• Home
  • »
  • News
  • »
  • sports
  • »
  • T20 WC 2022 IND vs ZIM: ಇಂದು ಭಾರತ-ಜಿಂಬಾಬ್ವೆ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

T20 WC 2022 IND vs ZIM: ಇಂದು ಭಾರತ-ಜಿಂಬಾಬ್ವೆ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND sv ZIM

IND sv ZIM

T20 WC 2022 IND vs ZIM: ಟಿ20 ವಿಶ್ವಕಪ್ 2022 ರಲ್ಲಿ ಟೀಮ್ ಇಂಡಿಯಾ ಇಂದು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಆದರೆ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾಗೆ ಇದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು.

  • Share this:

ಟಿ20 ವಿಶ್ವಕಪ್ 2022 ರಲ್ಲಿ (T20 WC 2022) ಟೀಂ ಇಂಡಿಯಾ (Team India)  ಜಿಂಬಾಬ್ವೆಯನ್ನು (IND vs ZIM) ಎದುರಿಸಲು ಸಿದ್ಧವಾಗಿದೆ. ಮೆಲ್ಬೋರ್ನ್ (Melbourne) ಮೈದಾನದಲ್ಲಿ ಭಾನುವಾರ ಮಧ್ಯಾಹ್ನ. 1.30ಕ್ಕೆ ಆರಂಭವಾಗಲಿರುವ ಈ ಪಂದ್ಯದಲ್ಲಿ ಭಾರತ ಔಪಚಾರಿಕ ಎಂಬ ಪಂದ್ಯದಲ್ಲಿ ಗ್ರೂಪ್ 2ರ ಅಗ್ರಸ್ಥಾನಕ್ಕಾಗಿ ಕಾದಾಡಲಿದೆ.  ಆದರೆ ನೆದರ್ಲ್ಯಾಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತಿದ್ದರಿಂದ ಈಗಾಗಲೇ ಟಿ20 ವಿಶ್ವಕಪ್​ 2022ರಲ್ಲಿ ಗ್ರೂಪ್ 2ರ ಮೊದಲ ತಂಡವಾಗಿ ಭಾರತ ಸೆಮೀಸ್​ ಹಂತಕ್ಕೇರಿದೆ. ಆದರೂ ಗ್ರೂಪ್​2ರಲ್ಲಿ ಅಗ್ರಸ್ಥಾನವಾಗಿ ಸೆಮಿಫೈನಲ್ ತಲುಪುವ ಸಲುವಾಗಿ ಇಂದು ಜಿಂಬಾಬ್ವೆ ವಿರುದ್ಧ ಸೆಣಸಲಿದೆ. 


ಪಂದ್ಯದ ವಿವರ:


ಇಂದು ಟಿ20 ವಿಶ್ವಕಪ್​ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದೆ. ಪಂದ್ಯದ ಟಾಸ್​ 1 ಗಂಟೆಗೆ ಮತ್ತು ಪಂದ್ಯ 1:30ಕ್ಕೆ ಭಾರತೀಯ ಕಾಲಮಾನದಲ್ಲಿ ಆರಂಭವಾಗಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ಡಿಡಿ ಸ್ಪೋರ್ಟ್ಸ್ ಅಲ್ಲಿ ವೀಕ್ಷಿಸಬಹುದು. ಅಲ್ಲದೇ ಸ್ಟಾರ್​ ಸ್ಪೋರ್ಟ್ಸ್ ಮತ್ತು ಲೈವ್ ಸ್ಟೀಮಿಂಗ್​ ಅನ್ನು ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ ಅಲ್ಲಿ ನೋಡಬಹುದು.


ಪಿಚ್ ರಿಪೋರ್ಟ್:


ಮೆಲ್ಬೋರ್ನ್ ಪಿಚ್ ಬ್ಯಾಟ್ ಮತ್ತು ಬಾಲ್ ಎರಡಕ್ಕೂ ಅನುಕೂಲಕರವಾಗಿದೆ ಎಂಬ ಖ್ಯಾತಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಬೌಲರ್‌ಗಳು ಬಲವಾದ ಬೌನ್ಸ್ ಪಡೆಯುತ್ತಾರೆ, ಆದರೆ ಸ್ಪಿನ್ನರ್‌ಗಳಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಭಾರತ ಇಲ್ಲಿ ಐದು ಬಾರಿ ಆಡಿದ್ದು, 3 ಬಾರಿ ಗೆದ್ದು ಒಮ್ಮೆ ಸೋತಿದೆ. ಪಾಕಿಸ್ತಾದ ವಿರುದ್ಧವೂ ವಿಶ್ವಕಪ್​ನ ಮೊದಲ ಪಂದ್ಯವನ್ನು ಭಾರತದ ಮೆಲ್ಬೋರ್ನ್‌ನಲ್ಲಿಆಡಿತ್ತು. ಈ ಪಂದ್ಯದಲ್ಲಿ ಭಾರತ ರೋಚಕ ಜಯ ದಾಖಲಸಿತ್ತು. ಹೀಗಾಗಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ: Danushka Gunathilaka: ಅತ್ಯಾಚಾರ ಆರೋಪ, ಶ್ರೀಲಂಕಾದ ಸ್ಟಾರ್​ ಬ್ಯಾಟ್ಸ್​ಮನ್ ಧನುಷ್ಕಾ ಗುಣತಿಲಕ​ ಬಂಧನ


ಪಂತ್​ಗೆ ಸಿಗಲಿದೆಯಾ ಚಾನ್ಸ್:


ಇನ್ನು, ಈವರೆಗೂ ಟಿ20 ವಿಶ್ವಕಪ್​ 2022ರಲ್ಲಿ ರಿಷಭ್ ಪಂತ್​ಗೆ ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇಂದಿನ ಜಿಂಬಾಬ್ವೆ ವಿರುದ್ಧದ ತಂಡದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಭಾರತ ಸೆಮೀಸ್ ತಲುಪಿರುವುದರಿಂದ ತಂಡದಲ್ಲಿ ಕೆಲ ಬದಲಾವಣೆ ಜೊತೆ ಕಣಕ್ಕಿಳಿಯುವ ಸಾಧ್ಯತೆಯೂ ಇದ್ದು, ಯಾವ ಬದಲಾವಣೆ ಮಾಡಲಿದೆ ಎಂದು ಕಾದು ನೊಡಬೇಕಿದೆ. ಅಲ್ಲದೇ ಆರಂಭಿಕರಾಗಿ ರೋಹಿತ್ ಶರ್ಮಾ ಸಹ ಇಂದಿನ ಪಂದ್ಯದ ಮೂಲಕವಾದರೂ ಮತ್ತೆ ಫಾರ್ಮ್​ಗೆ ಮರಳಬೇಕಿರುವುದು ಅತ್ಯಂತ ಮಹತ್ವದ್ದಾಗಿದೆ.


ಇದನ್ನೂ ಓದಿ: SA vs NED: ನೆದರ್ಲ್ಯಾಂಡ್ಸ್ ವಿರುದ್ಧ ಸೋತ ಆಫ್ರಿಕಾ, ಸೆಮೀಸ್​ಗೆ ಟೀಂ ಇಂಡಿಯಾ ಎಂಟ್ರಿ


IND vs ZIM ಸಂಭಾವ್ಯ ಪ್ಲೇಯಿಂಗ್​ 11:


ಭಾರತ ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅಶ್ವಿನ್, ಅಕ್ಷರ್ ಪಟೇಲ್, ಶಮಿ, ಭುವನೇಶ್ವರ್ ಕುಮಾರ್, ಅರ್ಶ್ ದೀಪ್ ಸಿಂಗ್


ಜಿಂಬಾಬ್ವೆ ಸಂಭಾವ್ಯ ಪ್ಲೇಯಿಂಗ್​ 11: ಕ್ರೇಗ್ ಎರ್ವಿನ್ (ಸಿ), ರಿಯಾನ್ ಬರ್ಲ್, ರೆಗಿಸ್ ಚಕಬ್ವಾ, ಟೆಂಡೈ ಚಟಾರಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನಾಗರವಾ, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ಸೀನ್ ವಿಲಿಯಮ್ಸ್, ಬ್ಲೆಸ್ಸಿಂಗ್.

Published by:shrikrishna bhat
First published: