• Home
  • »
  • News
  • »
  • sports
  • »
  • T20 WC 2022 IND vs ZIM: ಮೆಲ್ಬೋರ್ನ್​ನಲ್ಲಿ ಪ್ರಜ್ವಲಿಸಿದ ಸೂರ್ಯ, ಜಿಂಬಾಬ್ವೆ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್​

T20 WC 2022 IND vs ZIM: ಮೆಲ್ಬೋರ್ನ್​ನಲ್ಲಿ ಪ್ರಜ್ವಲಿಸಿದ ಸೂರ್ಯ, ಜಿಂಬಾಬ್ವೆ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್​

IND vs ZIM

IND vs ZIM

IND vs ZIM: ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ ಜಿಂಬಾಬ್ವೆ ತಂಡಕ್ಕೆ 187 ರನ್ ಟಾರ್ಗೆಟ್ ನೀಡಿದೆ. ಭಾರತದ ಪರ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಕರ್ಷಕ್ ಅರ್ಧಶತಕ ಸಿಡಿಸಿ ಮಿಂಚಿದರು.

  • Share this:

ಟಿ20 ವಿಶ್ವಕಪ್ 2022ರ (T20 WC 2022) ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ (IND vs ZIM) ತಂಡಗಳು ಸೆಣಸಾಡುತ್ತಿವೆ. ಈಗಾಗಲೇ ಸೆಮಿ ಫೈನಲ್ ತಲುಪಿರುವ ಭಾರತಕ್ಕೆ ಇದು ಔಪಚಾರಿಕ ಪಂದ್ಯವಾದರೂ ಸಹ ಟಾಪ್​ ತಂಡವಾಗಿ ಸೆಮೀಸ್​ ಪ್ರವೇಶಿಸಿದರೆ ಭಾರತಕ್ಕೆ ಅನೇಕ ಲಾಭವಾಗುವ ಸಾಧ್ಯತೆ ಇದೆ. ಈಗಾಗಲೇ ಟಾಸ್​ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸುವ ಮೂಲಕ ಜಿಂಬಾಬ್ವೆ ತಂಡಕ್ಕೆ 187 ರನ್ ಟಾರ್ಗೆಟ್ ನೀಡಿದೆ. ಭಾರತದ ಪರ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಕರ್ಷಕ್ ಅರ್ಧಶತಕ ಸಿಡಿಸಿ ಮಿಂಚಿದರು.


ಭರ್ಜರಿ ಬ್ಯಾಟ್ ಮಾಡಿದ ಸೂರ್ಯ-ರಾಹುಲ್:


ಇನ್ನು, ಜಿಂಬಾಬ್ವೆ ವಿರುದ್ಧ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಭಾರತದ ಪರ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಸಿಡಿಸಿದರು. ಕೆಎಲ್ ರಾಹುಲ್ 35 ಎಸೆತದಲ್ಲಿ 3-3 ಪೋರ್ ಮತ್ತು ಸಿಕ್ಸ್ ಸಿಡಿಸಿ 51 ರನ ಗಳಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತದಲ್ಲಿ 4 ಸಿಕ್ಸ್ 6 ಬೌಂಡರಿಗಳ ನೆರವಿನಿಂದ ಅಜೇಯರಾಗಿ 61 ರನ್ ಗಳಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 26 ರನ್, ರಿಷಭ್ ಪಂತ್ 3 ರನ್ ಮತ್ತು ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಮಿಂಚಿದರು.ಜಿಂಬಾಬ್ವೆ ಬೌಲಿಂಗ್​:


ಇನ್ನು, ಜಿಂಬಾಬ್ವೆ ತಂಡ ಟಾಸ್​ ಸೋತು ಮೊದಲು ಬೌಲಿಂಗ್ ಆರಂಭಿಸಿತು. ಆದರೆ ಆರಂಭಿಕ ಹಂತದಲ್ಲಿ ಜಿಂಬಾಬ್ವೆ ಬೌಲರ್​ಗಳು ಉತ್ತಮ ದಾಳಿ ನಡೆಸಿದರು. ಆದರೆ ಕೊನೆಯಲ್ಲಿ ಭಾರತೀಯರ ಅಬ್ಬರಕ್ಕೆ ಬೌಲಿಂಗ್​ ಲಯ ಕಳೆದುಕೊಂಡರು. ಉಳಿದಂತೆ ಜಿಂಬಾಬ್ವೆ ಪರ ಸೇನ್​ ವಿಲಿಯಮ್ಸ್ 2 ವಿಕೆಟ್ ಪಡೆದರೆ, ರಿಚರ್ಡ್ ನಗರ್ವಾ, ಬ್ಲೆಸ್ಸಿಂಗ್ ಮತ್ತು ಸಿಕಂದರ್ ರಜಾ ತಲಾ 1 ಒಂದು ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: IND vs ZIM: ಸೆಮಿಫೈನಲ್ ತಲುಪಿದ ಭಾರತ, ಆದ್ರೂ ಜಿಂಬಾಬ್ವೆ ವಿರುದ್ಧದ ಪಂದ್ಯ ಮಹತ್ವದ್ದಂತೆ!


ಸಾವಿರ ರನ್ ಪೂರೈಸಿದ ಸೂರ್ಯ:


ಇನ್ನು, ಸೂರ್ಯಕುಮಾರ್ ಯಾದವ್ ಈ ಕ್ಯಾಲೆಂಡರ್ ವರ್ಷದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು, ಅಲ್ಲದೇ 1000 ರನ್ ಸಹ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಪಾಕ್​ ರಿಜ್ವಾನ್ ಸನಿಹಕ್ಕೆ ಬಂದಿದ್ದಾರೆ.


IND vs ZIM  ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಶ್ವಿನ್, ಅಕ್ಷರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಶ್ ದೀಪ್ ಸಿಂಗ್.


ಇದನ್ನೂ ಓದಿ: Danushka Gunathilaka: ಅತ್ಯಾಚಾರ ಆರೋಪ, ಶ್ರೀಲಂಕಾದ ಸ್ಟಾರ್​ ಬ್ಯಾಟ್ಸ್​ಮನ್ ಧನುಷ್ಕಾ ಗುಣತಿಲಕ​ ಬಂಧನ


ಜಿಂಬಾಬ್ವೆ ಪ್ಲೇಯಿಂಗ್​ 11: ವೆಸ್ಲಿ ಮಾಧೆವೆರೆ, ಕ್ರೇಗ್ ಇರ್ವಿನ್ (ಸಿ), ರೆಗಿಸ್ ಚಕಬ್ವಾ (ವಾಕ್), ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಟಾಮ್ ಮುನ್ಯೊಂಗಾ, ರಿಯಾನ್ ಬರ್ಲೆ, ಟೆಂಡೈ ಚಟಾರಾ, ರಿಚರ್ಡ್ ನಗರ್ವಾ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್.

Published by:shrikrishna bhat
First published: