ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಇಂದು ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಅಬ್ಬರಿಸುವ ಮೂಲಕ ಭರ್ಜರಿ ಜಯ ದಾಖಲಿಸಿದ್ದಾರೆ. ಭಾರತ ನಿಗದಿತ 50 ಓವರ್ಗಳಲ್ಲಿ ಇಶಾನ್ ಕಿಶನ್ (Ishan Kishan) ಮತ್ತು ವಿರಾಟ್ ಕೊಹ್ಲಿಯ (Virat Kohli) ಭರ್ಜರಿ ಬ್ಯಾಟಿಂಗ್ ಮೂಲಕ 410 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡವು ನಿಗದಿತ 34 ಓವರ್ ಗಳಲ್ಲಿ 182 ರನ್ ಗಳಿಸಿ, ಆಲ್ ಔಟ್ ಆಗುವ ಮೂಲಕ 227 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಸರಣಿ 2-1 ಅಂತರದಿಂದ ಬಾಂಗ್ಲಾ ಪಾಲಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಕಿಶನ್ ಅಬ್ಬರ ಎಲ್ಲ ಮೆಚ್ಚುಗೆಗೆ ಪಾತ್ರವಾಯಿತು.
ಭಾರತದ ಎದುರು ಮುಗ್ಗರಿಸಿದ ಬಾಂಗ್ಲಾ:
ಅನಾಮುಲ್ ಹಕ್ 8 ರನ್, ನಾಯಕ ಲಿಟನ್ ದಾಸ್ 29 ರನ್, ಶಕೀಬ್ ಅಲ್ ಹಸನ್43 ರನ್, ಮಹಮ್ಮದುಲ್ಲಾ 20 ರನ್, ಅಫೀಫ್ ಹೊಸೈನ್ 3 ರನ್, ಮುಶ್ಫಿಕರ್ ರಹೀಮ್ 7 ರನ್, ಯಾಸಿರ್ ಅಲಿ 25 ರನ್, ಮೆಹದಿ ಹಸನ್ ಮಿರಾಜ್ 3 ರನ್, ಮುಸ್ತಾಫಿಜುರ್ ರೆಹಮಾನ್ 1 ರನ್ ಮತ್ತು ಇಬಾದತ್ ಹೊಸೈನ್ ಶೂನ್ಯಕ್ಕೆ ಔಟಾಗುವ ಮೂಲಕ ಕೊನೆಯ ಪಂದ್ಯದಲ್ಲಿ ಸೋಲನ್ನೊಪ್ಪಿತು.
India record their third-biggest win by margin of runs in men's ODIs 🙌#BANvIND | https://t.co/SRyQabJ2Sf pic.twitter.com/qSEFljYepH
— ICC (@ICC) December 10, 2022
ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಶಾರ್ದೂಲ್ ಠಾಕೂರ್ ಶಾಕ್ ನೀಡಿದರು. ಅವರು 5 ಓವರ್ ಬೌಲ್ ಮಾಡಿ 30 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರು. ಅಲ್ಲದೇ ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.
ಇಶಾನ್ ಕಿಶನ್ ಆಕರ್ಷಕ ದ್ವಿಶತಕ:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಶಿಖರ್ ಧವನ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ ನಂತರ ಇಶನ್ ಕಿಶನ್ 131 ಎಸೆತದಲ್ಲಿ 10 ಸಿಕ್ಸ್ ಮತ್ತು 24 ಫೋರ್ ಮೂಲಕ ಆಕರ್ಷಕ 210 ರನ್ ಮತ್ತು ವಿರಾಟ್ ಕೊಹ್ಲಿ 91 ಎಸೆತದಲ್ಲಿ 2 ಸಿಕ್ಸ್ 11 ಪೋರ್ ಮೂಲಕ 113 ರನ್ ಗಳಿಸುವ ಮೂಲಕ ಇಬ್ಬರೂ ಬಾಂಗ್ಲಾ ವಿರುದ್ಧ ಅಬ್ಬರಿಸಿದರು. ಉಳಿದಂತೆ ಶ್ರೇಯಸ್ ಅಯ್ಯರ್ 3 ರನ್, ನಾಯಕ ಕೆಎಲ್ ರಾಹುಲ್ 8 ರನ್, ವಾಷಿಂಗ್ಟನ್ ಸುಂರ್ 37 ರನ್, ಅಕ್ಷರ್ ಪಟೇಲ್ 20 ರನ್, ಶಾರ್ದೂಲ್ ಠಾಕೂರ್ 3 ರನ್, ಕುಲದೀಪ್ ಯಾದವ್ 3 ರನ್ ಗಳಿಸಿದರು.
ದಾಖಲೆ ಬರೆದ ಕಿಶನ್ ಮತ್ತು ಕೊಹ್ಲಿ:
ಇನ್ನು, ಏಕದಿನ ಮೊದಲ ಶತಕ ಸಿಡಿಸಿದ ಕಿಶನ್ ದ್ವಿಶತಕ ಸಿಡಿಸಿದ ಕಿಶನ್ 4ನೇ ಭಾರತೀಯ ಆಟಗಾರ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ವಿಕೆಟ್ ಕೀಪರ್ ಆಗಿ ದ್ವಿಶತಕ ಮತ್ತು ಅತೀ ಹೆಚ್ಚು ರನ್ ಗಳಿಸಿದ ಧೊನಿಯ ದಾಖಲೆಯನ್ನು ಮುರಿದರು. ಇದಲ್ಲದೇ ವಿರಾಟ್ ಕೊಹ್ಲಿ ಅತರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಮಾದರಲ್ಲಿ ಸಚಿನ್ ಬಳಿಕ ಅತೀಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೇ ಈ ವೇಳೆ 72 ಶತಕ ಸಿಡಿಸಿ ಆಸೀಸ್ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ದಾಖಲೆಯನ್ನು ಮುರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ