ಭಾರತ ತಂಡ ಸದ್ಯ ಬಿಡುವಿಲ್ಲದೇ ಸರಣಿಗಳಲ್ಲಿ ಆಟವಾಡುತ್ತಿದೆ. ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ತೊಡಗಿಕೊಳ್ಳುತ್ತಿರುವ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನೂ ಮಾಡಲಿದೆ. ಈ ಸಂಬಂಧ ಇಮದು ಬಿಸಿಸಿಐ (BCCI) ಟಿಂ ಇಂಡಿಯಾವನ್ನು ಪ್ರಕಟಿಸಿದೆ. ಹೌದು, ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು (Indian cricket team) ಇಂದು BCCI ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ಮತ್ತೆ ನಾಯಕನಾಗಿ ಶಿಖರ್ ಧವನ್ (Shikhar Dhawan) ಮುಂದುವರೆಯಲಿದ್ದಾರೆ. ಈಗಾಗಲೇ ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 3 ಏಕದಿನ ಪಂದ್ಯವನ್ನು ಗೆದ್ದಿದ್ದು, ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಅಲ್ಲದೇ ತಂಡದಲ್ಲಿ ಮತ್ತೆ ಯುವ ಪಡೆಯನ್ನೇ ಆಯ್ಕೆ ಮಾಡಿದ್ದು, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ:
ಇಂದು ಬಿಸಿಸಿಐ ಭಾರತ ತಂಡದ ಜಿಂಬಾಬ್ವೆ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ. ಈ ಕುರಿತು ಅಧಿಕೃತವಾಗಿ ಟ್ವಿಟರ್ನಲ್ಲಿ ತಂಡವನ್ನು ತಿಳಿಸಿದ್ದು, ಟೀಂ ಇಂಡಿಯಾದ ತಂಡ ಈ ಕೆಳಗಿನಂತಿದೆ.
#TeamIndia for 3 ODIs against Zimbabwe: Shikhar Dhawan (Capt), Ruturaj Gaikwad, Shubman Gill, Deepak Hooda, Rahul Tripathi, Ishan Kishan (wk), Sanju Samson (wk), Washington Sundar, Shardul Thakur, Kuldeep Yadav, Axar Patel, Avesh Khan, Prasidh Krishna, Mohd Siraj, Deepak Chahar.
— BCCI (@BCCI) July 30, 2022
ವಿರಾಟ್ ಕೊಹ್ಲಿಗೆ ಮತ್ತೆ ವಿಶ್ರಾಂತಿ:
ಹೌದು, ಈಗಾಗಲೇ ವೆಸ್ಟ್ ಇಂಡೀಸ್ ನಡುವಿನ ಸರಣಿಯಿಂದ ಸಂಪೂರ್ಣವಾಗಿ ದೂರವಾಗಿದ್ದ ವಿರಾಟ್ ಕೊಹ್ಲಿ ಜಿಂಬಾಬ್ವೆ ವಿರುದ್ಧದ ತಂಡದಿಂದಲೂ ದೂರವಾಗಿದ್ದಾರೆ. ಈ ಬಾರಿಯೂ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ ಕೊಹ್ಲಿ ಮಾತ್ರವಲ್ಲದೆ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಅನೇಖ ದಿನಗಳಿಂದ ಟೀಂ ಇಂಡಿಯಾದಿಂದ ದೂರವಿದ್ದ ಮಧ್ಯಮ ವೇಗಿ ದೀಪಕ್ ಚಹಾರ್ ತಂಡಕ್ಕೆ ಮರಳಿದ್ದಾರೆ. ಇವರ ಜೊತೆ ವಾಷಿಂಗ್ಟನ್ ಸುಂದರ್ ಸಹ ಸರಣಿಗೆ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: IND vs PAK CWG 2022: ನಾಳೆ ಭಾರತ-ಪಾಕ್ ಮುಖಾಮುಖಿ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲ್ಲುತ್ತಾ ಟೀಂ ಇಂಡಿಯಾ?
IND vs ZIM ಸರಣಿಯ ವೇಳಾಪಟ್ಟಿ:
ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ - 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ - 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ - 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಇದನ್ನೂ ಓದಿ: ASIA CUP 2022: ಏಷ್ಯಾ ಕಪ್ ಪ್ರೋಮೋ ರಿಲೀಸ್, ಭಾರತ-ಪಾಕ್ ಮುಖಾಮುಖಿಗೆ ಡೇಟ್ ಫಿಕ್ಸ್
2ನೇ ಟಿ20 ಪಂದ್ಯಕ್ಕೆ ಸಿದ್ಧವಾಗುತ್ತಿರುವ ಟೀಂ ಇಂಡಿಯಾ:
ಸದ್ಯ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈಗಾಗಲೇ ಮೊದಲ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ 2ನೇ ಪಂದ್ಯಕ್ಕಾಗಿ ಸಿದ್ಧವಾಗುತ್ತಿದೆ. 2ನೇ ಟಿ20 ಪಂದ್ಯವು ಆಗಸ್ಟ್ 1ರಂದು ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ