರ ದೇಶದ ಕ್ರೀಡೆಯ ಕುರಿತು ಧನಾತ್ಮಕ ಒಲವು ತೋರಿಬಂದಿದೆ. ಭಾರತೀಯ ಕ್ರೀಡಾಪಟುಗಳು (Athletes) ತಮ್ಮ ಬಲವನ್ನು ಅಂಗಣದಲ್ಲಿ ತೋರಿಸಿದ್ದು, ವಿಶ್ವವೇ ಭಾರತದತ್ತ ಚಿತ್ತ ನೆಡುವಂತೆ ಮಾಡಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಕ್ರೀಡೆಗಿದ್ದ ಗೌರವವನ್ನು ಇಮ್ಮಡಿಗೊಳಿಸಿತ್ತು. ಕುಸ್ತಿ, ಬ್ಯಾಡ್ಮಿಂಟನ್ (ಥಾಮಸ್ ಕಪ್ ಗೆಲುವು ಅತ್ಯುನ್ನತ ಪಾಯಿಂಟ್) ಬಾಕ್ಸಿಂಗ್‌ನಲ್ಲಿ ನಿಖತ್ ಝರೀನ್ ಅವರ ಸಾಧನೆ, ಹಾಕಿ, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ಮತ್ತು ಸ್ಕ್ವಾಷ್‌ನಲ್ಲೂ ಅತ್ಯುತ್ತಮ ಸಾಧನೆ (Achievement) ಮಾಡಿದ್ದಾರೆ .

ಧನಾತ್ಮಕ ಅಭಿಪ್ರಾಯ:
ಅಂತರಾಷ್ಟ್ರೀಯ ಮಟ್ಟದಲ್ಲಿ ನೀರಜ್ ಚೋಪ್ರಾ ತಮ್ಮ ಸ್ಥಾನವನ್ನು ಸ್ಥಿರವಾಗಿ ಕಾಯ್ದುಕೊಂಡಿದ್ದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸೇಬಲ್ ಬೆಳ್ಳಿ ಗೆದ್ದು ಭಾರತದ ಉತ್ತಮ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಒಟ್ಟಿನಲ್ಲಿ ಭಾರತದ ಕ್ರೀಡೆಯ ಕುರಿತು ಧನಾತ್ಮಕ ಮಾತುಕತೆಗಳು ಕೇಳಿಬರುತ್ತಿದ್ದು ಪ್ರಧಾನಿಯವರೂ ಕೂಡ ಪದಕ ವಿಜೇತರನ್ನು ಹಾಡಿ ಹೊಗಳಿದ್ದಾರೆ. ಇದೆಲ್ಲದರ ನಡುವೆಯೂ ಭಾರತೀಯ ಕ್ರೀಡಾಕೂಟದ ಆಡಳಿತಾತ್ಮಕ ರಚನೆ, ಫೆಡರೇಶನ್‌ಗಳು ಅಂತೆಯೇ ಅವುಗಳನ್ನು ಮೇಲ್ವಿಚಾರಣೆ ಮಾಡುವ ಜನರತ್ತ ನೋಟ ಹರಿಸಿದಲ್ಲಿ ಕೆಲವೊಂದು ಅಂಶಗಳು ಗೊಂದಲಮಯವಾಗಿವೆ.

ವಿವಾದಗಳ ಸುಳಿಯಲ್ಲಿ ಕ್ರೀಡಾ ಸಂಸ್ಥೆಗಳು:
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಈಗಾಗಲೇ ರಾಷ್ಟ್ರೀಯ ಮುಜುಗರವನ್ನು ಉಂಟುಮಾಡಿದೆ ಮತ್ತು ಭಾರತವು U-17 ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುವ ಹಕ್ಕನ್ನು ಸದ್ಯ ಕಳೆದುಕೊಂಡಂತಾಗಿದೆ. ಭಾರತೀಯ ಒಲಿಂಪಿಕ್ ಸಂಸ್ಥೆ (IOA) ಕೂಡ ವಿವಾದದಲ್ಲಿ ಸಿಲುಕಿಕೊಂಡಿದೆ. ಚುನಾವಣೆಗಳನ್ನು ಸರಿಯಾದ ಸಮಯಕ್ಕೆ ನಡೆಸದೇ ಇದ್ದ ಕಾರಣ IOA ಅನ್ನು ದೆಹಲಿ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಆಡಳಿತಾಧಿಕಾರಿಗಳ ಸಮಿತಿ (COA) ಅಡಿಯಲ್ಲಿ ಇರಿಸಲಾಗಿದೆ ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ತಡೆಹಿಡಿಯಿತು.

ಇಂತಹ ಸಮಸ್ಯೆಗಳು ಆರಂಭದಲ್ಲಿ ಬಿಲ್ಲುಗಾರಿಕೆ ಹಾಗೂ ಕ್ರಿಕೆಟ್‌ನೊಂದಿಗೆ ಆರಂಭವಾಗಿತ್ತು. ಪ್ರಸ್ತುತ ಭಾರತದಲ್ಲಿ ಹಾಕಿ, ಟೇಬಲ್ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳಿಗೆ ಒಕ್ಕೂಟಗಳನ್ನು ನಡೆಸುತ್ತಿರುವ ನ್ಯಾಯಾಲಯದಿಂದ ನೇಮಕಗೊಂಡ ಸಮಿತಿಗಳನ್ನು ರಚಿಸಲಾಗಿದೆ.

ಚರ್ಚಿಸಬೇಕಾದ ಅಂಶಗಳೇನು?
ಕೆಲವೊಂದು ಅಂಶಗಳನ್ನು ಈ ದೃಷ್ಟಿಯಲ್ಲಿ ಚರ್ಚಿಸಬೇಕಾಗಿದ್ದು ತನಿಖಾಧಿಕಾರಿಗಳ ವ್ಯಾಪ್ತಿಯಲ್ಲಿ IOA (ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌) ಇರಿಸಿರುವುದೇ ಪರಿಹಾರವೇ? IOA ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ಏಕೆ ನಡೆಸಲಿಲ್ಲ? ಚಾರ್ಜ್ ಶೀಟ್ ಮಾಡಿದ ಅಧಿಕಾರಿಗಳು ಅವಕಾಶ ನೀಡದೇ ಇರುವುದು ಕಾರಣವೇ? ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿರದ ಮತ್ತು ಜಾಗತಿಕ ಮಟ್ಟದಲ್ಲಿ ಕಾಳಜಿ ವಹಿಸದೇ ಇರುವರನ್ನು ಪತ್ತೆಮಾಡದೇ ಇರುವ ಸಂವಿಧಾನಗಳನ್ನು ಏಕೆ ರಚಿಸಲಾಗಿದೆ? ಈ ಅಂಶಗಳತ್ತ ಗಮನ ಹರಿಸೋಣ.

ಇದನ್ನೂ ಓದಿ: Virat Kohli - Anushka Sharma: ವೀಕೆಂಡ್​ನಲ್ಲಿ ಗಂಡನ ಜೊತೆ ಜಾಲಿ ರೈಡ್ ಹೋದ ಅನುಷ್ಕಾ! ಇಲ್ಲಿವೆ ಫೋಟೋಸ್

ಆ್ಯಂಟಿಡೋಪಿಂಗ್ ಮಸೂದೆ:
ಭಾರತವು ಆ್ಯಂಟಿಡೋಪಿಂಗ್ (ಕ್ರೀಡೆಗಳಲ್ಲಿನ ಮಾದಕ ಔಷಧಿಗಳ ವಿರುದ್ಧದ ಹೋರಾಟವನ್ನು ಉತ್ತೇಜಿಸಲು, ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದ ಮಸೂದೆ) ಮಸೂದೆಯನ್ನು ಅಂಗೀಕರಿಸಿತು. ಸಂಸತ್ತಿನ ಉಭಯ ಸದನಗಳು ಇದನ್ನು ಅಂಗೀಕರಿಸಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಡೋಪಿಂಗ್ ವಿರೋಧಿ ಯುನೆಸ್ಕೋ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದರಿಂದ ಸಂಸತ್ತು ಇದನ್ನು ಅಂಗೀಕರಿಸಿತು.

ಈ ಮಸೂದೆಗೆ ಸಂಬಂಧಿಸಿದಂತೆ ಭಾರತ ಕೂಡ WADA (ವಿಶ್ವ ಆ್ಯಂಟಿಡೋಪಿಂಗ್) ಮಾನದಂಡಗಳಿಗೆ ಬದ್ಧವಾಗಿರಬೇಕಾಗುತ್ತದೆ. WADA ಒಂದು ವಸ್ತುವನ್ನು ನಿಷೇಧಿಸಿದರೆ ಭಾರತವೂ ಅದನ್ನು ನಿಷೇಧಿಸಬೇಕು. ಅಂತಾರಾಷ್ಟ್ರೀಯ ಕಾನೂನುಗಳು ಅಥವಾ ಆದೇಶಗಳನ್ನು ಅನುಸರಿಸಬೇಕಾದ ಯಾವುದೇ ಪರಿಸ್ಥಿತಿಯಲ್ಲಿ, ಭಾರತವು ತನಗೆ ಇಷ್ಟವಾಗಲಿ ಅಥವಾ ಇಲ್ಲದಿರಲಿ ಅದನ್ನು ಅನುಸರಿಸಬೇಕಾಗುತ್ತದೆ.

ಅಂತರಾಷ್ಟ್ರೀಯ ಮಾನದಂಡಗಳಿಗೆ ಸರಿಹೊಂದುವಂತೆ ಕ್ರೀಡಾ ನಿಯಮ:
ಅಂತರಾಷ್ಟ್ರೀಯ ಆದೇಶವು ವೈಯಕ್ತಿಕ ಮತದಾರರನ್ನು ಅನುಮತಿಸದೇ ಇದ್ದರೆ ಈ ಪರಿಸ್ಥಿತಿಯಿಂದ ಪಾರಾಗಲು ಇರುವ ಒಂದೇ ಮಾರ್ಗವೆಂದರೆ ಅಂತರಾಷ್ಟ್ರೀಯ ಮಾನದಂಡಗಳಿಗೆ ಸರಿಹೊಂದುವಂತೆ ಕ್ರೀಡಾ ನಿಯಮಗಳನ್ನು ತಿದ್ದುಪಡಿ ಮಾಡುವುದಾಗಿದೆ. ಜಾಗತಿಕ ಕ್ರೀಡಾ ವ್ಯವಸ್ಥೆಯಲ್ಲಿ, ಸ್ಥಳೀಯ ಕಾನೂನುಗಳು ಯಾವಾಗಲೂ ಅಂತರಾಷ್ಟ್ರೀಯ ಮಾನದಂಡಗಳೊಂದಿಗೆ ಹೊಂದಿಕೊಂಡಂತಿರಬೇಕು.

ಇದನ್ನೂ ಓದಿ:  KL Rahul-Athiya Shetty: ಶೀಘ್ರದಲ್ಲೇ ರಾಹುಲ್​-ಆತಿಯಾ ಕಲ್ಯಾಣೋತ್ಸವ! ಬಿಗ್​ ನ್ಯೂಸ್​ ಕೊಟ್ಟ ಭಾವಿ ಮಾವ ಸುನೀಲ್​ ಶೆಟ್ಟಿ

ದೆಹಲಿ ಹೈಕೋರ್ಟ್ 31 ಅಕ್ಟೋಬರ್ 2017 ರಂದು COA ಅನ್ನು ನೇಮಕ ಮಾಡಿತ್ತು ಮತ್ತು 10 ನವೆಂಬರ್ 2017 ರಂದು ಸುಪ್ರೀಂ ಕೋರ್ಟ್‌ನಲ್ಲಿ SLP ಅನ್ನು ಸಲ್ಲಿಸಲಾಯಿತು. AIFF (ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ 18 ಮೇ 2022 ರಂದು ನಡೆಸಲಾಯಿತು. ಈ ವಿಷಯದಲ್ಲಿ ಕ್ರೀಡಾಪಟುಗಳಂತೆ, ನಿರ್ವಾಹಕರನ್ನು ಸಹ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಚುನಾವಣೆಗಳು ಸಮಯಕ್ಕೆ ಸರಿಯಾಗಿ ನಡೆಯಬೇಕು ಅಂತೆಯೇ ಸಮಿತಿಯನ್ನು ನೇಮಿಸುವುದನ್ನು ಬಿಟ್ಟು ನ್ಯಾಯಾಲಯಗಳಿಗೆ ಯಾವುದೇ ಆಯ್ಕೆಯಿಲ್ಲ. ಈಗಾಗಲೇ ಪ್ರದರ್ಶನವನ್ನು ನಡೆಸುತ್ತಿರುವ CoA (ನಿರ್ವಾಹಕರ ಸಮಿತಿ) ಗಳನ್ನು ಹೊಂದಿರುವ ಕ್ರೀಡಾ ಫೆಡರೇಶನ್‌ಗಳಿಗೆ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳನ್ನು ತ್ವರಿತವಾಗಿ ಸ್ಥಾಪಿಸಿದರೆ ಅದು ಫೆಡರೇಶನ್‌ಗಳಿಗೆ ಉತ್ತಮವಾಗಿರುತ್ತದೆ.

ಆಶಾಕಿರಣ
1976 ರಿಂದ ಒಲಿಂಪಿಕ್‌ನ ನಂತರದ ಮುಖ್ಯಾಂಶಗಳು ಯಾವಾಗಲೂ ಅಸಮಾನತೆ ಹಾಗೂ ಅತ್ಯಲ್ಪ ಪದಕದ ಕುರಿತಾಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನ ನಂತರ ಈ ಸುದ್ದಿಗಳಲ್ಲಿ ಬದಲಾವಣೆ ಕಂಡುಬಂದಿದೆ. ಭಾರತ ಕೂಡ ಬಹುದೊಡ್ಡ ಕ್ರೀಡಾರಾಷ್ಟ್ರವಾಗುವ ದಿನಗಳು ದೂರವೇನಿಲ್ಲ ಎಂಬ ಆಶಾಕಿರಣವನ್ನು ಕಳೆದ ಸಾಧನೆಗಳು ತೋರಿಸಿವೆ.
Published by:Ashwini Prabhu
First published: