• Home
  • »
  • News
  • »
  • sports
  • »
  • T20 WC 2022 IND vs ZIM: ನಾಳೆ ಭಾರತ-ಜಿಂಬಾಬ್ವೆ ಪಂದ್ಯ; ಇಲ್ಲಿದೆ ಸಮಯ, ಲೈವ್​ ಸ್ಟ್ರೀಮಿಂಗ್​ ಸಂಪೂರ್ಣ ವಿವರ

T20 WC 2022 IND vs ZIM: ನಾಳೆ ಭಾರತ-ಜಿಂಬಾಬ್ವೆ ಪಂದ್ಯ; ಇಲ್ಲಿದೆ ಸಮಯ, ಲೈವ್​ ಸ್ಟ್ರೀಮಿಂಗ್​ ಸಂಪೂರ್ಣ ವಿವರ

IND vs ZIM

IND vs ZIM

IND vs ZIM: ಟಿ20 ವಿಶ್ವಕಪ್ 2022 ರಲ್ಲಿ ಟೀಮ್ ಇಂಡಿಯಾ ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗಿದೆ. ಸೆಮಿಫೈನಲ್‌ಗೆ ಪ್ರವೇಶಿಸಲು ರೋಹಿತ್ ಶರ್ಮಾ ತಂಡವು ಗೆಲ್ಲಲೇಬೇಕಾದ ಹೋರಾಟದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ.

  • Share this:

ಟಿ20 ವಿಶ್ವಕಪ್ 2022 ರಲ್ಲಿ (T20 WC 2022) ಟೀಮ್ ಇಂಡಿಯಾ (Team India) ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗಿದೆ. ಗ್ರೂಪ್ 2ರಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಲು ರೋಹಿತ್ ಶರ್ಮಾ ತಂಡವು ಗೆಲ್ಲಲೇಬೇಕಾದ ಹೋರಾಟದಲ್ಲಿ ಜಿಂಬಾಬ್ವೆಯನ್ನು (IND vs ZIM) ಎದುರಿಸಲು ಸಿದ್ಧವಾಗಿದೆ. ಮೆಲ್ಬೋರ್ನ್ (Melbourne) ಮೈದಾನದಲ್ಲಿ ಭಾನುವಾರ ಮಧ್ಯಾಹ್ನ. 1.30ಕ್ಕೆ ಆರಂಭವಾಗಲಿರುವ ಈ ಪಂದ್ಯದಲ್ಲಿ ಭಾರತ ಗೆದ್ದರೆ ಇತರ ತಂಡಗಳ ಫಲಿತಾಂಶ ಏನೇ ಇರಲಿ ಸೆಮೀಸ್​ಗೆ ನೇರವಾಗಿ ತಲುಪಲಿದೆ. ಅಷ್ಟೇ ಅಲ್ಲ ಗ್ರೂಪ್ ಟಾಪರ್ ಆಗಿಯೂ ಇರಲಿದೆ. ಅವರು ಸೋತರೆ, ಅವರು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಈ ಪಂದ್ಯವನ್ನು ಗೆಲ್ಲುವ ಗುರಿಯೊಂದಿಗೆ ಭಾರತ ಅಖಾಡಕ್ಕಿಳಿಯಲಿದೆ.


ಪಂದ್ಯದ ವಿವರ:


ಇಂದು ಟಿ20 ವಿಶ್ವಕಪ್​ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದೆ. ಪಂದ್ಯದ ಟಾಸ್​ 1 ಗಂಟೆಗೆ ಮತ್ತು ಪಂದ್ಯ 1:30ಕ್ಕೆ ಭಾರತೀಯ ಕಾಲಮಾನದಲ್ಲಿ ಆರಂಭವಾಗಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ಅಲ್ಲಿ ವೀಕ್ಷಿಸಬಹುದು. ಅಲ್ಲದೇ ಸ್ಟಾರ್​ ಸ್ಪೋರ್ಟ್ಸ್ ಮತ್ತು ಲೈವ್ ಸ್ಟೀಮಿಂಗ್​ ಅನ್ನು ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ ಅಲ್ಲಿ ನೋಡಬಹುದು.


ಪಿಚ್ ರಿಪೋರ್ಟ್:


ಮೆಲ್ಬೋರ್ನ್ ಪಿಚ್ ಬ್ಯಾಟ್ ಮತ್ತು ಬಾಲ್ ಎರಡಕ್ಕೂ ಅನುಕೂಲಕರವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಬೌಲರ್‌ಗಳು ಬಲವಾದ ಬೌನ್ಸ್ ಪಡೆಯುತ್ತಾರೆ, ಆದರೆ ಸ್ಪಿನ್ನರ್‌ಗಳಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಭಾರತ ಇಲ್ಲಿ ಐದು ಬಾರಿ ಆಡಿದ್ದು, 3 ಬಾರಿ ಗೆದ್ದು ಒಮ್ಮೆ ಸೋತಿದೆ. ಪಾಕಿಸ್ತಾದ ವಿರುದ್ಧವೂ ವಿಶ್ವಕಪ್​ನ ಮೊದಲ ಪಂದ್ಯವನ್ನು ಭಾರತದ ಮೆಲ್ಬೋರ್ನ್‌ನಲ್ಲಿಆಡಿತ್ತು. ಈ ಪಂದ್ಯದಲ್ಲಿ ಭಾರತ ರೋಚಕ ಜಯ ದಾಖಲಸಿತ್ತು. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ: T20 World Cup 2022: ಬ್ಲಾಕ್‌ಬಸ್ಟರ್ ಸಂಡೇ, ಒಂದೇ ದಿನ ಮೂರು ಪಂದ್ಯಗಳು; ಇಲ್ಲಿದೆ ವೇಳಾಪಟ್ಟಿ


ರೋಹಿತ್ ಫಾರ್ಮ್ ಭಾರತದ ಚಿಂತೆ:


ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಮುಖ ಸಮಸ್ಯೆ ಓಪನಿಂಗ್ ಆಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಆರಂಭಿಕರಾದ ರಾಹುಲ್ ಮತ್ತು ರೋಹಿತ್ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ರಾಹುಲ್ ಅರ್ಧಶತಕ ಗಳಿಸಿ ಫಾರ್ಮ್ ಗೆ ಬಂದಿರುವುದು ಉತ್ತಮ ಫಲಿತಾಂಶ. ಆದರೆ ನಾಯಕ ರೋಹಿತ್ ಶರ್ಮಾ ಅವರ ಫಾರ್ಮ್ ಈಗ ಆತಂಕಕಾರಿಯಾಗಿದೆ.


ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಭಾರವನ್ನು ಹೊತ್ತಿದ್ದಾರೆ. ಹಾರ್ದಿಕ್ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಸಮಸ್ಯೆಗಳನ್ನು ಭಾರತ ತೆರವುಗೊಳಿಸಿದರೆ, ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ತಡೆಯುವುದು ಎದುರಾಳಿಗಳಿಗೆ ಸುಲಭದ ಮಾತಲ್ಲ ಎನ್ನಬಹುದು.


ಇದನ್ನೂ ಓದಿ: HBD Virat Kohli: ಕೊಹ್ಲಿಯ ಅಪರೂಪದ ಫೋಟೋ ಹಂಚಿಕೊಂಡ ಅನುಷ್ಕಾ, ಮಡದಿಯ ವಿಶ್​ಗೆ ಮನಸೋತ ವಿರಾಟ್


IND vs ZIM ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಶ್ವಿನ್, ಅಕ್ಷರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಶ್ ದೀಪ್ ಸಿಂಗ್

 ಜಿಂಬಾಬ್ವೆ ಸಂಭಾವ್ಯ ಪ್ಲೇಯಿಂಗ್​ 11: ಕ್ರೇಗ್ ಎರ್ವಿನ್ (ಸಿ), ರಿಯಾನ್ ಬರ್ಲ್, ರೆಗಿಸ್ ಚಕಬ್ವಾ, ಟೆಂಡೈ ಚಟಾರಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನಾಗರವಾ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಸೀನ್ ವಿಲಿಯಮ್ಸ್, ಬ್ಲೆಸ್ಸಿಂಗ್

Published by:shrikrishna bhat
First published: