India vs Zimbabwe 1st ODI: ಭರ್ಜರಿ ಕಂಬ್ಯಾಕ್​ ಮಾಡಿದ ದೀಪಕ್ ಚಹಾರ್, ಟೀಂ ಇಂಡಿಯಾ ದಾಳಿಗೆ ಜಿಂಬಾಬ್ವೆ ತತ್ತರ

ಜಿಂಬಾಬ್ವೆ ತಂಡವು ಭಾರತೀಯ ಬೌಲರ್​ಗಳ ದಾಳಿಗೆ ತತ್ತರಿಸಿದ್ದು, 40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿದಿದೆ.

IND vs ZIM

IND vs ZIM

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದಿರುವ ಟೀಂ ಇಂಡಿಯಾದ ನಾಯಕ ಕೆಎಲ್ ರಾಹುಲ್​ (KL Rahul) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಜಿಂಬಾಬ್ವೆ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡವು ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದೆ.  40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿದಿದೆ. ಜಿಂಬಾಬ್ವೆ ಪರ ನಾಯಕ ರೆಗಿಸ್ ಚಕಬ್ವಾ ಮಾತ್ರ ಉತ್ತಮ ಬ್ಯಾಟಿಂಗ್​ ಮಾಡಿದ್ದು, ಅವರು 35 ರನ್ ಗಳಿಸಿದ್ದರು. ಈ ಮೂಲಕ ಭಾರತ ತಂಡಕ್ಕೆ 190 ರನ್​ ಗಳ ಟಾರ್ಗೆಟ್​ ನೀಡಿದೆ.

ಅಲ್ಪ ಮೊತ್ತಕ್ಕೆ ಕುಸಿದ ಜಿಂಬಾಬ್ವೆ:

ಹೌದು, ಜಿಂಬಾಬ್ವೆ ತಂಡವು ಭಾರತೀಯ ಬೌಲರ್​ಗಳ ದಾಳಿಗೆ ತತ್ತರಿಸಿದ್ದು, 40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿದಿದೆ. ಜಿಂಬಾಬ್ವೆಯ ನಾಯಕ ರೆಗಿಸ್ ಚಕಬ್ವಾ 51 ಬೌಲ್​ಗಳಿಗೆ 35 ರನ್ ಗಳಸಿದರೆ, ಉಳಿದಂತೆ ಇನೊಸೆಂಟ್ ಕೈಯಾ 4 ರನ್ , ತಡಿವಾನಾಶೆ ಮರುಮಣಿ 8 ರನ್, ವೆಸ್ಲಿ ಮಾಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್, ರಿಯಾನ್ ಬರ್ಲ್ 11 ರನ್, ಲ್ಯೂಕ್ ಜೊಂಗ್ವೆ 13 ರನ್, ರಿಚರ್ಡ್ ನಾಗರವಾ 34 ರನ್, ವಿಕ್ಟರ್ ನ್ಯೌಚಿ 8 ರನ್ ಮತ್ತು ಕೊನೆಯಲ್ಲಿ ಬ್ರಾಡ್ ಇವಾನ್ಸ್ 33 ರನ್ ಗಳಿಸಿ ತಂಡದ ಮೊತ್ತವು ಏರಿಕೆ ಆಗಲು ಸಹಾಯಕರಾದರು.

ಭರ್ಜರಿ ಕಂಬ್ಯಾಕ್ ಮಾಡಿದ ಚಹಾರ್:

ಗಾಯದ ಸಮಸ್ಯೆಯಿಂದ ಅನೇಕ ದಿನಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದೀಪಕ್ ಚಹಾರ್​ ಇಂದು ಭರ್ಜರಿಯಾಗಿ ಬೌಲಿಂಗ್ ಮಾಡಿದರು. ಚಹಾರ್​ 7 ಓವರ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆದು ಮಿಮಚಿದರು. ಈ ಮೂಲಕ ಚಹಾರ್​ ಭರ್ಜರಿಯಾಗಿ ಖಬ್ಯಾಕ್ ಮಾಡಿರುವುದಾಗಿ ತೋರಿಸಿದ್ದಾರೆ. ಉಳಿದಂತೆ ಪ್ರಸಿದ್ಧ ಕೃಷ್ಣ ಮತ್ತು ಅಕ್ಷರ್ ಪಟೇಳ್ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಅಬ್ಬರಿಸಿದರು.

ಇದನ್ನೂ ಓದಿ: Virat Kohli: ಏಷ್ಯಾಕಪ್​ಗೆ ವಿರಾಟ್ ಭರ್ಜರಿ ತಯಾರಿ, ವರ್ಕೌಟ್ ವಿಡಿಯೋ ಹಂಚಿಕೊಂಡ ಕೊಹ್ಲಿ

ರಾಹುಲ್​ ಪ್ರದರ್ಶನದ ಮೇಲೆ ಎಲ್ಲರ ನಿರೀಕ್ಷೆ:

ಭಾರತ ಮತ್ತು ಜಿಂಬಾಬ್ವೆ ತಂಡಗಳು ಬರೋಬ್ಬರಿ 6 ವರ್ಷಗಳ ನಂತರ ಮುಖಾಮುಖಿ ಆಗುತ್ತಿವೆ. ಅಲ್ಲದೇ  1997 ರಿಂದ ಜಿಂಬಾಬ್ವೆಯಲ್ಲಿ ಭಾರತ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ. ಇನ್ನು ಮೊದಲ ಏಕದಿನ ಪಂದ್ಯದ ಮೂಲಕ ಗಾಯದಿಂದ ಕಮ್ ಬ್ಯಾಕ್ ಮಾಡುತ್ತಿರುವ ಕೆಎಲ್ ರಾಹುಲ್ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅವರು ಧವನ್ ಜೊತೆ ಓಪನರ್​ ಆಗಿ ಕಣಕ್ಕಿಳಿಯುತ್ತಾರೆ.

IND vs ZIM ಅಂತಿಮ ತಂಡ:

ಭಾರತ ತಂಡ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ: India vs Zimbabwe 1st ODI: ಟಾಸ್​ ಗೆದ್ದ ಟೀಂ ಇಂಡಿಯಾ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಜಿಂಬಾಬ್ವೆ ತಂಡ:  ರೆಗಿಸ್ ಚಕಬ್ವಾ (ನಾಯಕ), ಇನೊಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಸೀನ್ ವಿಲಿಯಮ್ಸ್,  ಸಿಕಂದರ್ ರಾಜಾ,  ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನಾಗರವಾ.
Published by:shrikrishna bhat
First published: