IND vs ZIM: ಇಂದು ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?

ಇಂದು ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಭಾರತೀಯ ಕಾಲಮಾನ ಸರಿಯಾಗಿ 12:45ಕ್ಕೆ ಪಂದ್ಯವು ಪ್ರಾರಂಭವಾಗಲಿದೆ.

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ಭಾರತ ತಂಡ ಜಿಂಬಾಬ್ವೆಯ ಹರಾರೆಗೆ ತಲುಪಿದೆ. ಇಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾದ (Team India) ಪ್ರಮುಖ ಕೋಚ್​ ಆಗಿ ವಿವಿಎಸ್​ ಲಕ್ಷ್ಮಣ್ (VVS Laxman) ಕಾಣಿಸಿಕೊಂಡಿದ್ದಾರೆ. ತಂಡವನ್ನು ಈ ಬಾರಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಮುನ್ನಡೆಸಲಿದ್ದಾರೆ. ಈ ಸರಣಿಯು ಮುಂಬರುವ ಏಷ್ಯಾ ಕಪ್​ 2022 ಮತ್ತು ಐಸಿಸಿ ಟಿ20 ವಿಶ್ವಕಪ್​ನ ತಯಾರಿ ಪಂದ್ಯವಾಗಿ ಗುರುತಿಸಿಕೊಂಡಿದೆ. ಯುವ ತಂಡವಾಗಿರುವುದಿರಂದ ಬಹಳಷ್ಟು ಆಟಗಾರರು ಅಂತರಾಷ್ಟ್ರೀಯ ತಂಡದಲ್ಲಿ ಮಿಂಚಲು ಕಾತುರರಾಗಿದ್ದಾರೆ. ಹಾಗಿದ್ದರೆ ಭಾರತ ಮತ್ತು ಜಿಂಬಾಬ್ವೆ ತಂಡಗಳ ಬಲಾಬಲ ಹೇಗಿರಲಿದೆ ಮತ್ತು ಉಭಯ ತಂಡಗಳ ಪ್ಲೇಯಿಂಗ್​ 11 ಅಲ್ಲಿ ಯಾವೆಲ್ಲಾ ಆಟಗಾರರು ಕಣಕ್ಕಿಳಿಯಬಹುದೆಂದು ನೋಡೋಣ ಬನ್ನಿ.

ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಇನ್ನು, ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಸೋನಿ ಚಾನೆಲ್​ ನೇರಪ್ರಸಾರ ಮಾಡಲಿದೆ.  ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಪಿಚ್​ ವರದಿ:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ.  ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 231 ರನ್ ಮತ್ತು 2ನೇ ಬ್ಯಾಟಿಂಗ್​ ಮಾಡುವ ತಂಡಕ್ಕೆ ಪಿಚ್​ ಹೆಚ್ಚು ಸಹಾಯಕವಾಗಿರಲಿದೆ. ಹೀಗಾಗಿ ಇಂದು ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IND vs ZIM: ನಾಳೆಯಿಂದ ಭಾರತ-ಜಿಂಬಾಬ್ವೆ ಸರಣಿ ಆರಂಭ, ಯಾವ ಚಾನೆಲ್​ನಲ್ಲಿ ಪ್ರಸಾರ? ಎಷ್ಟು ಗಂಟೆಗೆ? ಇಲ್ಲಿದೆ ವಿವರ

6 ವರ್ಷಗಳ ನಂತರ ಮುಖಾಮುಖಿ:

ಹೌದು, ಭಾರತ ಮತ್ತು ಜಿಂಬಾಬ್ವೆ ತಂಡಗಳು ಬರೋಬ್ಬರಿ 6 ವರ್ಷಗಳ ನಂತರ ಮುಖಾಮುಖಿ ಆಗುತ್ತಿವೆ. ಅಲ್ಲದೇ  1997 ರಿಂದ ಜಿಂಬಾಬ್ವೆಯಲ್ಲಿ ಭಾರತ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ. ಇನ್ನು ಮೊದಲ ಏಕದಿನ ಪಂದ್ಯದ ಮೂಲಕ ಗಾಯದಿಂದ ಕಮ್ ಬ್ಯಾಕ್ ಮಾಡುತ್ತಿರುವ ಕೆಎಲ್ ರಾಹುಲ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅವರು ಧವನ್ ಜೊತೆ ಓಪನರ್​ ಆಗಿ ಕಣಕ್ಕಿಳಿಯುತ್ತಾರೆ. ಜೊತೆಗೆ ರಾಹುಲ್ ತ್ರಿಪಾಠಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ಪಾದಾರ್ಪಣೆ ಮಾಡಬಹುದು.

ಇದನ್ನೂ ಓದಿ: ICC Cricket Schedule: 2027ರ ವರೆಗಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ಶೆಡ್ಯೂಲ್​? ಇಲ್ಲಿದೆ ಸಂಪೂರ್ಣ ವಿವರ

ZIM vs IND ಸಂಭಾವ್ಯ ತಂಡ:

ಸಂಭಾವ್ಯ ಭಾರತ ತಂಡ:  ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲದೀಪ್ ಯಾದವ್, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್

ಸಂಭಾವ್ಯ ಜಿಂಬಾಬ್ವೆ ತಂಡ: ತಡಿವಾನಾಸೆ ಮರುಮಣಿ, ತಕುಡ್ಜ್ವಾನಾಸೆ ಕೈಟಾನೊ, ಇನೋಸೆಂಟ್ ಕಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬಾವಾ (ನಾಯಕ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ತನಕಾ ಚಿವಾಂಗಾ.
Published by:shrikrishna bhat
First published: