India vs Zimbabwe 2nd ODI: ಶಾರ್ದೂಲ್ ಠಾಕೂರ್ ಅಬ್ಬರಕ್ಕೆ ನಲುಗಿದ ಜಿಂಬಾಬ್ವೆ, ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2ನೇ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ 2-0 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 2ನೇ ಏಕದಿನ ಪಂದ್ಯ ಇಂದು ಹರಾರೆಯ ಸ್ಪೋರ್ಟ್ಸ್​ ಕ್ಲಬ್​ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಆಗಮಿಸಿದ ಜಿಂಬಾಬ್ವೆ (Zimbabwe) ತಂಡವು 38.1 ಓವರ್​ ಗಳಲ್ಲಿ  ತನ್ನೆಲ್ಲಾ 10 ವಿಕೆಟ್​ ಗಳನ್ನು ಕಳೆದುಕೊಂಡು ಕೇವಲ 161 ರನ್​ ಗಳಿಗೆ ಕುಸಿಯಿತು. ಈ ಮೂಲಕ ಭಾರತ ತಂಡಕ್ಕೆ ಅಲ್ಪ ಮೊತ್ತದ ಟಾರ್ಗೇಟ್​ ನೀಡಿತು. ಇದನ್ನು ಬೆನ್ನಟ್ಟಿದ ಭಾರತ ತಂಡವು  25 ಓವರ್​ ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲುವುದಲ್ಲದೆ 3 ಸರಣಿಗಳ ಪಂದ್ಯದಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಮೊದಲ ಸರಣಿಯನ್ನು ಗೆದ್ದಂತಾಗಿದೆ.

ಭಾರತೀಯರ ದಾಳಿಗೆ ತತ್ತರಿಸಿದ ಜಿಂಬಾಬ್ವೆ:

ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡವು  38.1 ಓವರ್​ ಗಳಲ್ಲಿ  ತನ್ನೆಲ್ಲಾ 10 ವಿಕೆಟ್​ ಗಳನ್ನು ಕಳೆದುಕೊಂಡು ಕೇವಲ 161 ರನ್​ ಗಳಿಗೆ ಕುಸಿಯಿತು. ಜಿಂಬಾಬ್ವೆ ಪರ ಸೀನ್ ವಿಲಿಯಮ್ಸ್ 42 ರನ್, ರಿಯಾನ್ ಬರ್ಲ್39 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಬ್ಯಾಟ್ಸ್​ಮನ್ ಗಳೂ ಉತ್ತಮ ಪ್ರದರ್ಶನ ನೀಡಲಿಲ್ಲ. ಉಳಿದಂತೆ ತಕುದ್ಜ್ವಾನಾಶೆ ಕೈಟಾನೊ 7 ರನ್, ಇನೋಸೆಂಟ್ ಕೈಯಾ 16 ರನ್, ವೆಸ್ಲಿ ಮಾಧೆವೆರೆ 2 ರನ್, ಸಿಕಂದರ್ ರಾಜಾ 16 ರನ್, ನಾಯಕ ರೆಗಿಸ್ ಚಕಬ್ವಾ 2 ರನ್, ಲ್ಯೂಕ್ ಜೊಂಗ್ವೆ 6 ರನ್, ಬ್ರಾಡ್ ಇವಾನ್ಸ್ 9 ರನ್, ವಿಕ್ಟರ್ ನ್ಯೌಚಿ ಶೂನ್ಯ ಮತ್ತು ತನಕಾ ಚಿವಾಂಗಾ 4 ರನ್ ಗಳಿಸಿದರು.

ಶಾರ್ದೂಲ್ ಠಾಕೂರ್ ಅಬ್ಬರಕ್ಕೆ ನಲುಗಿದ ಜಿಂಬಾಬ್ವೆ:

ಇನ್ನು, ಭಾರತದ ಪರ ಬೌಲರ್​ಗಳು ಸಂಘಟಿತ ದಾಳಿ ನಡೆಸುವ ಮೂಲಕ ಜಿಂಬಾಬ್ವೆ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 7 ಓವರ್ ಮಾಡಿ 3 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ದೀಪಕ್ ಹೂಡಾ ತಲಾ 1 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ:  BCCI ಕೇಳಿದ ಪ್ರಶ್ನೆಗಳಿಗೆ ಸುಸ್ತಾದ ಅಂಪೈರ್​ಗಳು; 140 ಮಂದಿ ಪರೀಕ್ಷೆ ಬರೆದವರಲ್ಲಿ 3 ಜನ ಪಾಸ್​

ಬ್ಯಾಟಿಂಗ್​ನಲ್ಲಿ ಅಬ್ಬರಿಸದ ಕನ್ನಡಿಗ ಕೆಎಲ್ ರಾಹುಲ್:

ಸರಿಸುಮಾರು 2 ತಿಂಗಳುಗಳ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ರಾಹುಲ್​ ಗೆ ನಾಯಕತ್ವವನ್ನು ನೀಡಲಾಯಿತು. ಅಲ್ಲದೇ ಕಳೆದ ಪಂದ್ಯದಲ್ಲಿ ರಾಹುಲ್​ಗೆ ಬ್ಯಾಟಿಂಗ್​ ಸಿಗದಿರುವುದಕ್ಕೆ ಅನೇಕರು ಅವರನ್ನು ಓಪನರ್ ಆಗಿ ಕಣಕ್ಕಿಳಿಸಬೇಕಿತ್ತು ಎಂಬ ಮಾತುಗಳು ಕೇಳಿಬಂದಿತ್ತು ಅದರಂತೆ ರಾಹುಲ್ ಇಂದಿನ ಪಂದ್ಯದಲ್ಲಿ ಧವನ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ 5 ಬಾಲ್ ಆಡಿ ಕೇವಲ 1 ರನ್ ಗಳಸಿ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು.

ಆದರೆ ಧವನ್ 33 ರನ್, ಇಶಾನ್ ಕಿಶನ್ 6 ರನ್, ಶುಭಮನ್ ಗಿಲ್ 33 ರನ್,  ದೀಪಕ್ ಹೂಡಾ 25 ರನ್, ಸಂಜು ಸ್ಯಾಮ್ಸನ್ 37 ಮತ್ತು ಅಕ್ಷರ್ ಪಟೇಲ್​ 6 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ನ ವಿಶೇಷ ದಾಖಲೆಗಳಿವು, ಇತಿಹಾಸದ ಹೊಸ್ತಿಲಲ್ಲಿ ರೋಹಿತ್-ಕೊಹ್ಲಿ

IND vs ZIM  ಇಂದಿನ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರು:

ಭಾರತ ತಂಡ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.

ಜಿಂಬಾಬ್ವೆ ತಂಡ: ರೆಗಿಸ್ ಚಕಬ್ವಾ(ನಾಯಕ), ಇನೋಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ,  ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಾಂಗಾ.
Published by:shrikrishna bhat
First published: