ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ T20I ಸರಣಿ ಜೂನ್ 9ರಂದು ಪ್ರಾರಂಭವಾಗಲಿದೆ. ಇದರ ನಡುವೆ ಟೀಂ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸತತ ಸರಣಿಯಲ್ಲಿ ಬ್ಯೂಸಿಯಾಗಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೇಂಡ್ ನಂತರ ವೆಸ್ಟ್ ಇಂಡೀಸ್ ನಡುವೆ ಸರಣಿ ಆಯೋಜಿಸಲಾಗಿದೆ. ಜುಲೈ ತಿಂಗಳಾಂತ್ಯದಲ್ಲಿ ವಿಂಡೀಸ್ ಎದುರು ಸರಣಿ ನಡೆಯಲಿದೆ.ಈ ಸರಣಿಯಲ್ಲಿ ಭಾರತ ತಂಡ 3 ಏಕದಿನ ಮತ್ತು 5 ಟಿ20 ಸರಣಿಗಳನ್ನು ಆಡಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಿರುವ ಇಂಡಿಯಾ:
ಜುಲೈ 22ರಿಮದ ಆಗಷ್ಟ್ 7ರ ವರೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಇರಲಿದೆ. ಇದರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಕೆಳಕಂಡಂತೆ ಇರಲಿದೆ.
ಟಿ20 ವೇಳಾಪಟ್ಟಿ:
1 ನೇ T20I: ಜುಲೈ 29: (ಬ್ರಿಯಾನ್ ಲಾರಾ ಸ್ಟೇಡಿಯಂ, ಪೋರ್ಟ್ ಆಫ್ ಸ್ಪೇನ್)
2 ನೇ T20I: ಆಗಸ್ಟ್ 1 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)
3 ನೇ T20I: ಆಗಸ್ಟ್ 2 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)
4 ನೇ T20I: ಆಗಸ್ಟ್ 6 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)
5 ನೇ T20I: ಆಗಸ್ಟ್ 7 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)
ಏಕದಿನ ಪಂದ್ಯಗಳ ವೇಳಾಪಟ್ಟಿ:
1 ನೇ ODI: ಜುಲೈ 22 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
2ನೇ ODI: ಜುಲೈ 24 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
3ನೇ ODI: ಜುಲೈ 27 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)
ಇದನ್ನೂ ಓದಿ: MS Dhoni: ಧೋನಿ ವಿರುದ್ಧ FIR ದಾಖಲು, ಚೆಕ್ ಬೌನ್ಸ್ ಪ್ರಕರಣದಲ್ಲಿ ಕ್ಯಾಪ್ಟನ್ ಕೂಲ್
2 ವರ್ಷಗಳ ನಂತರ ನಿಯಮ ಬದಲಿಸಿದ ಬಿಸಿಸಿಐ:
ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿಗಾಗಿ ಎರಡೂ ತಂಡಗಳು ಕಟ್ಟುನಿಟ್ಟಾದ ಬಯೋ-ಬಬಲ್ ನಿಯಮಗಳನ್ನು ಅನುಸರಿಸಬೇಕಾಗಿಲ್ಲ, ಅಂದರೆ ಆಟಗಾರರು ಮತ್ತು ಅವರ ಕುಟುಂಬಗಳು ಇನ್ನು ಮುಂದೆ ಕ್ವಾರಂಟೈನ್ ಮಾಡಬೇಕಾಗಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ, ಜೈವಿಕ-ಬಬಲ್ ನಿಯಮಗಳಿಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿ ನಡೆಯಲಿದೆ. ಆದರೆ ಕೆಲ ನಿರ್ಭಂಧಗಳಿರುತ್ತದೆ.
ಬಯೋಬಬಲ್ ಇಲ್ಲದಿದ್ದರೂ ನಿರ್ಬಂಧ:
ಟೀಂ ಇಂಡಿಯಾ ಬಯೋ ಬಬಲ್‌ನಿಂದ ಬಿಡುಗಡೆ ಹೊಂದಿದ್ದರೂ, ಅವರು ಜಾಗರೂಕರಾಗಿರಬೇಕು. ಸರಣಿಯ ಸಮಯದಲ್ಲಿ ಆಟಗಾರರು ದೊಡ್ಡ ಈವೆಂಟ್‌ಗಳಿಗೆ ಹೋಗಲು ಅನುಮತಿಸಲಾಗುವುದಿಲ್ಲ ಮತ್ತು ಅವರು ಕೋವಿಡ್ ಸೂಕ್ತವಾದ ನಡವಳಿಕೆಗೆ ಬದ್ಧರಾಗಿರಬೇಕು. ಕೋವಿಡ್ -19 ಭಾರತದಲ್ಲಿ ಕೆಲವು ಸಮಯದಿಂದ ಮುತ್ತಿಗೆಗೆ ಒಳಗಾಗಿದೆ, ಇದು ಬಯೋ-ಬಬಲ್ ನಿಯಮಗಳ ಸಮಸ್ಯೆಯನ್ನು ತೆಗೆದುಕೊಳ್ಳಲು ಬಿಸಿಸಿಐಗೆ ಪ್ರೇರೇಪಿಸಿತು.
ಇದನ್ನೂ ಓದಿ: Shoaib Akhtar: ಕೊಹ್ಲಿ ಕುರಿತು ಟೀಕಿಸುವುದನ್ನು ನಿಲ್ಲಿಸಿ ಎಂದ ಪಾಕ್ ಮಾಜಿ ಆಟಗಾರ!
IPL ನಲ್ಲಿ ಬಯೋ ಬಬಲ್:
ಇತ್ತೀಚಿಗೆ ಮುಕ್ತಾಯಗೊಂಡ IPL 2022 ರಲ್ಲಿ, 10 ತಂಡಗಳು ಬಯೋ ಬಬಲ್‌ನಲ್ಲಿದ್ದವು ಮತ್ತು ಬಯೋ-ಬಬಲ್‌ಗೆ ಪ್ರವೇಶಿಸುವ ಮೊದಲು ಆಟಗಾರರನ್ನು 3 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿತ್ತು. ಈ ನಿಯಮಗಳಿಂದ ಆಟಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
10 ದಿನಗಳಲ್ಲಿ 5 ಟಿ-20:
ಜೂನ್ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 5 ಟಿ20 ಪಂದ್ಯಗಳು ನಡೆಯಲಿವೆ. ಸರಣಿಯ ಕೊನೆಯ ಪಂದ್ಯ ಜೂನ್ 19 ರಂದು ನಡೆಯಲಿದೆ, ಅಂದರೆ ತಂಡವು 10 ದಿನಗಳಲ್ಲಿ 5 ಪಂದ್ಯಗಳನ್ನು ಆಡಬೇಕಾಗಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ:
ಈ ಸರಣಿಯಲ್ಲಿ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಸೇರಿದ್ದಾರೆ. ಇದಲ್ಲದೇ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಟೀಂ ಇಂಡಿಯಾವನ್ನು ಮುನ್ನಡಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ