ಭಾರತ ಮತ್ತು ಶ್ರೀಲಂಕಾ ನಡುವಿನ ಕೊನೆಯ ಏಕದಿನ ಪಂದ್ಯವು (Ind vs Sl) ಇಂ ದು ತಿರುವನಂತಪುರದಲ್ಲಿ ನಡೆಯಲಿದೆ. ಟೀಂ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ಲಂಕಾ ತಂಡವನ್ನು ಸೋಲಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಲು ಭರ್ಜರಿಯಾಗಿ ಸಿದ್ಧವಾಗಿದೆ. ಭಾರತ ತಂಡ (Team India) ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಈಗಾಗಲೇ ಸರಣಿ ಗೆದ್ದುಕೊಂಡಿದೆ. ಇಂದಿನ ಮೂರನೇ ಏಕದಿನ ಪಂದ್ಯ ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Greenfield International Stadium) ನಡೆಯಲಿದೆ. ಹಾಗಾದರೆ ತಿರುವನಂತಪುರಂ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ ಮತ್ತು ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ ಬನ್ನಿ.
ಪಂದ್ಯದ ವಿವರ:
ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯವು ಇಂದು ತಿರುವನಂತಪುರಂನಲ್ಲಿರುವ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1:30 ISTಗೆ ಪ್ರಾರಂಭವಾಗುತ್ತವೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಇನ್ನು, ಪಂದ್ಯದ ಸಂಪೂರ್ಣ ಮಾಹಿತಿಗಾಗಿ News18 Kannada ವೆಬ್ಸೈಟ್ ಅನುಸರಿಸಿ.
ಪಿಚ್ ವರದಿ:
ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಆದರೂ ಸಹ ಈ ಮೈದಾನದಲ್ಲಿ ಸ್ಪಿನ್ ಬೌಲರ್ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಒಬ್ಬರೇ 4 ವಿಕೆಟ್ ಪಡೆದು ಮಿಂಚಿದ್ದರು. ಆರಂಭಿಕ ಓವರ್ಗಳಲ್ಲಿ, ವೇಗಿಗಳು ಚೆಂಡನ್ನು ಸ್ವಿಂಗ್ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಈ ಮೈದಾನದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ ಕೇವಲ 1 ಏಕದಿನ ಪಂದ್ಯವನ್ನಾಡಿದೆ. ಅವರು 2018ರಲ್ಲಿ ಕೊನೆಯ ಬಾರಿಗೆ ಈ ಮೈದಾನದಲ್ಲಿ ವೆಸ್ಟ್ ಇಂಡೀಸ್ ಅನ್ನು 9 ವಿಕೆಟ್ಗಳಿಂದ ಸೋಲಿಸಿತ್ತು. ಕಳೆದ ವರ್ಷ ಇದೇ ಮೈದಾನದಲ್ಲಿ ಟೀಂ ಇಂಡಿಯಾ ಮತ್ತು ಸೌತ್ ನಡುವೆ ಟಿ20 ಪಂದ್ಯ ನಡೆದಿದ್ದು, ಇದರಲ್ಲಿ ಭಾರತ 8 ವಿಕೆಟ್ಗಳ ಜಯ ಸಾಧಿಸಿತ್ತು.
ಇದನ್ನೂ ಓದಿ: ODI World Cup 2023: ತಾಲಿಬಾನ್ನಿಂದಾಗಿ ಆಸ್ಟ್ರೇಲಿಯಾ ಸರಣಿ ರದ್ದು, ವಿಶ್ವಕಪ್ಗೆ ಬರೋದು ಡೌಟ್! ಭಾರತಕ್ಕೂ ಬಿಗ್ ಶಾಕ್
IND vs SL ಹೆಡ್ ಟು ಹೆಡ್:
ಭಾರತ ಮತ್ತು ಶ್ರೀಲಂಕಾ ಈವರೆಗೂ ಒಟ್ಟು 164 ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 95 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 57 ಪಂದ್ಯಗಳಲ್ಲಿ ಜಯ ಗಳಿಸಿದೆ. ಉಳಿದಂತೆ 11 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಒಂದು ಪಂದ್ಯ ಟೈ ಗೊಂಡಿತ್ತು. ಇನ್ನು, ಕಳೆದ 2 ಪಂದ್ಯಗಳನ್ನೂ ಗೆದ್ದಿರುವ ಭಾರತ ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ.
IND vs SL ಸಂಭಾವ್ಯ ಪ್ಲೇಯಿಂಗ್ 11:
ಭಾರತ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (c), ಶುಭಮನ್ ಗಿಲ್ / ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (WK), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್, ನುವಾನಿಡು ಫೆರ್ನಾಂಡೊ, ಅವಿಷ್ಕಾ ಫೆರ್ನಾಂಡೊ, ಚರಿತ್ ಅಸ್ಲಂಕಾ, ಧನಂಜಯ್ ಡಿಸಿಲ್ವಾ, ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ದುನಿತ್ ವೆಲಾಲ್ಗೆ, ಲಹಿರು ಕುಮಾರ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ