India vs Zimbabwe 1st ODI: ಅಬ್ಬರಿಸಿದ ಧವನ್ - ಗಿಲ್, ಭರ್ಜರಿ ಜಯ ದಾಖಲಿಸಿದ ಟೀಂ ಇಂಡಿಯಾ

ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಈ ಮೂಲಕ ಭರ್ಜರಿ 10 ವಿಕೆಟ್​ಗಳ ಜಯ ದಾಖಲಿಸಿತು.

ಭಾರತಕ್ಕೆ 10 ವಿಕೆಟ್​ಗಳ ಜಯ

ಭಾರತಕ್ಕೆ 10 ವಿಕೆಟ್​ಗಳ ಜಯ

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದಿರುವ ಟೀಂ ಇಂಡಿಯಾದ ನಾಯಕ ಕೆಎಲ್ ರಾಹುಲ್​ (KL Rahul) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್​ ಮಾಡಿದ ಜಿಂಬಾಬ್ವೆ (Zimbabwe )ತಂಡವು   40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಈ ಮೂಲಕ ಭರ್ಜರಿ 10 ವಿಕೆಟ್​ಗಳ ಜಯ ದಾಖಲಿಸಿತು. ಅಲ್ಲದೇ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತದ ಪರ ಅಬ್ಬರಿಸಿದ ಧವನ್ ಮತ್ತು ಗಿಲ್​:

ಇನ್ನು, ಜಿಂಬಾಬ್ವೆ ನೀಡಿದ 189 ರನ್ ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡವು 30.5 ಓವರ್ ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192 ರನ್​ ಗಳಿಸುವ ಮೂಲಕ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತದ ಪರ ಶಿಖರ್ ಧವನ್ ಮತ್ತು ಶುಭಮನ್ ಗಿಲ್​ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ವಿಕೆಟ್ ನಷ್ಟವಿಲ್ಲದೇ ತಂಡ ಜಯ ದಾಖಲಿಸಿತು.





ಭಾರತದ ಪರ ಶಿಖರ್ ಧವನ್ 113 ಎಸೆತದಲ್ಲಿ 9 ಬೌಂಡರಿಗಳ ನೆರವಿನಿಂದ 81 ರನ್ ಮತ್ತು ಶುಭಮನ್ ಗಿಲ್​ 72 ಎಸೆತದಲ್ಲಿ 10 ಫೋರ್​ ಮತ್ತು 1 ಸಿಕ್ಸ್ ಮೂಲಕ 82 ರನ್ ಸಿಡಿಸುವ ಮೂಲಕ ತಂಡವು ಭರ್ಜರಿ ಬ್ಯಾಟಿಂಗ್ ಮಾಡಿದರು.

ಟೀಂ ಇಂಡಿಯಾ ದಾಳಿಗೆ ತತ್ತರಿಸಿದ್ದ ಜಿಂಬಾಬ್ವೆ:

ಜಿಂಬಾಬ್ವೆ ತಂಡವು ಭಾರತೀಯ ಬೌಲರ್​ಗಳ ದಾಳಿಗೆ ತತ್ತರಿಸಿದರು. 40.3 ಓವರ್​ಗಳಿಗೆ 10 ವಿಕೆಟ್​ಗಳನ್ನೂ ಕಳೆದುಕೊಂಡು 189 ರನ್​ ಗಳನ್ನು ಗಳಿಸುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಜಿಂಬಾಬ್ವೆಯ ನಾಯಕ ರೆಗಿಸ್ ಚಕಬ್ವಾ 51 ಬೌಲ್​ಗಳಿಗೆ 35 ರನ್ ಗಳಸಿದರೆ, ಉಳಿದಂತೆ ಇನೊಸೆಂಟ್ ಕೈಯಾ 4 ರನ್ , ತಡಿವಾನಾಶೆ ಮರುಮಣಿ 8 ರನ್, ವೆಸ್ಲಿ ಮಾಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್, ರಿಯಾನ್ ಬರ್ಲ್ 11 ರನ್, ಲ್ಯೂಕ್ ಜೊಂಗ್ವೆ 13 ರನ್, ರಿಚರ್ಡ್ ನಾಗರವಾ 34 ರನ್, ವಿಕ್ಟರ್ ನ್ಯೌಚಿ 8 ರನ್ ಮತ್ತು ಕೊನೆಯಲ್ಲಿ ಬ್ರಾಡ್ ಇವಾನ್ಸ್ 33 ರನ್ ಗಳಿಸಿ ತಂಡದ ಮೊತ್ತವು ಏರಿಕೆ ಆಗಲು ಸಹಾಯಕರಾದರು.

ಇದನ್ನೂ ಓದಿ: Virat Kohli: ಕ್ರಿಕೆಟ್​ ಲೋಕಕ್ಕೆ ಕಿಂಗ್​ ಎಂಟ್ರಿ ಕೊಟ್ಟು ಇಂದಿಗೆ 14 ವರ್ಷ! ಹೇಗಿತ್ತು ವಿರಾಟ ದರ್ಶನ?

IND vs ZIM ಪ್ಲೇಯಿಂಗ್ 11:

ಭಾರತ ತಂಡ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಜಿಂಬಾಬ್ವೆ ತಂಡ:  ರೆಗಿಸ್ ಚಕಬ್ವಾ (ನಾಯಕ), ಇನೊಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಣಿ, ಸೀನ್ ವಿಲಿಯಮ್ಸ್,  ಸಿಕಂದರ್ ರಾಜಾ,  ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ರಿಚರ್ಡ್ ನಾಗರವಾ.
Published by:shrikrishna bhat
First published: