• Home
  • »
  • News
  • »
  • sports
  • »
  • Taniya Bhatia: ಇಂಗ್ಲೆಂಡ್​​ನಲ್ಲಿ ಭಾರತ ಕ್ರಿಕೆಟ್​ ಆಟಗಾರ್ತಿಯ ಬ್ಯಾಗ್​ ಕದ್ದ ಖದೀಮರು, ಮಹಿಳಾ​ ತಂಡಕ್ಕೆ ಇಷ್ಟೇನಾ ಸೆಕ್ಯೂರಿಟಿ?

Taniya Bhatia: ಇಂಗ್ಲೆಂಡ್​​ನಲ್ಲಿ ಭಾರತ ಕ್ರಿಕೆಟ್​ ಆಟಗಾರ್ತಿಯ ಬ್ಯಾಗ್​ ಕದ್ದ ಖದೀಮರು, ಮಹಿಳಾ​ ತಂಡಕ್ಕೆ ಇಷ್ಟೇನಾ ಸೆಕ್ಯೂರಿಟಿ?

ತಾನಿಯಾ ಭಾಟಿಯಾ

ತಾನಿಯಾ ಭಾಟಿಯಾ

ಭಾರತೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ತನಿಯಾ ಬಾಟಿಯಾ ಅವರಿಗೆ ಕಹಿ ಅನುಭವವಾಗಿದೆ. ಇತ್ತೀಚೆಗೆ ಟಿ20 ಮತ್ತು ಏಕದಿನ ಸರಣಿಗಾಗಿಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ತಂಡದ ಸದಸ್ಯೆ ತಾನಿಯಾ ಅವರ ಬ್ಯಾಗ್​ ಅನ್ನು ಖದೀಮರು ಎಗರಿಸಿದ್ದಾರೆ

  • Share this:

ಮೊದಲೆಲ್ಲಾ ಕ್ರಿಕೆಟ್​ (Cricket) ಆಟವನ್ನು ಗಂಡಸರು ಮಾತ್ರ ಆಡುತ್ತಿದ್ದರು. ಇತ್ತೀಚೆಗೆ ವುಮೆನ್ಸ್ ಕ್ರಿಕೆಟ್​ ತಂಡ (Women's Cricket Team) ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೆನ್ಸ್​ ಕ್ರಿಕೆಟ್​ಗೆ (Mens Cricket) ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ವುಮೆನ್ಸ್ ಕ್ರಿಕೆಟ್​ಗೂ ಇದೆ. ಮೆನ್ಸ್​ ಕ್ರಿಕೆಟಿಗರಿಗೆ ಯಾವೆಲ್ಲ ವ್ಯವಸ್ಥೆ ಇದೆಯೋ ಆ ವ್ಯವಸ್ಥೆಗಳು ವುಮೆನ್ಸ್ ಕ್ರಿಕೆಟಿಗರಿಗೆ ಸಿಗುತ್ತಿಲ್ಲ ಅನ್ನೋದು ಮಾತ್ರ ಸ್ಪಷ್ಟವಾಗಿದೆ. ಇದಕ್ಕೆ ಈ ಹಿಂದೆ ಕೂಡ ಸಾಕಷ್ಟು ಘಟನೆಗಳು ಇದನ್ನು ಪ್ರೂವ್​ ಮಾಡಿದೆ. ಇದೀಗ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ. ಭಾರತೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ತಾನಿಯಾ ಭಾಟಿಯಾ (Indian Women's Cricket Player Taniya Bhatia)  ಅವರಿಗೆ ಕಹಿ ಅನುಭವವಾಗಿದೆ. ಇತ್ತೀಚೆಗೆ ಟಿ20 ಮತ್ತು ಏಕದಿನ ಸರಣಿಗಾಗಿ ಇಂಗ್ಲೆಂಡ್  (England) ಪ್ರವಾಸಕ್ಕೆ ತೆರಳಿದ್ದ ತಂಡದ ಸದಸ್ಯೆ ತಾನಿಯಾ ಅವರ ಬ್ಯಾಗ್​ ಅನ್ನು ಖದೀಮರು ಎಗರಿಸಿದ್ದಾರೆ. ಅರೇ ಅಷ್ಟು ಸೆಕ್ಯೂರಿಟಿ ಮಧ್ಯೆ ಅಂದೆಥಾ ಕೈಚಳಕ ತೋರಿದ್ದಾರೆ ಖದೀಮರು ಅಂತೀರಾ? ಮುಂದೆ ನೋಡಿ.


ಟೀಂ ಇಂಡಿಯಾ ಆಟಗಾರ್ತಿಯ ಬ್ಯಾಗ್​ ಕದ್ದ ಖದೀಮರು!


ಐಷಾರಾಮಿ ಹೋಟೆಲ್​ನಲ್ಲಿ ಭದ್ರತೆ ಇಲ್ಲದ ಕಾರಣ ಅವರ ಅಮೂಲ್ಯ ಚಿನ್ನಾಭರಣ, ನಗದು ಕಳ್ಳತನವಾಗಿದೆಯಂತೆ. ಲಂಡನ್‌ನ ಹೋಟೆಲ್‌ನಲ್ಲಿ ಇದ್ದಾಗ ಯಾರೋ ತನ್ನ ವಸ್ತುಗಳನ್ನು ಕದ್ದಿದ್ದಾರೆ ಎಂದು ಅವರು ಸೋಮವಾರ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಭಾರತ ತಂಡಕ್ಕೆ ಭದ್ರತೆ ಒದಗಿಸುವಲ್ಲಿ ಇಸಿಬಿ ವಿಫಲವಾಗಿದೆ ಎಂದು ತಾನಿಯಾ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮೆನ್ಸ್​   ಕ್ರಿಕೆಟ್​ ಆಟಗಾರರ ಬಳಿ ಯಾರೂ ಹೋಗದಂತಹ ಸೆಕ್ಯೂರಿಟಿ ಇರುತ್ತೆ. ಆದರೆ, ವುಮೆನ್ಸ್​ ತಂಡಕ್ಕೆ ಕನಿಷ್ಠ ಪಕ್ಷ ಅವರ ಲಗೇಜ್​​ಗಾದರೂ ಸೆಕ್ಯೂರಿಟಿ ನೀಡಬಾರದಾ? ಎಂದು ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಆಕ್ರೋಶ ವ್ಯಕ್ತಪಡಿಸಿದ ಟೀಂ ಇಂಡಿಯಾ ಆಟಗಾರ್ತಿ!


ಸೆಪ್ಟೆಂಬರ್ 10ರಿಂದ 24ರವರೆಗೆ ಇಂಗ್ಲೆಂಡ್ ನೆಲದಲ್ಲಿ ನಡೆದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ತಾನಿಯಾ ಭಾಟಿಯಾ ಕೂಡ ಒಬ್ಬರು. ಬ್ರಿಟನ್ ತಂಡದ ವಿರುದ್ಧ ಒಂದು ಟಿ20 ಪಂದ್ಯದಲ್ಲಿ ಆಡಿದ್ದ ತಾನಿಯಾಗೆ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.


ಇದನ್ನೂ ಓದಿ: ಹೀಗೆ ಆಡಿದರೆ ಈ ಮೂವರು ಆಟಗಾರರು ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಅನುಮಾನವಂತೆ!


ಈ ಸರಣಿಗಾಗಿ ಇಂಗ್ಲೆಂಡ್‌ಗೆ ತೆರಳಿದ್ದ ಮಹಿಳಾ ಕ್ರಿಕೆಟಿಗರು ಲಂಡನ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ತಂಗಿದ್ದರು. ತನಗೆ ನೀಡಲಾಗಿದ್ದ ಹೋಟೆಲ್ ಕೊಠಡಿಯಲ್ಲಿ ಕಳ್ಳತನ ನಡೆದಿದೆ ಎಂದು ತಾನಿಯಾ ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.


ತಾನಿಯಾ ಟ್ವೀಟ್​ನಲ್ಲಿ ಏನಿದೆ?


‘‘ಲಂಡನ್‌ನ ಮ್ಯಾರಿಯೆಟ್ ಹೋಟೆಲ್‌ನ ಆಡಳಿತದ ಬಗ್ಗೆ ನನಗೆ ಆಘಾತ ಮತ್ತು ಅತೃಪ್ತಿ ಇತ್ತು. ಯಾರೋ ನನ್ನ ವೈಯಕ್ತಿಕ ಕೋಣೆಗೆ ಹೋಗಿ ನಗದು, ಕಾರ್ಡ್‌ಗಳು, ಕೈಗಡಿಯಾರಗಳು ಮತ್ತು ಆಭರಣಗಳನ್ನು ಒಳಗೊಂಡ ನನ್ನ ಬ್ಯಾಗ್ ಅನ್ನು ಕದ್ದಿದ್ದಾರೆ. ಈ ಹೋಟೆಲ್ ಸುರಕ್ಷಿತವಲ್ಲ. ಈ ವಿಷಯವನ್ನು ಆದಷ್ಟು ಬೇಗ ತನಿಖೆ ಮಾಡಿ ಪರಿಹರಿಸಲಾಗುವುದು ಎಂದು ನಾನು ಭಾವಿಸುತ್ತೇನೆ"  ಎಂದು ತಾನಿಯಾ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಬಿರಿಯಾನಿಗಾಗಿ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಡಿದ್ದ ಟೀಂ ಇಂಡಿಯಾ ಪ್ಲೇಯರ್ಸ್, ಅಷ್ಟಕ್ಕೂ ಆ ದಿನ ಏನಾಗಿತ್ತು?


'ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪಾಲುದಾರರಾಗಿರುವ ಈ ರೀತಿಯ ಹೋಟೆಲ್‌ನಲ್ಲಿ ಭದ್ರತಾ ಲೋಪ ಅಚ್ಚರಿ ಮೂಡಿಸಿದೆ. ಈ ಘಟನೆಯ ಬಗ್ಗೆ ಅವರೂ ಎಚ್ಚರಿಕೆ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.' ಎಂದು ಸಾನಿಯಾ ಸರಣಿ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಮ್ಯಾರಿಯೊಟ್ ಹೋಟೆಲ್ಸ್ ಮತ್ತು ಇಸಿಬಿಯನ್ನು ಟ್ಯಾಗ್ ಮಾಡಿದ್ದಾರೆ. ಆದಾಗ್ಯೂ, ಈ ಟ್ವೀಟ್‌ಗೆ ಇಸಿಬಿ ಇನ್ನೂ ಪ್ರತಿಕ್ರಿಯಿಸಿಲ್ಲ. ತಾನಿಯಾ ಭಾರತ ತಂಡಕ್ಕಾಗಿ ಇದುವರೆಗೆ 19 ODI ಮತ್ತು 53 T20 ಪಂದ್ಯಗಳನ್ನು ಆಡಿದ್ದಾರೆ.

Published by:ವಾಸುದೇವ್ ಎಂ
First published: