India vs Zimbabwe 3rd ODI: ನಾಳೆ ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ, ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್ ತ್ರಿಪಾಠಿ?

ನಾಳೆ ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ 3ನೇ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

IND vs ZIM

IND vs ZIM

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಈಗಾಗಲೇ ಆರಂಭವಾಗಿದ್ದು,  ಮೊದಲ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ನಾಳಿನ ಪಂದ್ಯ ಔಪಚಾರಿಕವಾದರೂ ಸಹ ಭಾರತ ತಂಡಕ್ಕೆ ಜಿಂಬಾಬ್ವೆ ತಂಡವನ್ನು ವೈಟ್​ ವಾಶ್​ ಮಾಡುವ ಅವಕಾಶವಿದೆ. ಹೀಗಾಗಿ ಈ ಪಂದ್ಯದ ಮೇಲೆ ಅದರಲ್ಲಿಯೂ ಕೆಎಲ್ ರಾಹುಲ್  (KL Rahul)ಈ ಸರಣಿಯು ಮುಂಬರುವ ಏಷ್ಯಾ ಕಪ್​ 2022 ಮತ್ತು ಐಸಿಸಿ ಟಿ20 ವಿಶ್ವಕಪ್​ನ ತಯಾರಿ ಪಂದ್ಯವಾಗಿ ಗುರುತಿಸಿಕೊಂಡಿದೆ. ಯುವ ತಂಡವಾಗಿರುವುದಿರಂದ ಬಹಳಷ್ಟು ಆಟಗಾರರ ಮೇಲೆ ನಿರೀಕ್ಷೆಗಳಿದ್ದು, ನಾಳಿನ ಅಂತಿಮ ಪಂದ್ಯದಲ್ಲಾದರೂ ಅಂತರಾಷ್ಟ್ರೀಯ ಕ್ರಿಕೆಟ್​ಗೆ ರಾಹುಲ್ ತ್ರಿಪಾಠಿ ಪಾದಾರ್ಪಣೆ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಇನ್ನು, ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಸೋನಿ ಚಾನೆಲ್​ ನೇರಪ್ರಸಾರ ಮಾಡಲಿದೆ.  ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಪಿಚ್​ ವರದಿ:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ.  ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 200 ರನ್ ಮತ್ತು 2ನೇ ಬ್ಯಾಟಿಂಗ್​ ಮಾಡುವ ತಂಡಕ್ಕೆ ಪಿಚ್​ ಹೆಚ್ಚು ಸಹಾಯಕವಾಗಿರಲಿದೆ. ಹೀಗಾಗಿ ನಾಳೆ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Asia Cup 2022: ಕಂಬ್ಯಾಕ್ ಪಂದ್ಯದಲ್ಲಿಯೇ ಕಳಪೆ ಪ್ರದರ್ಶನ, ಕನ್ನಡಿಗ ರಾಹುಲ್ ಸ್ಥಾನಕ್ಕೆ ಕುತ್ತು?

ಈ ಪಂದ್ಯದ ಮೂಲಕವಾದರೂ ಕಂಬ್ಯಾಕ್ ಮಾಡ್ತಾರಾ ರಾಹುಲ್:

ಇನ್ನು, ಅನೇಕ ದಿನಗಳ ನಂತರ ಕೆಎಲ್ ರಾಹುಲ್ ಕ್ರಿಕೆಟ್​ ಮೈದಾನಕ್ಕೆ ಬಂದಿದ್ದು, ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ನಾಯಕತ್ವದಲ್ಲಿ ಯಶಸ್ವಿಯಾಗಿರುವ ಅವರು, ಬ್ಯಾಟಿಂಗ್​ ನಲ್ಲಿ ಅಷ್ಟಾಗಿ ಮಿಂಚಲಿಲ್ಲ. ಮೊದಲ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಸಿಗಲಿಲ್ಲ. ಆದರೆ 2ನೇ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಸಿಕ್ಕರೂ ಸರಿಯಾಗಿ ಬಳಸಿಕೊಳ್ಳುವ ಬದಲಾಗಿ ಕೇವಲ 1 ರನ್​ಗೆ ಔಟ್​ ಆಗಿ ಹೋಗಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಾದರು ಅವರು ಬ್ಯಾಟಿಂಗ್​ನಲ್ಲಿ ಮಿಂಚಬೇಕಿದೆ. ಇದು ಅವರಿಗೆ ಮುಂಬರುವ ಏಷ್ಯಾ ಕಪ್​ ಮತ್ತು ಟಿ20 ವಿಶ್ವಕಪ್​ ಮೇಲೆ ಹೆಚ್ಚಿನ ಪರಿಣಾಮಬೀರಲಿದೆ. ಇದರ ಜೊತೆ ಯುವ ಆಟಗಾರ ರಾಹುಲ್ ತ್ರಿಪಾಠಿ ಸಹ ನಾಳಿನ ಪಂದ್ಯದ ಮೂಲಕ ಚೊಚ್ಚನ ಪಂದ್ಯವನ್ನು ಆಡಲಿದ್ದಾರೆಯೇ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಪ್ರಮುಖ ತಂಡಗಳ ಪ್ರಕಟ, ಇಲ್ಲಿದೆ ಟೀಂಗಳ ಸಂಪೂರ್ಣ ವಿವರ

ZIM vs IND ಸಂಭಾವ್ಯ ತಂಡ:

ಸಂಭಾವ್ಯ ಭಾರತ ತಂಡ:  ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲದೀಪ್ ಯಾದವ್, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್

ಸಂಭಾವ್ಯ ಜಿಂಬಾಬ್ವೆ ತಂಡ: ತಡಿವಾನಾಸೆ ಮರುಮಣಿ, ತಕುಡ್ಜ್ವಾನಾಸೆ ಕೈಟಾನೊ, ಇನೋಸೆಂಟ್ ಕಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬಾವಾ (ನಾಯಕ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ತನಕಾ ಚಿವಾಂಗಾ.
Published by:shrikrishna bhat
First published: