• Home
  • »
  • News
  • »
  • sports
  • »
  • IND vs SL 2023: ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಆರಂಭಿಸುವವರು ಯಾರು? 3 ಆಟಗಾರರ ನಡುವೆ ಬಿಗ್​ ಫೈಟ್​

IND vs SL 2023: ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಆರಂಭಿಸುವವರು ಯಾರು? 3 ಆಟಗಾರರ ನಡುವೆ ಬಿಗ್​ ಫೈಟ್​

ಟೀಂ ಇಂಡಿಯಾ

ಟೀಂ ಇಂಡಿಯಾ

IND vs SL 2023: ಜನವರಿ 3 ರಿಂದ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಸಮಸ್ಯೆಯೊಂದು ಎದುರಾಗಿದೆ.

  • Share this:

ಭಾರತ ಕ್ರಿಕೆಟ್ ತಂಡವು ಶ್ರೀಲಂಕಾ (IND vs SL 2023) ವಿರುದ್ಧ ಟಿ20 ಮೂಲಕ ವರ್ಷವನ್ನು ಆರಂಭಿಸಲಿದೆ. ಜನವರಿ 3 ರಿಂದ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯ ಮುಂಬೈನಲ್ಲಿ (Wankhede Stadium) ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದು ಟೀಂ ಇಂಡಿಯಾ (Team India) ಮುಂದಿರುವ ದೊಡ್ಡ ಪ್ರಶ್ನೆ ಆಗಿದೆ. ತಂಡದ ಆರಂಭಿಕ ಆಟಗಾರ ಗಾಯಗೊಂಡಿದ್ದು, ಒಂದಲ್ಲ ಎರಡಲ್ಲ ಮೂರು ಆಯ್ಕೆಗಳು ಟೀಂ ಇಂಡಿಯಾದ ಮುಂದಿವೆ. ಇಂತಹ ಪರಿಸ್ಥಿತಿಯಲ್ಲಿ ಕೋಚ್ ಮತ್ತು ನಾಯಕ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಕಾದುನೋಡಬೇಕಿದೆ.


ಟೀಂ ಇಂಡಿಯಾದ ಆರಂಭಿಕರಾರು?:


ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಂಗಳವಾರ ನಡೆಯಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾದ ಆರಂಭಿಕ ಜೋಡಿಯ ನಿರ್ಧಾರವು ಮುಖ್ಯವಾಗಿದೆ. ಸದ್ಯ ಟೀಂ ಇಂಡಿಯಾದಲ್ಲಿ ಇಶಾನ್ ಕಿಶನ್ ಮಾತ್ರ ಈ ಜಾಗದಲ್ಲಿ ಫಿಕ್ಸ್ ಆಗಿರುವಂತಿದೆ. ತಂಡದ ನಿಯಮಿತ ನಾಯಕ ಹಾಗೂ ಆರಂಭಿಕ ಜವಾಬ್ದಾರಿ ಹೊತ್ತಿರುವ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಇದಲ್ಲದೇ ಕಳೆದ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ್ದ ರಿಷಭ್ ಪಂತ್​ಗೆ ಆಯ್ಕೆಗಾರರು ತಂಡದಲ್ಲಿ ಸ್ಥಾನ ದೊರಕಿಲ್ಲ.


ಇಶಾನ್‌ಗೆ ಆರಂಭಿಕ ಜೋಡಿ ಯಾರು?:


ಪ್ರಸ್ತುತ, ಶ್ರೀಲಂಕಾ ವಿರುದ್ಧ ಆಯ್ಕೆಗಾರರು ಆಯ್ಕೆ ಮಾಡಿದ ತಂಡದಲ್ಲಿ, 3 ಹೆಸರುಗಳು ಇದೀಗ ಹಾರ್ದಿಕ್​ ಪಾಂಡ್ಯ ಮುಂದಿದ್ದು, ಯಾರಿಗೆ ಅವಕಾಶ ದೊರಕಲಿದೆ ಎಂದು ಕಾದುನೋಡಬೇಕಿದೆ. ಶುಭಮನ್ ಗಿಲ್ ಅವರನ್ನು ಇಶಾನ್ ಜೊತೆಗಾರರನ್ನಾಗಿ ಮಾಡಬಹುದು. ಅನುಭವ ಮತ್ತು ಭವಿಷ್ಯದ ಸರಣಿಯನ್ನು ನೋಡಿದರೆ ಗಿಲ್ ಎರಡನೇ ಓಪನರ್ ಆಗಲಿದ್ದಾರೆ. ಈ ಯುವ ಬ್ಯಾಟ್ಸ್​ಮನ್ ಏಕದಿನ ಮತ್ತು ಟೆಸ್ಟ್‌ನಲ್ಲಿ ತಂಡಕ್ಕೆ ಆರಂಭಿಕ ಆಟಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: IND vs SL T20 Series: ಭಾರತಕ್ಕೆ ಬಂದಿಳಿದ ಶ್ರೀಲಂಕಾ ತಂಡ, ಇಂಡಿಯಾ-ಲಂಕಾ ಸರಣಿ ಆರಂಭ ಯಾವಾಗ?


ರಿತುರಾಜ್ ಗಾಯಕ್ವಾಡ್ ಅವರಿಗೂ ಅವಕಾಶ ನೀಡಬಹುದು. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿದ ಅನುಭವವಿದೆ. ರಿತುರಾಜ್ 36 ಪಂದ್ಯಗಳಲ್ಲಿ 1 ಶತಕದೊಂದಿಗೆ 1207 ರನ್ ಗಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸಂಜು ಸ್ಯಾಮ್ಸನ್ ಅವರ ಕೊನೆಯ ಹೆಸರು. ಇನ್ನು ಇಶಾನ್ ಜೊತೆಗಿನ ಮೊದಲ ಪಂದ್ಯದಲ್ಲಿ ಟೀಂ ಮ್ಯಾನೇಜ್‌ಮೆಂಟ್ ಯಾರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ಭಾರತಕ್ಕೆ ಬಂದಿಳಿದ ಶ್ರೀಲಂಕಾ:


ಇನ್ನು, ಏಕದಿನ ಮತ್ತು ಟಿ20 ಸರಣಿಗಾಗಿ ಶ್ರೀಲಂಕಾ ತಂಡವು ಭಾರತಕ್ಕೆ ಬಂದಿಳಿದಿದೆ. ಪ್ರವಾಸಿ ತಂಡ ಭಾನುವಾರದಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಲಿದೆ. ಶ್ರೀಲಂಕಾ ತನ್ನ T20 ಮತ್ತು ODI ತಂಡವನ್ನು ಡಿಸೆಂಬರ್ 28ರಂದು ಪ್ರಕಟಿಸಿತು. ಅವಿಷ್ಕಾ ಫೆರ್ನಾಂಡೊ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ, ವನಿಂದು ಹಸರಂಗ ಅವರನ್ನು ಟಿ20 ಮತ್ತು ಕುಶಾಲ್ ಮೆಂಡಿಸ್ ಏಕದಿನ ಸರಣಿಗೆ ಉಪನಾಯಕರನ್ನಾಗಿ ಮಾಡಲಾಗಿದೆ. ಎರಡೂ ತಂಡಗಳ ಕಮಾಂಡ್ ದಸುನ್ ಶನಕ ಅವರ ಕೈಯಲ್ಲಿರಲಿದೆ.


ಭಾರತೀಯ T20 ತಂಡ:


ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

Published by:shrikrishna bhat
First published: