• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Shubman Gill: ಶತಕವೀರ ಶುಭಮನ್​ ಗಿಲ್​! ಇದು ಬರೀ ಆರಂಭ, ಅಸಲಿ ಆಟ ಈಗ ಶುರು ಎಂದ ಫ್ಯಾನ್ಸ್​

Shubman Gill: ಶತಕವೀರ ಶುಭಮನ್​ ಗಿಲ್​! ಇದು ಬರೀ ಆರಂಭ, ಅಸಲಿ ಆಟ ಈಗ ಶುರು ಎಂದ ಫ್ಯಾನ್ಸ್​

ಶುಭ್​​ಮನ್​ ಗಿಲ್​

ಶುಭ್​​ಮನ್​ ಗಿಲ್​

India vs Zimbabwe 3rd ODI: ಹರಾರೆಯ ಸ್ಪೋರ್ಟ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಭರ್ಜರಿ ಶತಕ ಬಾರಿಸಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಸೆಂಚುರಿ ಬಾರಿಸಿ ಬೀಗಿದ್ದಾರೆ ಯಂಗ್​ ಪ್ಲೇಯರ್​​.

  • Share this:

ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ 3ನೇ ಮ್ಯಾಚ್​ ಇಂದು ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ನಡೆಯುತ್ತಿದೆ. ಹರಾರೆ (Harare) ಯ ಸ್ಪೋರ್ಟ್ಸ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ- ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ (Shubman Gill )ಭರ್ಜರಿ ಶತಕ ಬಾರಿಸಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಸೆಂಚುರಿ ಬಾರಿಸಿ ಬೀಗಿದ್ದಾರೆ ಯಂಗ್​ ಪ್ಲೇಯರ್​​. ಜಿಬಾಂಬ್ವೆ (Zimbabwe) ಗೆ ಟೀಮ್ ಇಂಡಿಯಾ 290 ರನ್​ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೆ.ಎಲ್ ರಾಹುಲ್ (KL Rahul) ನಾಯಕತ್ವದ ಟೀಮ್ ಇಂಡಿಯಾ ಪರ ಶುಭ್​ಮನ್​ ಗಿಲ್ ಭರ್ಜರಿ ಶತಕ (Shubman Gill Century) ಸಿಡಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.


ಶತಕವೀರ ಶುಭಮನ್​ ಗಿಲ್!


ಗಿಲ್ ಈ ಹಿಂದೆ ಟೆಸ್ಟ್ ಮತ್ತು ODI ಎರಡರಲ್ಲೂ ಕೆಲವು ಸಂದರ್ಭಗಳಲ್ಲಿ 90ರನ್​ ಗಳಿಸಿ ಔಟ್ ಆಗುತ್ತಿದ್ದರು. ಆದರೆ, ಶತಕ ಬಾರಿಸುವಲ್ಲಿ ವಿಫಲರಾಗುತ್ತಿದ್ದರು. ಅನುಭವಿ ಜಿಂಬಾಬ್ವೆ ಬೌಲಿಂಗ್​ ದಾಳಿಗೆ ತನ್ನ ಬ್ಯಾಟ್ ಮೂಲಕವೇ ಶುಭಮನ್​ ಗಿಲ್​ ಉತ್ತರ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್​ಗೆ 63 ರನ್​​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬ್ರಾಡ್ ಇವಾನ್ಸ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಾಹುಲ್ (30) ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.


ಶಭುಮನ್ ಶತಕ ಸಂಭ್ರ,ಮಿಸಿದ ಅಭಿಮಾನಿಗಳು!


ಪ್ರತಿಭಾವಂತ ಯುವ ಆಟಗಾರ ಭಾರತ ತಂಡದಲ್ಲಿ ನೆಲೆಯೂರಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿರುವ ಗಿಲ್ ಅವರ ಸಾಧನೆಯನ್ನು ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಸಂಭ್ರಮಿಸಿತ್ತಿದ್ದಾರೆ. ಗಿಲ್ ತನ್ನ ಚೊಚ್ಚಲ ಅಂತರಾಷ್ಟ್ರೀಯ ಶತಕವನ್ನು ಗಳಿಸಿದ ನಂತರ ಟ್ವಿಟ್ಟರ್​ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಇಂದು ಭಾರತ-ಜಿಂಬಾಬ್ವೆ ಅಂತಿಮ ಏಕದಿನ ಪಂದ್ಯ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಶುಭ್​ಮನ್​ ಗಿಲ್​-ಕಿಶನ್​ ಜೊತೆಯಾಟ ಸೂಪರ್​!


40 ರನ್​ಗಳಿಸಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದ ಶಿಖರ್ ಧವನ್ ಕೂಡ ಔಟ್ ಆದರು. 21 ಓವರ್​ನಲ್ಲಿ 84 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಟೀಮ್ ಇಂಡಿಯಾಗೆ ಈ ಹಂತದಲ್ಲಿ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆಸರೆಯಾದರು. 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ ಶುಭ್​ಮನ್ ಗಿಲ್ ಹಾಗೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ವೇಳೆ 51 ಎಸೆತಗಳಲ್ಲಿ ಗಿಲ್ ಅರ್ಧಶತಕ ಬಾರಿಸಿದರು.


ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಸಲು ಬಾಂಗ್ಲಾದ ಮಾಸ್ಟರ್ ಪ್ಲಾನ್!


ಶುಭ್​ಮನ್​ ಗಿಲ್ 82 ಎಸೆತಗಳಲ್ಲಿ 12 ಫೋರ್​ನೊಂದಿಗೆ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ಶುಭ್​ಮನ್ ಗಿಲ್ 97 ಎಸೆತಗಳಲ್ಲಿ 130 ರನ್​ ಬಾರಿಸಿ ಕೊನೆಗೆ ವಿಕೆಟ್ ಒಪ್ಪಿಸಿದರು, ಇನ್ನು ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಕ್ಷರ್ ಪಟೇಲ್ 1 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು.

top videos
    First published: