• Home
  • »
  • News
  • »
  • sports
  • »
  • IND vs WI: ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ, ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

IND vs WI: ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ, ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

IND vs WI

IND vs WI

ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾದ ಮುಂದಿನ ಗುರಿ ವೆಸ್ಟ್ ಇಂಡೀಸ್ ಮೇಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದ್ದು, ಮೊದಲ ಏಕದಿನ ಪಂದ್ಯ ಕ್ವೀನ್ಸ್ ಪಾರ್ಕ್ ಓವಲ್ ನ ಟ್ರಿನಿಡಾಡ್ ಎಂಬಲ್ಲಿ ನಡೆಯಲಿದೆ.

ಮುಂದೆ ಓದಿ ...
  • Share this:

ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾದ ಮುಂದಿನ ಗುರಿ ವೆಸ್ಟ್ ಇಂಡೀಸ್ ಮೇಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಿನ 3 ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ಇಂದು ಮೊದಲ ಏಕದಿನ ಪಂದ್ಯ ಕ್ವೀನ್ಸ್ ಪಾರ್ಕ್ ಓವಲ್ ನ ಟ್ರಿನಿಡಾಡ್ ಎಂಬಲ್ಲಿ ನಡೆಯಲಿದೆ. ಈ ಸರಣಿಗೆ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ನಾಯಕರಾಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma),  ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದರ ನಡುವೆ ಕೆಎಲ್ ರಾಹುಲ್ (KL Rahul) ಮತ್ತು ರವೀಂದ್ರ ಜಡೇಜಾ (Ravindra Jadeja) ಗಾಯಾಳುಗಳಾಗಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆ ಕಡಿಮೆ ಇದೆ. 


ಪಂದ್ಯದ ವಿವರ:


ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಇಂದಿನ ಪಂದ್ಯವು  ಕ್ವೀನ್ಸ್ ಪಾರ್ಕ್ ಓವಲ್ ನ ಟ್ರಿನಿಡಾಡ್ ಎಂಬಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆಪಂದ್ಯ ಆರಂಭವಾಗಲಿದೆ.


ಪಿಚ್​ ವರದಿ:


ಇನ್ನು, ವೆಸ್ಟ್ ಇಂಡೀಸ್​ನ  ಕ್ವೀನ್ಸ್ ಪಾರ್ಕ್ ಓವಲ್ ನ ಟ್ರಿನಿಡಾಡ್ ಎಂಬಲ್ಲಿ ಪಂದ್ಯ ನಡೆಯಲಿದ್ದು, ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿನ ವಿಕೆಟ್ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.  ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್; ಶೀಘ್ರದಲ್ಲಿಯೇ ಮಿನಿ IPL ಪ್ರಾರಂಭ, ಈ ಪಟ್ಟಿಯಲ್ಲಿ RCB ಇದ್ಯಾ?


ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ:


ಹೌದು, ಈಗಾಗಲೇ ತಂಡದಿಂದ ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ,  ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದರ ನಡುವೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಗಾಯಾಳುಗಳಾಗಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆ ಕಡಿಮೆ ಇದೆ. ಉಪನಾಯಕರಾಗಿದ್ದ ಜಡೇಜಾಗೆ ಮಂಡಿ ನೋಡಿವ ಸಮಸ್ಯೆ ಕಾಣಿಸಿಕೊಂಡಿದ್ದು, ಕೆಎಲ್ ರಾಹುಲ್​ ಅವರಿಗೆ ಕೋರೋನಾ ಸೋಂಕು ತಗುಲಿರುವುದು ತಂಡಕ್ಕೆ ದೊಡ್ಡ ಹೊಡೆತ ವಾದಂತಾಗಿದೆ. ಹೀಗಾಗಿ ಈ ಇಬ್ಬರೂ ಆಟಗಾರರು ಇಂದಿನ ಪಮದ್ಯಕ್ಕೆ ಲಭ್ಯವಿರುವುದು ಭಾಗಶಃ ಅನುಮಾನವಾಗಿದೆ.


ಇದನ್ನೂ ಓದಿ: Virat Kohli: ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತಿರಾ


IND - WI ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ಶಿಖರ್ ಧವನ್ (c), ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್, ಆರ್ಷದೀಪ್ ಸಿಂಗ್.


ವೆಸ್ಟ್ ಇಂಡೀಸ್ ಸಂಭಾವ್ಯ ತಂಡ: ಶಾಯ್ ಹೋಪ್, ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಸಿ ಮತ್ತು ಡಬ್ಲ್ಯೂಕೆ), ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಗುಡಾಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಅಕೇಲ್ ಹೋಸೇನ್, ಕೀಮೋ ಪಾಲ್.

Published by:shrikrishna bhat
First published: