ಏಷ್ಯನ್ ಗೇಮ್ಸ್​ 2018: ಹಾಕಿಯಲ್ಲಿ ಭಾರತಕ್ಕೆ ಕಂಚು; ಸ್ಕ್ಯಾಷ್​​ನಲ್ಲಿ ಬೆಳ್ಳಿ

news18
Updated:September 1, 2018, 5:35 PM IST
ಏಷ್ಯನ್ ಗೇಮ್ಸ್​ 2018: ಹಾಕಿಯಲ್ಲಿ ಭಾರತಕ್ಕೆ ಕಂಚು; ಸ್ಕ್ಯಾಷ್​​ನಲ್ಲಿ ಬೆಳ್ಳಿ
news18
Updated: September 1, 2018, 5:35 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನಲ್ಲಿ ಭಾರತದ ಪುರುಷರ ಹಾಕಿ ತಂಡ ಗೆಲುವು ದಾಖಲಿಸಿದೆ. ಕಂಚಿನ ಪದಕ್ಕಾಗಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 2-1 ಅಂರತದಲ್ಲಿ ಗೆದ್ದಿದೆ.

ಇನ್ನು ಭಾರತದ ಮಹಿಳಾ ಸ್ಕ್ಯಾಷ್ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಎಡವಿದೆ. ಭಾರತದ ಜೋಷ್ನ ಚಿನ್ನಪ್ಪ, ಸುನೈನಾ ಕುರುವಿಲ್ಲಾ, ತನ್ವಿ ಖನ್ನಾ ಮತ್ತು ದೀಪಿಕಾರನ್ನು ಒಳಗೊಂಡ ತಂಡ ಮಲೇಷ್ಯಾವನ್ನು ಮಣಿಸಿ ಫೈನಲ್​​ಗೆ ಲಗ್ಗೆ ಇಟ್ಟಿತ್ತು. ಮಲೇಷ್ಯಾ ವಿರುದ್ಧ 2-0 ಅಂತರದಿಂದ ಗೆಲುವು ಕಂಡಿದ್ದ ಭಾರತ, ಇಂದು ಹಾಂಕಾಂಗ್ ವಿರುದ್ಧದ ಫೈನಲ್ ಪಂದ್ಯದಲ್ಲಿ 0-2ರಿಂದ ಹಿನ್ನಡೆ ಅನುಭವಿಸಿ ಭಾರತ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.

ಈ ಏಷ್ಯಾಡ್​​ನಲ್ಲಿ ಭಾರತ 15 ಚಿನ್ನ, 24 ಬೆಳ್ಳಿ ಹಾಗೂ 30 ಕಂಚು ಸೇರಿ 69 ಪದಕಗಳನ್ನು ತನ್ನದಾಗಿಸಿ 8ನೇ ಸ್ಥಾನದಲ್ಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ