News18 India World Cup 2019

2ನೇ ಟೆಸ್ಟ್​​ನಲ್ಲೂ ಕೆರಿಬಿಯನ್ನರ ಕಳಪೆ ಬ್ಯಾಟಿಂಗ್: ದಿನದಾಟದ ಅಂತ್ಯಕ್ಕೆ ವಿಂಡೀಸ್: 295/7

Vinay Bhat | news18
Updated:October 12, 2018, 4:36 PM IST
2ನೇ ಟೆಸ್ಟ್​​ನಲ್ಲೂ ಕೆರಿಬಿಯನ್ನರ ಕಳಪೆ ಬ್ಯಾಟಿಂಗ್: ದಿನದಾಟದ ಅಂತ್ಯಕ್ಕೆ ವಿಂಡೀಸ್: 295/7
Vinay Bhat | news18
Updated: October 12, 2018, 4:36 PM IST
ನ್ಯೂಸ್ 18 ಕನ್ನಡ

ಹೈದರಾಬಾದ್ (ಅ. 12): ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ಇಂಡೀಸ್​​ ತಂಡ ಭಾರತದ ಸ್ಪಿನ್ದಾಳಿಗೆ ಮತ್ತೊಮ್ಮೆ ತತ್ತರಿಸಿದೆ. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ವಿಂಡೀಸ್ 7 ವಿಕೆಟ್ ಕಳೆದುಕೊಂಡು 295 ರನ್ ಕಲೆಹಾಕಿದೆ.

ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ ಮಂಕಾದ ಕೆರಿಬಿಯನ್ ಬ್ಯಾಟ್ಸ್​ಮನ್​​ಗಳು ಆರಂಭದಲ್ಲೇ ಪೆವಿಲಿಯನ್ ಹಾದಿ ಹಿಡಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶಾರ್ದೂಲ್ಠಾಕೂರ್ ಗಾಯಾಳುವಾಗಿ, ಫೀಲ್ಡ್​​ನಿಂದ ಹೊರನಡೆದ ಬಳಿಕ ಸ್ಪಿನ್ನರ್ ಆರ್​. ಅಶ್ವಿನ್ ಮೊದಲ ವಿಕೆಟ್ ಕಬಳಿಸಿದರು. ಕಿರನ್ಪೊವೆಲ್(22) ಮೊದಲು ವಿಕೆಟ್ ಒಪ್ಪಿಸಿದರೆ, ಇದರ ಬೆನಲ್ಲೇ ಬ್ರಾಥ್ವೈಟ್​(14) ಕುಲ್ದೀಪ್ ಸ್ಪಿನ್​​ಗೆ ಬಲಿಯಾದರು. ಬಳಿಕ ಚೆನ್ನಾಗೆ ಬ್ಯಾಟ್ ಬೀಸುತ್ತಿದ್ದ ಹೊಮ್ 36 ರನ್ ಗಳಿಸಿದ್ದಾದ ಎಲ್​​ಬಿಗೆ ಬಲಿಯಾದರೆ, ಹೆಟ್ಮೆರ್(12), ಸುನಿಲ್ ಅಂಬ್ರಿಸ್(18), ಶೇನ್ ಡೌರಿಚ್(30) ರನ್​​ಗೆ ಔಟ್ ಆಗಿ ಒಬ್ಬರ ಹಿಂದೆ ಒಬ್ಬರಂತೆ ಔಟ್ ಆದರು.

ಆದರೆ 7ನೇ ವಿಕೆಟ್​ಗೆ ಜೊತೆಯಾದ ರೊಸ್ಟನ್ ಚೇಸ್ ಹಾಗೂ ನಾಯಕ ಜೇಸನ್ ಹೋಲ್ಡರ್ ತಂಡಕ್ಕೆ ಚೇತರಿಕೆ ನೀಡಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಆದರೆ ಮೊದಲ ದಿನದಾಟದ ಅಂತಿಮ ಕ್ಷಣದಲ್ಲಿ ಹೋಲ್ಡರ್ 52 ರನ್ ಬಾರಿಸಿ ಔಟ್ ಆದರು. ಈ ಮೂಲಕ ಮೊದಲ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ರೊಸ್ಟನ್ ಚೇಸ್ 98 ರನ್ ಬಾರಿಸಿ ಶತಕದ ಅಂಚಿನಲ್ಲಿದ್ದರೆ, ದೇವೇಂದ್ರ ಬಿಶು 2 ರನ್ ಬಾರಿಸಿ ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಅಶ್ವಿನ್ 1 ವಿಕೆಟ್ ಕಬಳಿಸಿದರು.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...