• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IND vs WI: ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಮತ್ತೆ ನಾಯಕತ್ವ ಬದಲಾವಣೆ; ಕೊಹ್ಲಿ-ರೋಹಿತ್​ಗೆ ಬಿಗ್ ಶಾಕ್

IND vs WI: ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಮತ್ತೆ ನಾಯಕತ್ವ ಬದಲಾವಣೆ; ಕೊಹ್ಲಿ-ರೋಹಿತ್​ಗೆ ಬಿಗ್ ಶಾಕ್

IND vs WI

IND vs WI

ಜುಲೈ 22 ರಿಂದ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಇಲ್ಲಿ ಮತ್ತೆ ಟೀಂ ಇಂಡಿಯಾವನ್ನು ಮುನ್ನಡೆಸುವಲ್ಲಿ ಬದಲಾವಣೆ ಮಾಡಲಾಗಿದೆ.

  • Share this:

ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಟೀಂ ಇಂಡಿಯಾ (Team India) ನಾಯಕತ್ವ ಮ್ಯೂಸಿಕಲ್ ಚೇರ್ ಆಟದಂತಾಗಿದೆ. ವರ್ಷದಲ್ಲಿ 8 ಮಂದಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಅವರಲ್ಲಿ ಐವರು ಹೊಸ ನಾಯಕರಾಗಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಿದ ಹಾರ್ದಿಕ್ ಪಾಂಡ್ಯ ನಾಯಕರಾದರೆ, ನಿನ್ನೆಯಷ್ಟೇ ಮುಗಿದ ಇಂಗ್ಲೆಂಡ್​ ಟೆಸ್ಟ್ ಬೂಮ್ರಾ ನಾಯಕರಾಗಿದ್ದರು. ಇದೀಗ ಬಿಸಿಸಿಐ (BCCI) ಮತ್ತೆ ಟೀಂ ಇಂಡಿಯಾದ ನಾಯಕತ್ವವನ್ನು ಬದಲಾವಣೆ ಮಾಡಿದೆ. ಜುಲೈ 22 ರಿಂದ ವೆಸ್ಟ್ ಇಂಡೀಸ್ (West Indies )ನೆಲದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಇಲ್ಲಿ ಮತ್ತೆ ಟೀಂ ಇಂಡಿಯಾವನ್ನು ಮುನ್ನಡೆಸುವಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೇ ಅನೇಖ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ತಂಡದ ನಾಯಕರಾಗಿ ಶಿಖರ್ ಧವನ್ (Shikhar Dhawan) ಅವರನ್ನು ನೇಮಿಸಲಾಗಿದೆ. ರವೀಂದ್ರ ಜಡೇಜಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.


ನಾಯಕನಾಗಿ ಆಯ್ಕೆಯಾದ ಶಿಖರ್ ಧವನ್:


ಹೌದು, ವೆಸ್ಟ್ ಇಂಡೀಸ್ ಜೊತೆಗಿನ 3 ಪಂದ್ಯಗಳ ಏಕದಿನ ಸರಣಿಗೆ ಇಂದು ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ರುತುರಾಜ್ ಗಾಯಕ್ವಾಡ್, ಶುಭಂ ಗಿಲ್, ಸಂಜು ಸ್ಯಾಮ್ಸನ್ ಮತ್ತು ಮೊಹಮ್ಮದ್ ಸಿರಾಜ್ ಏಕದಿನ ತಂಡಕ್ಕೆ ಮರಳಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಪ್ರಮುಖ ಆಟಗಾರರು ಆಯ್ಕೆಯಾಗಿದ್ದಾರೆ.



ಆದರೆ ಈ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಜೂನ್ 2021 ರಲ್ಲಿ ಭಾರತದ ಪ್ರಮುಖ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಶ್ರೀಲಂಕಾ ಪ್ರವಾಸ ಮಾಡಿದ ಭಾರತ ತಂಡದ ನಾಯಕತ್ವ ವಹಿಸಿದ್ದರು. ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತ್ತು. ಆದರೆ ಶಿಖರ್ ಧವನ್ ಶ್ರೀಲಂಕಾ ವಿರುದ್ಧ T20I ಸರಣಿಯನ್ನು ಕಳೆದುಕೊಂಡ ಮೊದಲ ಭಾರತೀಯ ನಾಯಕರಾದರು.


ಇದನ್ನೂ ಓದಿ: IND vs ENG: ಏಕದಿನ-ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ವಿರಾಟ್​ ಕೊಹ್ಲಿಗೆ ಶಾಕ್!


ಟೀಮ್ ಇಂಡಿಯಾ ತಂಡ ಪ್ರಕಟ:


ಶಿಖರ್ ಧವನ್ (C), ರವೀಂದ್ರ ಜಡೇಜಾ (WK), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ಡಬ್ಲ್ಯುಕೆ), ಸಂಜು ಸ್ಯಾಮ್ಸನ್ (ಡಬ್ಲ್ಯುಕೆ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್ , ಪ್ರಸಾದ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷ ದೀಪ್ ಸಿಂಗ್.


ಇದನ್ನೂ ಓದಿ: IND vs ENG: ಇಂಗ್ಲೆಂಡ್​ ವಿರುದ್ಧದ ಟೀಂ ಇಂಡಿಯಾ ಸೋಲಿಗೆ ಇಲ್ಲಿವೆ ಪ್ರಮುಖ ಕಾರಣಗಳು


ಹಿರಿಯ ಆಟಗಾರರಿಗೆ ವಿಶ್ರಾಂತಿ:


ಇನ್ನು, ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಸರಣಿಗೆ ಹಿರಿಒಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಮೂಲಕ ಮತ್ತೊಮ್ಮೆ ವಿರಾಟ್ ಮತ್ತು ರೋಹಿತ್ ಶರ್ಮಾ ಭಾರತ ತಂಡದಿಂದ ಮತ್ತೊಂದು ಸರಣಿಯಿಂದ ಹೊರಗುಳಿಯುವಂತಾಗಿದೆ. ನಾಳೆಯಿಂದ ಭಾರತ ತಂಡ ಇಂಗ್ಲೆಂಡ್​ ಎದುರು ಟಿ20 ಸರಣಿ ಆರಂಭವಾಗಲಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು