• Home
  • »
  • News
  • »
  • sports
  • »
  • T20 WC 2022 IND vs ZIM: ಟಾಸ್​ ಗೆದ್ದ ಟೀಂ ಇಂಡಿಯಾ, ತಂಡಕ್ಕೆ ಕಂಬ್ಯಾಕ್ ಮಾಡಿದ ಪಂತ್​

T20 WC 2022 IND vs ZIM: ಟಾಸ್​ ಗೆದ್ದ ಟೀಂ ಇಂಡಿಯಾ, ತಂಡಕ್ಕೆ ಕಂಬ್ಯಾಕ್ ಮಾಡಿದ ಪಂತ್​

IND vs ZIM

IND vs ZIM

T20 WC 2022 IND vs ZIM: ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಬೃಹತ್ ಮೊತ್ತದ ರನ್ ಕಲೆಹಾಕುವ ಸಾಧ್ಯತೆ ಇದೆ.

  • Share this:

ಟಿ20 ವಿಶ್ವಕಪ್ 2022ರ (T20 WC 2022) ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ (IND vs ZIM) ತಂಡಗಳು ಸೆಣಸಾಡಲಿವೆ. ಈಗಾಗಲೇ ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇದು ಔಪಚಾರಿಕ ಪಂದ್ಯವಾದರೂ ಸಹ ಟಾಪ್​ ತಂಡವಾಗಿ ಸೆಮೀಸ್​ ಪ್ರವೇಶಿಸಿದರೆ ಭಾರತಕ್ಕೆ ಅನೇಕ ಲಾಭವಾಗುವ ಸಾಧ್ಯತೆ ಇದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಬೃಹತ್ ಮೊತ್ತದ ರನ್ ಕಲೆಹಾಕುವ ಸಾಧ್ಯತೆ ಇದೆ.


ಪಂದ್ಯದ ವಿವರ:


ಇಂದು ಟಿ20 ವಿಶ್ವಕಪ್​ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ಅಲ್ಲಿ ವೀಕ್ಷಿಸಬಹುದು. ಅಲ್ಲದೇ ಸ್ಟಾರ್​ ಸ್ಪೋರ್ಟ್ಸ್ ಮತ್ತು ಲೈವ್ ಸ್ಟೀಮಿಂಗ್​ ಅನ್ನು ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ ಅಲ್ಲಿ ನೋಡಬಹುದು.IND vs ZIM  ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಶ್ವಿನ್, ಅಕ್ಷರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಶ್ ದೀಪ್ ಸಿಂಗ್


ಇದನ್ನೂ ಓದಿ: PAK vs BAN: ಬಾಂಗ್ಲಾ ವಿರುದ್ಧ ರೋಚಕ ಜಯ, ಸೆಮೀಸ್​ಗೆ ಎಂಟ್ರಿಕೊಟ್ಟ ಪಾಕ್​


ಜಿಂಬಾಬ್ವೆ ಪ್ಲೇಯಿಂಗ್​ 11: ವೆಸ್ಲಿ ಮಾಧೆವೆರೆ, ಕ್ರೇಗ್ ಇರ್ವಿನ್ (ಸಿ), ರೆಗಿಸ್ ಚಕಬ್ವಾ (ವಾಕ್), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಟಾಮ್ ಮುನ್ಯೊಂಗಾ, ರಿಯಾನ್ ಬರ್ಲೆ, ಟೆಂಡೈ ಚಟಾರಾ, ರಿಚರ್ಡ್ ನಗರ್ವಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್.


ಭಾರತ-ಜಿಂಬಾಬ್ವೆ ಹೆಡ್​ ಟು ಹೆಡ್​:


ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮೊದಲು ಉಭಯ ತಂಡಗಳ ನಡುವೆ ಏಳು ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 5 ಗೆದ್ದಿದ್ದರೆ, ಬಾಂಗ್ಲಾದೇಶ ಎರಡರಲ್ಲಿ ಗೆಲುವು ಸಾಧಿಸಿದೆ. ಈ ಎಲ್ಲಾ ಪಂದ್ಯಗಳು ಜಿಂಬಾಬ್ವೆಯಲ್ಲಿ ನಡೆದಿವೆ. ಇಬ್ಬರೂ ಮೊದಲ ಬಾರಿಗೆ ಟಿ20 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ.


ಇದನ್ನೂ ಓದಿ: SA vs NED: ನೆದರ್ಲ್ಯಾಂಡ್ಸ್ ವಿರುದ್ಧ ಸೋತ ಆಫ್ರಿಕಾ, ಸೆಮೀಸ್​ಗೆ ಟೀಂ ಇಂಡಿಯಾ ಎಂಟ್ರಿ


ಕಾರ್ತಿಕ್​ ಬದಲಿಗೆ ಪಂತ್​ಗೆ ಸ್ಥಾನ:


ಇನ್ನು, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ವಿಶ್ರಾಂತಿ ನೀಡಲಾಗಿದ್ದು, ರಿಷಭ್ ಪಂತ್​ಗೆ ಸ್ಥಾನ ನೀಡಲಾಗಿದೆ. ಈ ಬಾರಿ ಪಂತ್ ಆಯ್ಕೆ ಆದರೂ ಒಂದೇ ಒಂದು ಪಂದ್ಯವನ್ನೂ ಈವರೆಗೆ ಆಡಿರಲಿಲ್ಲ. ಇದೇ ಕಾರಣಕ್ಕಾಗಿ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಂತ್​ಗೆ ಅವಕಾಶ ನೀಡಿದ್ದಾರೆ.

Published by:shrikrishna bhat
First published: