• Home
  • »
  • News
  • »
  • sports
  • »
  • IND vs SL ODI: ಟಾಸ್​ ಗೆದ್ದ ಶ್ರೀಲಂಕಾ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ 1 ಬದಲಾವಣೆ; ಯಾರು ಔಟ್​? ಯಾರು ಇನ್​?

IND vs SL ODI: ಟಾಸ್​ ಗೆದ್ದ ಶ್ರೀಲಂಕಾ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ 1 ಬದಲಾವಣೆ; ಯಾರು ಔಟ್​? ಯಾರು ಇನ್​?

IND vs SL ODI

IND vs SL ODI

IND vs SL ODI: ಕೋಲ್ಕತ್ತಾದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶನಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Share this:

ಕೋಲ್ಕತ್ತಾದಲ್ಲಿ ಭಾರತ ಮತ್ತು ಶ್ರೀಲಂಕಾ (IND vs SL) ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ದಸುನ್ ಶನಕ (Dasun Shanaka) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಭಾರತ ತಂಡದಲ್ಲಿ (Team India) ಒಂದು ಬದಲಾವಣೆಯಾದ್ದು, ಯುಜುವೇಂದ್ರ ಚಹಾಲ್ ಬದಲಿಗೆ ಕುಲದೀಪ್ ಯಾದವ್‌ಗೆ ಅವಕಾಶ ನೀಡಲಾಗಿದೆ. ಅದೇ ಸಮಯದಲ್ಲಿ ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ದಿಲ್ಶಾನ್ ಮಧುಶಂಕ ಭುಜದ ನೋವಿನಿಂದಾಗಿ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ನುವೆಂದು ಫರ್ನಾಂಡೊ ಅವರನ್ನು ಸೇರಿಸಿಕೊಳ್ಳಲಾಗಿದೆ.


ಈಡನ್​ ದಾಖಲೆ:


ಭಾರತ ಈಡನ್ ಗಾರ್ಡನ್‌ನಲ್ಲಿ ಒಟ್ಟಾರೆ 23 ODI ಪಂದ್ಯಗಳನ್ನು ಆಡಿದೆ ಅಲ್ಲಿ ಅದು 12 ಗೆದ್ದಿದೆ ಮತ್ತು ಟೀಮ್ ಇಂಡಿಯಾ 8 ಪಂದ್ಯಗಳಲ್ಲಿ ಸೋತಿದೆ. ಪಂದ್ಯವು ಅನಿರ್ದಿಷ್ಟವಾಗಿದೆ. ಅದೇ ಸಮಯದಲ್ಲಿ, 2 ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಈ ಮೈದಾನದಲ್ಲಿ ಉಭಯ ತಂಡಗಳು 5 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿದೆ. ಭಾರತ 3 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ಒಂದು ಗೆಲುವು ಸಾಧಿಸಿದೆ. ಒಂದು ಪಂದ್ಯ ಅನಿರ್ದಿಷ್ಟವಾಗಿದೆ.



ಮತ್ತೆ ಅಬ್ಬರಿಸುತ್ತಾರಾ ಕೊಹ್ಲಿ?:


ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಅಗ್ರ 3 ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಮತ್ತು ಓಪನರ್ ಶುಭಮನ್ ಗಿಲ್ ಅರ್ಧಶತಕ ಇನಿಂಗ್ಸ್ ಆಡಿದರೆ ವಿರಾಟ್ ಕೊಹ್ಲಿ ಬಿರುಸಿನ ಶತಕ ಗಳಿಸಿದರು. ಮೂವರೂ ಶ್ರೀಲಂಕಾ ಬೌಲರ್‌ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೋಲ್ಕತ್ತಾ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಫಾರ್ಮ್‌ಗೆ ಮರಳಿರುವುದು ಶುಭ ಸೂಚನೆ. ಎಂಟು ವರ್ಷಗಳ ಹಿಂದೆ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ ರೋಹಿತ್ 264 ರನ್ ಗಳಿಸಿದ್ದರು. ಅವರು 2020ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ODI ಶತಕವನ್ನು ಗಳಿಸಿದ್ದರು.


ಏಕದಿನ ಪಂದ್ಯಗಳನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಇನ್ನು, ಪಂದ್ಯದ ಸಂಪೂರ್ಣ ಮಾಹಿತಿಗಾಗಿ News18 Kannada ವೆಬ್​ಸೈಟ್​ ಅನುಸರಿಸಿ.


ಇದನ್ನೂ ಓದಿ: Prithvi Shaw: 49 ಬೌಂಡರಿ, 4 ಸಿಕ್ಸರ್, 400 ಜಸ್ಟ್ ಮಿಸ್! ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರ


IND vs SL ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11:  ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, KL ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಕುಲ್ದೀಪ್ ಯಾದವ್.

Published by:shrikrishna bhat
First published: